ಸಿನಿಮೀಯ ರೀತಿಯಲ್ಲಿ ದರೋಡೆ: ಮನೆ ಬಾಡಿಗೆ ನೆಪದಲ್ಲಿ ಬಿಲ್ದಿಂಗ್ ಮಾಲೀಕಳ ಕತ್ತಿಗೆ ಚಾಕು ಇಟ್ಟು ಮನೆ ದೋಚಿದ ಕಿರಾತಕರು
ಬಾಡಿಗೆ ಮನೆ ಕೇಳೋ ನೆಪದಲ್ಲಿ ಬಂದಿದ್ದರು. ಮನೆ ಇಷ್ಟ ಆಗಿದೆ, ಅಡ್ವಾನ್ಸ್ ಕೊಡುತ್ತೇವೆ ಎಂದು ಮತ್ತೊಂದು ಬಾಡಿಗೆ ಮನೆಯ ಒಳ ಹೋಗಿದ್ದವರು, ಮನೆಯಲ್ಲಿದ್ದವರನ್ನ ಕೈಕಾಲು ಕಟ್ಟಿ ಸಿನಿಮೀಯಾ ರೀತಿಯಲ್ಲಿ ದರೋಡೆ ಮಾಡಿದ್ದಾರೆ.
ನೆಲಮಂಗಲ: ಮನೆಗೆ ಬಾಡಿಗೆ ಕೇಳೋ ನೆಪದಲ್ಲಿ ನಾಲ್ಕು ಜನ ಕಿರಾತಕರು ಬಿಲ್ದಿಂಗ್‌ಗೆ ನುಗ್ಗಿದ್ದು ಮನೆ ನೋಡುವ ನೆಪದಲ್ಲಿ ಒಳ ಬಂದು ಸಿನಿಮೀಯಾ ರೀತಿಯಲ್ಲಿ ಮನೆಯಲ್ಲಿದ್ದ ಮಹಿಳೆಯರ ಕುತ್ತಿಗೆಗೆ ಚಾಕು ಇಟ್ಟು ಮನೆಯಲ್ಲಿದ್ದ ನಗದು ಚಿನ್ನಾಭರಣಗಳನ್ನ ದರೋಡೆ(Robbery) ಮಾಡಿ ಎಸ್ಕೇಪ್ ಆಗಿದ್ದಾರೆ. ಮಟ ಮಟ ಮಧ್ಯಾಹ್ನ ದರೋಡೆಗೆಂದೆ ಹೊಂಚು ಹಾಕಿದ್ದ ನಾಲ್ಕು ಜನರ ಗ್ಯಾಂಗ್ ಎರಡು ಬೈಕ್‌ನಲ್ಲಿ ಬಾಡಿಗೆ ಮನೆ ಕೇಳೋ ನೆಪದಲ್ಲಿ ಬಂದಿದ್ದರು. ಮನೆ ಇಷ್ಟ ಆಗಿದೆ, ಅಡ್ವಾನ್ಸ್ ಕೊಡುತ್ತೇವೆ ಎಂದು ಮತ್ತೊಂದು ಬಾಡಿಗೆ ಮನೆಯ ಒಳ ಹೋಗಿದ್ದವರು, ಮನೆಯಲ್ಲಿದ್ದವರನ್ನ ಕೈಕಾಲು ಕಟ್ಟಿ ಸಿನಿಮೀಯಾ ರೀತಿಯಲ್ಲಿ ದರೋಡೆ ಮಾಡಿದ್ದಾರೆ. ಇಂತಹ ಸಿನಿಮೀಯಾ ರೀತಿಯ ಘಟನೆ ನಡೆದಿರೋದು ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯ ತಿಪ್ಪೇನಹಳ್ಳಿ ಮೈಸೂರು ಲ್ಯಾಂಪ್ಸ್ ಬಡಾವಣೆಯಲ್ಲಿ. ಸುನಂದ ಎನ್ನುವವರ ಮನೆಗೆ ನುಗ್ಗಿದ ನಾಲ್ಕು ಜನ ದರೋಡೆಕೋರರು ಮನೆಯಲ್ಲಿನ ಚಿನ್ನಾಭರಣವನ್ನೆಲ್ಲ ದೋಚಿ ಕ್ಷಣಮಾತ್ರದಲ್ಲೆ ಪರಾರಿಯಾಗುದ್ದಾರೆ.
ಇನ್ನೂ ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಸುನಂದ ಬಾಡಿಗೆಗೆ ಇದ್ದು, ಅದೇ ಮಹಡಿಯಲ್ಲೇ ಇದ್ದ ಮತ್ತೊಂದು ಖಾಲಿ ಮನೆ ವಿಚಾರಿಸಲು ಆ ನಾಲ್ಕು ಜನ ಮುಂಜಾನೆ ಒಮ್ಮೆ ಬಂದು ನೋಡಿದ್ದಾರೆ. ಮನೆಯಲ್ಲಿ ಕೇವಲ ಮಹಿಳೆಯರೇ ಇದ್ದುದ್ದನ್ನ ಕನ್ಫರ್ಮ್ ಮಾಡಿಕೊಂಡ ಗ್ಯಾಂಗ್ ಮಧ್ಯಾಹ್ನ ಮತ್ತೆ ಅಡ್ವಾನ್ಸ್ ಕೊಡುತ್ತೇವೆ ಎಂದು ಬಂದಿದ್ದರು. ಸರಿ ಬನ್ನಿ ಒಳಗೆ ಎನ್ನುತ್ತಿದ್ದಂತೆ ಮೃಗಗಳಂತೆ ಎರಗಿದ ಆ ಗ್ಯಾಂಗ್ ಮನೆ ಮಾಲೀಕಿ ಸುನಂದಮ್ಮ ಸೇರಿದಂತೆ ಅವರ ಮನೆಗೆ ಬಂದಿದ್ದ ಸಂಬಂಧಿ ಶ್ವೇತಾ ಇಬ್ಬರನ್ನು ಕೆಳಗೆ ಬೀಳಿಸಿ ಚಾಕು ಇಡಿದು ಅವರ ಮೇಲೆ ಕುಳಿತುಕೊಂಡು ಮನೆಯಲ್ಲಿದ್ದ ಮಗುವನ್ನೂ ಸಹ ಹಿಂಸಿಸಿ ಮೈಮೇಲಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಸಿದಿದ್ದಾರೆ. ಮಗುವಿನ ಚೀರಾಟ ಕೇಳಿ ಪಕ್ಕದ ಮನೆಯವರು ಈ ಮನೆ ಕಡೆ ಗಮನಿಸುತ್ತಿದ್ದಂತೆ ಮನೆಯಿಂದ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ಸುನಂದ ಅವರ ಕೈಗೆ ಚಾಕುವಿನಿಂದ ಹಲ್ಲೆಯಾಗಿದೆ. ಇದನ್ನೂ ಓದಿ: Life Insurance Policy: ಜೀವ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ಗಮನಿಸಬೇಕಾದ 3 ಪ್ರಮುಖ ಅಂಶಗಳಿವು
ಸದ್ಯ ಘಟನೆಗೆ ಸಂಬಂಧಿದಂತೆ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಕೆಲ ಸಿಸಿ ಕ್ಯಾಮೆರಾಗಳನ್ನ ಸಹ ಪರೀಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ. ಇನ್ನೂ ಕೆಲವರನ್ನ ಅನುಮಾನದ ಮೇಲೆ ವಿಚಾರಣೆ ನಡೆಸುತ್ತಿದ್ದಾರೆ.
ವರದಿ: ಮೂರ್ತಿ. ಬಿ, ಟಿವಿ9 ನೆಲಮಂಗಲ
Published On - 8:01 pm, Mon, 27 June 22