ಸರ್ಕಾರಿ ಜಮೀನಿಗೆ ಲಕ್ಷ ಲಕ್ಷ ಹಣ ಪಡೆದು ಜನರಿಗೆ ಮಕ್ಮಲ್ ಟೋಪಿ: ವಂಚನೆಯಾದವರಿಂದ ಸೈಟ್ ಬಳಿ ಧರಣಿ
ಕಡಿಮೆ ಬೆಲೆಗೆ ಸೈಟ್ ಸಿಗುತ್ತೆ ಅಂತಾ ಆಸೆ ಬಿದ್ದ 98 ಮಂದಿ ಇದೀಗ ಸೈಟ್ ಕಳೆದುಕೊಂಡು ಬೀದಿಗೆ ಬಿದಿದ್ದು ಪ್ರತಿಭಟನೆಯ ಹಾದಿ ಹಿಡಿದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಬಾಗಲೂರು ಸಮೀಪದ ಮರಳುಕುಂಟೆ ಗ್ರಾಮದ ಬಳಿ ನಡೆದಿದೆ. ಲಕ್ಷ ಲಕ್ಷ ಹಣ ಪಡೆದು ಸೈಟ್ ಮಾರಾಟ ಮಾಡಿದ್ದ ಮಾಲೀಕರೆ ಬಡಾವಣೆಯನ್ನ ರಾತ್ರೋ ರಾತ್ರಿ ಡೆಮೊಲಿಷ್ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ, ಸೆಪ್ಟೆಂಬರ್ 3: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಬಾಗಲೂರು ಸಮೀಪದ ಮರಳುಕುಂಟೆ ಗ್ರಾಮದ ಬಳಿ ಕಡಿಮೆ ಬೆಲೆಗೆ ಸೈಟ್ (site) ಸಿಗುತ್ತೆ ಅಂತಾ ಆಸೆ ಬಿದ್ದ 98 ಮಂದಿ ಇದೀಗ ಸೈಟ್ ಕಳೆದುಕೊಂಡು ಬೀದಿಗೆ ಬಿದಿದ್ದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಇವರಿಗೆಲ್ಲ ಲಕ್ಷ ಲಕ್ಷ ಹಣ ಪಡೆದು ಸೈಟ್ ಮಾರಾಟ ಮಾಡಿದ್ದ ಮಾಲೀಕರೆ ಬಡಾವಣೆಯನ್ನ ರಾತ್ರೋ ರಾತ್ರಿ ಡೆಮೊಲಿಷ್ ಮಾಡಿದ್ದಾರೆ. ಇದರಿಂದ ಕೆರಳಿದ ನಿವೇಶನ ಖರೀದಿದಾರರು ಮೋಸ ಹೋಗಿದ್ದ ಜಾಗದಲ್ಲಿ ತಮ್ಮ ಅಳತೆಯ ನಿವೇಶನದ ಗುರ್ತು ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಮುನಿಶ್ಯಾಮಪ್ಪ ಹಾಗೂ ಜಾನ್ಸಿರಾಣಿ ಎಂಬ ಇಬ್ಬರು ಮರಳುಕುಂಟೆಯ ಸ.ನಂ.50ಕ್ಕೆ ಸೇರಿದ 4ಎಕರೆ ಗ್ರಾಂಟ್ ಜಮೀನಲ್ಲಿ ಗಂಗಾಧರ್ ಜೊತೆ ಗೂಡಿ ಲೇಔಟ್ ನಿರ್ಮಿಸಿ ಸೈಟ್ ಮಾರಿದ್ದರಂತೆ. 2016-17 ರಲ್ಲಿ ಕೇವಲ ಒಂದು ಅಡಿ 500 ರೂಪಾಯಿಗೆ 30/40 ಸೈಟ್ ಸಿಗುತ್ತೆ ಎಂಬ ಅಸೆಗೆ ಬಿದ್ದ ಅಮಾಯಕ ಜನ ತೆಗೆದುಕೊಂಡು ಮೋಸ ಹೋಗಿದ್ದಾರೆ. ಸೂಕ್ತ ದಾಖಲೆ ನೋಡದೆ ತಲಾ 7 ಲಕ್ಷದಂತೆ 98 ಸೈಟ್ ಖರೀದಿಸಿ ಇದೀಗ ಬೀದಿಗೆ ಬಿದ್ದಿದ್ದಾರೆ. ಇದರಿಂದ ನೊಂದವರು ಸ್ಥಳದಲ್ಲಿ ಧರಣಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ: ಅಯ್ಯೋ! ಬರೋಬ್ಬರಿ 33 ಲಕ್ಷ ಮೌಲ್ಯದ ಎಣ್ಣೆ ಚರಂಡಿ ಪಾಲು
ಅಂದಹಾಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭಾ ಕ್ಷೆತ್ರದ ಮರಳುಕುಂಟೆಯ ಸ.ನಂ.50 ರಲ್ಲಿ ನಾಲ್ಕು ಎಕರೆ ಜಾಗ ಮೊದಲು ಸರ್ಕಾರಿ ಗೋಮಾಳವಾಗಿತ್ತು. ಇದರಲ್ಲಿ ಉಳುಮೆ ಮಾಡ್ತಿದ್ದ ಗುಳ್ಳುಪಾಪಯ್ಯನಿಗೆ ಸರ್ಕಾರ ಮಂಜೂರು ಮಾಡಿತ್ತು. ನಂತರ ಈ ಜಮೀನನ್ನು ಮುನಿಶ್ಯಾಮಪ್ಪ, ವೀರಕೆಂಪಯ್ಯ ಖರೀದಿಸಿದ್ದರು. 2008ರಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಮರಳಕುಂಟೆ ಸ.ನಂ.50ಕ್ಕೆ ಸಂಬಂಧಿಸಿದ ಸೂಕ್ತ ದಾಕಲೆ ಒದಗಿಸಿ ಎಂದಾಗ ಮುನಿಶ್ಯಾಮಪ್ಪ ಸಮರ್ಪಕ ದಾಖಲೆ ನೀಡಿಲ್ಲವಂತೆ. ಆದ್ದರಿಂದ ಸರ್ಕಾರ ಈ ಜಾಗವನ್ನು ವಾಪಸ್ ಪಡೆದಿತ್ತು.
ಇಷ್ಟೆಲ್ಲಾ ಗೊತ್ತಿದ್ದರೂ ಮುನಿಶ್ಯಾಮಪ್ಪ- ವೀರಕೆಂಪಯ್ಯ ಡೆವಲಪರ್ ಗಂಗಾಧರ್ ಜೊತೆ ಸೇರಿ ಝಾನ್ಸಿರಾಣಿಗೆ ಜಿಪಿಎ ಮಾಡಿಸಿ ಲೇಔಟ್ ಮಾಡಿ ಸೈಟ್ ಮಾರಿದ್ರಂತೆ. 2020ರಲ್ಲಿ ಮತ್ತೆ ಜಿಲ್ಲಾಧಿಕಾರಿ ಮರಳಕುಂಟೆಯ ಸ.ನಂ.50 ರ ಸ್ಥಳ ಪರಿಶೀಲನೆಗೆ ಬರುವ ನೋಟೀಸ್ ನೀಡಿದ್ದರು. ಲೇಔಟ್ ಮಾಡಿ ಮಾರಿದ್ದ ಕಾರಣ ಕ್ರಮಿನಲ್ ಕೇಸ್ ಬೀಳುವ ಆತಂಕದಲ್ಲಿ ಕೆಲವರು ರಾತ್ರೋ ರಾತ್ರಿ ಬಡಾವಣೆ ಡೆಮೊಲಿಷನ್ ಮಾಡಿದ್ದಾರೆ ಅಂತ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಒಡಿಸ್ಸಾ ಮೂಲದ ಡ್ರಗ್ ಪೆಡ್ಲರ್ ಬಂಧನ, ಮುಂಬೈ ಸಿಐಡಿ ಪೊಲೀಸರೆಂದು ಹೇಳಿ ಕರೆಮಾಡಿ ವಂಚನೆ; ದೂರು ದಾಖಲು
ಈ ಬಗ್ಗೆ ಮುನಿಶ್ಯಾಮಪ್ಪ ಕುಟುಂಬಸ್ಥರನ್ನ ಕೇಳಿದ್ರೆ ಈ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು ಕಾನೂನು ಹೋರಾಟ ಮಾಡ್ತೀವಿ ನಾವು ಯಾರಿಗೂ ಮೋಸ ಮಾಡಿಲ್ಲ ಅಂತಿದ್ದು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಬೇಕು ಅಂತಾ ಬೇರೆಡೆಯಿಂದ ಬಂದು ದುಡಿದು ಕೂಡಿಟ್ಟಿದ್ದ ಹಣದಲ್ಲಿ ನಿವೇಶನ ತೆಗೆದುಕೊಂಡಿದ್ದ 98 ಮಂದಿಗೆ ಇದೀಗ ದಿಕ್ಕು ತೋಚದಂತಾಗಿದೆ. ಇನ್ನೂ ರಾಜ್ಯದ ಕಂದಾಯ ಸಚಿವರ ತವರಿನಲ್ಲೆ ಇಂತಹ ಅನ್ಯಾಯ ನಡೆದಿದ್ದು ಸಚಿವರು ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.