ಪ್ರತ್ಯೇಕ ಪ್ರಕರಣ: ಒಡಿಸ್ಸಾ ಮೂಲದ ಡ್ರಗ್ ಪೆಡ್ಲರ್ ಬಂಧನ, ಮುಂಬೈ ಸಿಐಡಿ ಪೊಲೀಸರೆಂದು ಹೇಳಿ ಕರೆಮಾಡಿ ವಂಚನೆ; ದೂರು ದಾಖಲು
ಮುಂಬೈ ಸಿಐಡಿ ಪೊಲೀಸರೆಂದು ಹೇಳಿ ಕರೆಮಾಡಿ ವಂಚನೆ ಮಾಡುತ್ತಿದ್ದ ಸೈಬರ್ ಕಳ್ಳರ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಕೋಲೇಔಟ್ ನಿವಾಸಿ ಸುರೇಶ್ ಬಾಬು ಅವರಿಗೆ, ನಾವು ಮುಂಬೈ ಸಿಐಡಿಯಿಂದ ಕರೆ ಮಾಡಿ ವಂಚನೆ ಎಸಗಿದ್ದಾರೆ.
ನೆಲಮಂಗಲ: ಒಡಿಸ್ಸಾ ಮೂಲದ ಡ್ರಗ್ ಪೆಡ್ಲರ್ನನ್ನು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ಟೌನ್ ಪೊಲೀಸರು ಬಂಧಿಸಿದ್ದಾರೆ. ಅಲೇಖ್ ಸಾಹು (32) ಬಂಧಿತ ಆರೋಪಿ. ಆರೋಪಿಯಿಂದ ಅರ್ಧ ಕೆಜಿಯಷ್ಟು ಗಾಂಜಾ, 500 ರೂ. ನಗದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ PHP ಸೆಕ್ಯುರಿಟಿ ಕಂಪನಿಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದನು. ಈತ ಹೊಸಕೋಟೆಯಿಂದ ಡ್ರಗ್ಸ್ ತಂದು ಹೊರ ರಾಜ್ಯದ ವ್ಯಕ್ತಿಗಳಿಗೆ, ಲಾರಿ ಚಾಲಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು.
ಆರೋಪಿ ನೆಲಮಂಗಲದ ಆಂಜನೇಯ ದೇವಾಲಯದ ಹಿಂಭಾಗದಲ್ಲಿ ಗಿರಾಕಿಗಳಿಗೆ ಮಾರುತ್ತಿದ್ದನು. ಗಿರಾಕಿಗಳು ದೇವಲಕ್ಕೆ ಬರುವ ಸೋಗಿನಲ್ಲಿ ಬಂದು ಗಾಂಜಾ ಪಡೆಯುತ್ತಿದ್ದರು. ಆರೋಪಿ ಅಲೇಖ್ ಸಾಹು ಅವಶ್ಯಕತೆ ಇರುವಷ್ಟೇ ಗಾಂಜಾ ತಂದು ಮಾರಟ ಮಾಡುತ್ತಿದ್ದನು. ಖಚಿತವಾದ ಮಾಹಿತಿಯೊಂದಿಗೆ ಇನ್ಸ್ಪೆಕ್ಟರ್ ಶಶಿಧರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಮುಂಬೈ ಸಿಐಡಿ ಪೊಲೀಸರೆಂದು ಹೇಳಿ ಕರೆಮಾಡಿ ವಂಚನೆ
ಮುಂಬೈ ಸಿಐಡಿ ಪೊಲೀಸರೆಂದು ಹೇಳಿ ಕರೆಮಾಡಿ ವಂಚನೆ ಮಾಡುತ್ತಿದ್ದ ಸೈಬರ್ ಕಳ್ಳರ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಕೋಲೇಔಟ್ ನಿವಾಸಿ ಸುರೇಶ್ ಬಾಬು ಅವರಿಗೆ, ನಾವು ಮುಂಬೈ ಸಿಐಡಿಯಿಂದ ಕರೆ ಮಾಡುತ್ತಿರುವುದು ನಿಮ್ಮ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆ ಎಂದು ವಂಚಕರು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಡ್ರಗ್ ಪೆಡ್ಲರ್ನನ್ನು ಬಂಧಿಸಿದ ಸಿಸಿಬಿ, 2.50 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ
ಅಲ್ಲದೇ ಹಣ ಸೇಫ್ ಆಗಿರಲು ಬೇರೊಂದು ಅಕೌಂಟ್ಗೆ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ಇದಕ್ಕೆ ಸುರೇಶ್ ಬಾಬು ಅವರು ಒಪ್ಪಿದ್ದಾರೆ. ಬಳಿಕ ವಂಚಕರು ತಾವು ಹೇಳಿದ ಅಕೌಂಟ್ಗೆ ಹಣ ವರ್ಗಾವಣೆ ಮಾಡಿ ಅಂತ ಸುರೇಶ್ ಬಾಬು ಅವರಿಗೆ ಅಕೌಂಟ್ ನಂ.ನೀಡಿದ್ದಾರೆ.
ನಂತರ ಸುರೇಶ್ ಬಾಬು ಅವರು ಐದು ಲಕ್ಷಕ್ಕೂ ಅಧಿಕ ಹಣವನ್ನು ಆರೋಪಿಗಳು ಹೇಳಿದ ಅಕೌಂಟ್ಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಸುರೇಶ್ ಬಾಬು ವಂಚಕರಿಗೆ ಕರೆ ಮಾಡಿದ್ರೆ ಆರೋಪಿಗಳು ಪತ್ತೆ ಇಲ್ಲ. ವಂಚನೆಗೆ ಒಳಗಾದ ಸುರೇಶ್ ಬಾಬು ಮೈಕೋ ಲೇಔಟ್ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ