Life Insurance Policy: ಜೀವ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ಗಮನಿಸಬೇಕಾದ 3 ಪ್ರಮುಖ ಅಂಶಗಳಿವು

ಜೀವ ವಿಮೆಯನ್ನು ಖರೀದಿಸುವಾಗ ಗಮನಿಸಬೇಕಾದ ಪ್ರಮುಖ ಮೂರು ಅಂಶಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Life Insurance Policy: ಜೀವ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ಗಮನಿಸಬೇಕಾದ 3 ಪ್ರಮುಖ ಅಂಶಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 27, 2022 | 7:58 PM

ಜೀವ ವಿಮಾ ಪಾಲಿಸಿಗಳು (Life Insurance Policy) ತೆರಿಗೆ ಉಳಿಸಲು ಸಹಾಯ ಮಾಡುವ ಜತೆಗೆ ನಿಮಗೆ ಏನಾದರೂ ಅಹಿತಕರ ಘಟನೆ ಸಂಭವಿಸಿದಲ್ಲಿ ನಿಮ್ಮ ಕುಟುಂಬವನ್ನು ರಕ್ಷಿಸಲು ನಿಸ್ಸಂದೇಹವಾಗಿ ಉತ್ತಮ ಮಾರ್ಗವಾಗಿದೆ. ಜೀವ ವಿಮಾ ರಕ್ಷಣೆಯು ಪಾಲಿಸಿದಾರರ ಕುಟುಂಬಕ್ಕೆ ಅವರ ದುರಂತ ಮರಣದ ಸಂದರ್ಭದಲ್ಲಿ ಆರ್ಥಿಕ ಸಹಾಯ ಹಸ್ತವಾಗಿ ಕಾರ್ಯ ನಿರ್ವಹಿಸುತ್ತದೆ. ವಿಮಾದಾರರು ಮಾಡಿದ ನಾಮಿನಿಯು ಪಾಲಿಸಿಯ ಪ್ರಕಾರ ವಿಮಾ ಮೊತ್ತವನ್ನು ಸ್ವೀಕರಿಸುತ್ತಾರೆ. ತೆರಿಗೆ ರಿಯಾಯಿತಿಗಳ ಪ್ರಯೋಜನಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಬಹುದು ಮತ್ತು ನಿವೃತ್ತಿಯ ನಂತರ ಆರ್ಥಿಕ ಸ್ವಾತಂತ್ರ್ಯವನ್ನು ಭದ್ರಪಡಿಸುವ ಸಾಧನವಾಗಿ, ಟರ್ಮ್ ವಿಮೆಯನ್ನು ಖರೀದಿಸುವುದು ಈ ಅಂಶಗಳನ್ನು ಮಾತ್ರ ಆಧರಿಸಿರಬಾರದು. ತಮಗಾಗಿ ಅತ್ಯಂತ ಸೂಕ್ತವಾದ ಜೀವ ವಿಮಾ ಪಾಲಿಸಿಯನ್ನು ಆಯ್ಕೆ ಮಾಡುವಾಗ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಮೂರು ಅಂಶಗಳು ಇಲ್ಲಿವೆ:

ತೆರಿಗೆ ರಿಯಾಯಿತಿಗಾಗಿ ಮಾತ್ರ ಖರೀದಿಸಬೇಡಿ

ಜೀವ ವಿಮಾ ಪಾಲಿಸಿಗೆ ಪಾವತಿಸುವ ಪ್ರೀಮಿಯಂಗಳು ಸೆಕ್ಷನ್ 80C ಅಡಿಯಲ್ಲಿ ರೂ. 1.5 ಲಕ್ಷದವರೆಗೆ ಕಡಿತಕ್ಕೆ ಅರ್ಹವಾಗಿರುವುದರಿಂದ ಅನೇಕ ಜನರು ಇದನ್ನು ಕೇವಲ ತೆರಿಗೆ ಉಳಿಸುವ ಸಾಧನವೆಂದು ಭಾವಿಸುತ್ತಾರೆ. ಜೀವ ವಿಮಾ ರಕ್ಷಣೆಯ ಮುಖ್ಯ ಉದ್ದೇಶವು ತೆರಿಗೆ-ಉಳಿತಾಯವಲ್ಲ, ರಕ್ಷಣೆ ಎಂಬುದನ್ನು ಮರೆಯುತ್ತಾರೆ. ಒಂದು ವೇಳೆ ಪಾಲಿಸಿದಾರರ ಹಠಾತ್ ಮರಣದ ಸಂದರ್ಭದಲ್ಲಿ ಅವಲಂಬಿತರಿಗೆ ಹಣಕಾಸಿನ ನೆರವು ನೀಡುವ ರೀತಿಯಲ್ಲಿ ಈ ಯೋಜನೆಗಳನ್ನು ರೂಪಿಸಲಾಗಿದೆ.

ಜೀವನದ ಹಂತವನ್ನು ನೆನಪಿನಲ್ಲಿಡಿ

ಪ್ರೀಮಿಯಂಗಳು ಕಡಿಮೆ ಇರುವುದರಿಂದ ಲೈಫ್ ಕವರ್ ಅನ್ನು ಮೊದಲೇ, ಆದರೆ ಸಣ್ಣ ವಯಸ್ಸಿನಲ್ಲೇ ಖರೀದಿಸುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ಯಾವ ಪಾಲಿಸಿಯನ್ನು ಖರೀದಿಸಬೇಕೆಂದು ಆಯ್ಕೆ ಮಾಡುವಾಗ ಖರೀದಿದಾರರು ತಮ್ಮ ಜೀವನದ ಹಂತವನ್ನು ಪರಿಗಣಿಸಬೇಕು. ಇದು ದೀರ್ಘಕಾಲೀನ ಗುರಿಗಳನ್ನು ಬೆಂಬಲಿಸುತ್ತದೆ. ಜೀವ ವಿಮೆಯು ಅವಲಂಬಿತ ಕುಟುಂಬದ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಆದ್ದರಿಂದ ದೈಹಿಕವಾಗಿ ಆರೋಗ್ಯವಂತರಾಗಿ ಇರುವಾಗ ಮತ್ತು ಪ್ರೀಮಿಯಂಗಳು ತುಲನಾತ್ಮಕವಾಗಿ ಕಡಿಮೆ ಇರುವಾಗ ಚಿಕ್ಕ ವಯಸ್ಸಿನಲ್ಲಿಯೇ ಜೀವ ವಿಮಾ ಯೋಜನೆಯನ್ನು ಖರೀದಿಸುವುದು ಉತ್ತಮ. ತಡವಾಗಿ ವಿಮೆ ಪ್ರಾರಂಭವಾಗುವುದರಿಂದ ಕುಟುಂಬದ ಸಂಭವನೀಯ ವೆಚ್ಚಗಳನ್ನು ಸರಿದೂಗಿಸುವ ಹೆಚ್ಚಿನ ವ್ಯಾಪ್ತಿಯೊಂದಿಗೆ ಯೋಜನೆಯನ್ನು ಖರೀದಿಸುವುದು ಎಂದರ್ಥ, ಆದ್ದರಿಂದ ನೀವು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸುವಿರಿ.

ಸಾಕಷ್ಟು ಕವರ್ ಪಡೆಯಿರಿ

ಜೀವ ವಿಮೆಯು 5 ನಿಮಿಷಗಳ ಹೂಡಿಕೆಯಲ್ಲ. ನಿಮ್ಮ ಸಾಲಗಳು, ವಯಸ್ಸು, ಮಕ್ಕಳ ಉನ್ನತ ಶಿಕ್ಷಣ ಅಥವಾ ಮದುವೆಯ ಯೋಜನೆಗಳು, ಹಣದುಬ್ಬರ ಮುಂತಾದ ಹಲವಾರು ವಿಷಯಗಳ ಬಗ್ಗೆ ಗಮನವನ್ನು ಹೊಂದಿರಬೇಕು. ಸಂಭಾವ್ಯ ಪಾಲಿಸಿ ಖರೀದಿದಾರರು ಸರಿಯಾದ ವಿಮಾ ರಕ್ಷಣೆಯನ್ನು ಆಯ್ಕೆ ಮಾಡುವ ಮೊದಲು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ನಿಮ್ಮ ಕುಟುಂಬದ ವಾರ್ಷಿಕ ವೆಚ್ಚಗಳ ಒಟ್ಟು ಮೊತ್ತವನ್ನು ಆದಾಯದ ಬದಲಿ ಅಗತ್ಯವಿರುವ ವರ್ಷಗಳ ಸಂಖ್ಯೆಯಿಂದ ಗುಣಿಸಿದಾಗ ನೀವು ಇದನ್ನು ತಿಳಿದುಕೊಳ್ಳಬೇಕು. ಆ ನಂತರ, ನಿಮ್ಮ ಬಾಕಿ ಇರುವ ಸಾಲಗಳ ಒಟ್ಟು ಮೊತ್ತ ಮತ್ತು ಅಡಮಾನಗಳನ್ನು ಮರುಪಾವತಿ ಮಾಡುವ ವೆಚ್ಚವನ್ನು (ಯಾವುದಾದರೂ ಇದ್ದರೆ) ಕಂಡುಹಿಡಿಯಬೇಕು. ಇದರೊಂದಿಗೆ ನಿಮ್ಮ ಮಗುವಿನ ಶಿಕ್ಷಣ, ಮದುವೆ ಇತ್ಯಾದಿಗಳಂತಹ ಭವಿಷ್ಯದ ವೆಚ್ಚಗಳಿಗಾಗಿ ನೀವು ಹೊಂದಿಸಬೇಕಾದ ಮೊತ್ತವನ್ನು ಸಹ ಯೋಚಿಸಿ.

ಇದನ್ನೂ ಓದಿ: Insurance Premium Financing: ಇನ್ಷೂರೆನ್ಸ್ ಖರೀದಿಸುವುದಕ್ಕೆ ಹಣಕಾಸು ಸಾಲ ನೀಡುವ ಪ್ರಸ್ತಾವ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ