AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಹೆಚ್​​​​ಬಿ ಬಂಡೇಮಠ ಲೇಔಟ್​​​: ಮುಂದೆ ಸಾಗದ ಕಾಮಗಾರಿ, ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ, ನಾಗರಿಕರಿಗೆ ನಿತ್ಯ ನರಕಯಾತನೆ

KHB Bandemutt Layout : ಗುತ್ತಿಗೆದಾರ ಕಡೆಯಿಂದ ಬರುವ ಮೇಲ್ವಿಚಾರಕರನ್ನು ಏಕೆ ಇಷ್ಟು ವಿಳಂಬ ಎಂದು ಕೇಳಿದರೆ, ಇನ್ನೂ ನಮಗೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಹೀಗಾಗಿ ನಿಧಾನವಾಗಿ ಕೆಲಸ ಮಾಡುವಂತೆ ಬಿಬಿಎಂಪಿ ಎಂಜಿನಿಯರ್ ಗಳೇ ತಿಳಿಸಿದ್ದಾರೆ ಎನ್ನುತ್ತಾರೆ.

ಕೆಹೆಚ್​​​​ಬಿ ಬಂಡೇಮಠ ಲೇಔಟ್​​​: ಮುಂದೆ ಸಾಗದ ಕಾಮಗಾರಿ, ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ, ನಾಗರಿಕರಿಗೆ ನಿತ್ಯ ನರಕಯಾತನೆ
ಕೆಹೆಚ್​​​​ಬಿ ಬಂಡೇಮಠ: ಮುಂದೆ ಸಾಗದ ಕಾಮಗಾರಿ
TV9 Web
| Edited By: |

Updated on: May 08, 2023 | 1:31 PM

Share

ಕೆಂಗೇರಿ (Kengeri) ಬಂಡೇಮಠ ವ್ಯಾಪ್ತಿಯಲ್ಲಿರುವ (Bandemutt Layout) ಕರ್ನಾಟಕ ಹೌಸಿಂಗ್​ ಬೋರ್ಡ್​​​ (ಕೆ.ಹೆಚ್.ಬಿ -KHB) ಬಡಾವಣೆಯನ್ನು ಬೆಂಗಳೂರು ಬೃಹತ್​​ ಮಹಾನಗರ ಪಾಲಿಕೆಗೆ (ಬಿಬಿಎಂಪಿ -BBMP) ಹಸ್ತಾಂತರಿಸಿಕೊಂಡು ತಕ್ಷಣವೇ ಮೂಲಸೌಕರ್ಯ ಕಲ್ಪಿಸುವಂತೆ ಸ್ವತಃ ವಿಧಾನಸಭೆಯ ಅರ್ಜಿಗಳ ಸಮಿತಿ ಸೂಚಿಸಿ 6 ತಿಂಗಳೇ ಕಳೆದರೂ ಇಲ್ಲಿನ ನಿವಾಸಿಗಳಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ. ವಿಧಾನಸಭೆ ಸಮಿತಿಯ ಆದೇಶದಂತೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಮಳೆ ನೀರು ಚರಂಡಿ, ಉದ್ಯಾನ ಮತ್ತು ರಸ್ತೆ ಮರು ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿತ್ತು. ಮಾರ್ಚ್ 17ರಂದೇ ಟೆಂಡರ್ ತೆರೆದು, ಏಪ್ರಿಲ್ 3ರಿಂದ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಆರಂಭವಾಗಿ ತಿಂಗಳಾದರೂ ಇನ್ನೂ ಒಂದೇ ಒಂದು ರಸ್ತೆಗೂ ಡಾಂಬರು ಹಾಕಿಲ್ಲ. ಮನೆಯೆಲ್ಲಾ ಧೂಳು ಮಯವಾಗಿದ್ದು, ರಸ್ತೆಯಲ್ಲಿ, ಮಣ್ಣಿನ ರಾಶಿ ಹಾಗೇ ಬಿದ್ದಿದೆ. ಜನ ಸಂಕಷ್ಟ ಅನುಭವಿಸುವಂತಾಗಿದೆ.

ಗುತ್ತಿಗೆದಾರ ಕಡೆಯಿಂದ ಬರುವ ಮೇಲ್ವಿಚಾರಕರನ್ನು ಏಕೆ ಇಷ್ಟು ವಿಳಂಬ ಎಂದು ಕೇಳಿದರೆ, ಇನ್ನೂ ನಮಗೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಚುನಾವಣೆ ನೀತಿ ಸಂಹಿತೆ ಇದೆ. ಚುನಾವಣೆ ಮುಗಿದ ಮೇಲೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ನಿಧಾನವಾಗಿ ಕೆಲಸ ಮಾಡುವಂತೆ ಬಿಬಿಎಂಪಿ ಎಂಜಿನಿಯರ್ ಗಳೇ ತಿಳಿಸಿದ್ದಾರೆ ಎನ್ನುತ್ತಾರೆ.

ಬಿಬಿಎಂಪಿ ಎಂಜಿನಿಯರ್ ಗಳ ಬೇಜವಾಬ್ದಾರಿತನಕ್ಕೆ ಬಡಾವಣೆಯ ವೃದ್ಧರು, ಮಹಿಳೆಯರು, ಮಕ್ಕಳು ಬವಣೆ ಅನುಭವಿಸುವಂತಾಗಿದೆ. ಈಗ ಮಳೆಯೂ ಆರಂಭವಾಗಿದ್ದು, ಗುಂಡಿ ಬಿದ್ದಿರುವ ಎಲ್ಲ ರಸ್ತೆಗಳಲ್ಲಿ ನೀರು ನಿಂತಿದೆ. ಮಳೆ ನೀರು ಚರಂಡಿಯ ಹೂಳನ್ನು ಅರ್ಧ ಮಾತ್ರ ತೆಗೆದಿದ್ದು, ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿ ಡೆಂಘ್ಯೂ, ಚಿಕನ್ ಗುನ್ಯ ರೋಗದ ಭೀತಿ ಉಂಟಾಗಿದೆ. ಪ್ರಚಾರಕ್ಕಾಗಿ ಬಡಾವಣೆಗೆ ಬರುತ್ತಿರುವ ಇಲ್ಲಿನ ಶಾಸಕರಿಗೆ ಅಭ್ಯರ್ಥಿಗಳಿಗೆ ನಮ್ಮ ಸಂಕಷ್ಟ ಕಾಣುತ್ತಿಲ್ಲವೇ ಎಂದು ಇಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ. ಕೆಹೆಚ್​​​​ಬಿ ಬಡಾವಣೆ ನಾಗರಿಕರ ಸಂಕಷ್ಟಕ್ಕೆ ಪರಿಹಾರವೇ ಇಲ್ಲವೇ? ಎಂದು ಕೆಹೆಚ್​​​​ಬಿ ಬಡಾವಣೆ ನಾಗರಿಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಟಿ ಎಂ ಸತೀಶ್ ಪ್ರಶ್ನಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ