ಬೆಂಗಳೂರು ಗ್ರಾಮಾಂತರ, ಸೆ.21: ಈ ಫೋಟೋದಲ್ಲಿರುವ ಯುವತಿಯ ಹೆಸರು ಆಶಾ(25), ಕಳೆದ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ, ಪತಿಯ ಜೊತೆ ಬಹಳ ಅನ್ಯೋನ್ಯವಾಗಿದ್ದರು. ಪತಿ ಮತ್ತು ಆಕೆಯ ತಾಯಿ ಜಗಳದಿಂದ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೌದು, ಆಶಾ ಮತ್ತು ಲಕ್ಷ್ಮಿಪತಿ ಪ್ರೀತಿಸಿ ಮದುವೆಯಾದವರು. ಮದುವೆಯ ಬಳಿಕ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರಶೆಟ್ಟಿಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೆಮ್ಮದಿಯಾಗಿದ್ದರು. ಆದರೆ, ಅತ್ತೆ ಮಂಜುಳ ಅಳಿಯನ ಮನೆಗೆ ಬಂದಿದ್ದಳು. ಆಗ ಅಳಿಯ ಲಕ್ಷ್ಮಿಪತಿ ಊರಲ್ಲಿ ಕೂರಿಸಿದ್ದ ಗಣಪತಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಹೋಗಿದ್ದವ ಮನೆಗೆ ಬಂದಿದ್ದ. ಅಲ್ಲಿಂದಲೇ ಕಿರಿಕ್ ಶುರುವಾಗಿತ್ತು. ಅವಾಚ್ಯ ಶಬ್ದದಿಂದ ಅತ್ತೆ ನಿಂದಿಸುತ್ತಿದ್ದಳು. ಇದರಿಂದ ಬೇಸತ್ತ ಲಕ್ಷ್ಮಿಪತಿ ಅತ್ತೆಗೆ ಬೈದು, ಎರಡು ಬಿಟ್ಟು ಹೋಗಿದ್ದಾನೆ. ಅಷ್ಟೇ ಅತ್ತೆ ಅಳಿಯನ ಜಗಳಕ್ಕೆ ಬೇಸತ್ತ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನು ಲಕ್ಷ್ಮೀಪತಿ ಎಂದಿನಂತೆ ಸೆಕ್ಯೂರಿಟಿ ಕೆಲಸಕ್ಕೆ ಹೋಗಿದ್ದ. ಪತಿಗೆ ಆಶಾ ಪ್ರತಿದಿನ ಟಿಫನ್ ತೆಗೆದುಕೊಂಡು ಹೋಗುತ್ತಿದ್ದಳು. ಆದರೆ, ಆಶಾ ಬೆಳಗ್ಗೆ 10 ಗಂಟೆಯಾದರು ಟಿಫನ್ ಪತಿಗೆ ತಲುಪಿಸಿಲ್ಲ. ಇದರಿಂದ ಪತಿಯೆ ಮನೆಗೆ ಬಂದು ಬಾಗಿಲು ಬಡಿದರು, ಆಶಾ ಬಾಗಿಲು ತೆಗೆದಿಲ್ಲ. ಕಿಟಕಿಯಲ್ಲಿ ಇಣುಕಿನೋಡಿದಾಗ ಆಶಾ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶಾ ತನ್ನ ತಾಯಿಯನ್ನು ಸುಮ್ಮನಿರಿಸಲಾರದೇ ಪತಿ ಬಗೆಗಿನ ಹಲ್ಲೆ ಹಾಗೂ ನಿಂದನೆಯನ್ನು ಕೇಳಲಾರದೇ ಸಾವಿನ ದಾರಿ ಹುಡುಕಿದ್ದು ದುರಂತವೇ ಸರಿ.
ಇದನ್ನೂ ಓದಿ:ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಸಣ ಸೇರಿದ ಗೃಹಿಣಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ, ಹೆತ್ತವರ ಆಕ್ರಂದನ
ಚಿಕ್ಕಬಳ್ಳಾಪುರ: ನಗರದಲ್ಲಿ ಲಾಂಗ್ ಮಚ್ಚುಗಳಿಂದ ಅಟ್ಟಾಡಿಸಿ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಮ್ ಕೋಚರ್ ಬಿ.ಎನ್.ನರಸಿಂಹಮೂರ್ತಿ ಅಲಿಯಾಸ್ ವಿಕ್ಕಿ ಎಂಬುವವರನ್ನು ಎಲ್‌ಎಲ್‌ಬಿ ವಿದ್ಯಾರ್ಥಿ ಚಂದ್ರಶೇಖರ್ ತಂಡದವರಾದ ಚೆಂಡೂರು ಗ್ರಾಮದ ಅರವಿಂದ್, ಹರೀಶ್, ಪೈಯೂರು ಗ್ರಾಮದ ಪ್ರಸಾದ್, ಬೀಚಗಾನಹಳ್ಳಿ ಕ್ರಾಸ್ ಹರೀಶ್ ಎನ್ನುವವರು ಕೊಲೆಗೆ ಯತ್ನಿಸಿದ್ದರು. ಇನ್ನು ಕೊಲೆಗೆ ಚಂದ್ರಶೇಖರ್ ಎಂಬಾತ ಸುಫಾರಿ ನೀಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಆರೋಪಿಗಳ ಕೃತ್ಯ ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ