ನೆಲಮಂಗಲ: ವ್ಯಕ್ತಿಯಿಂದ ಸ್ಮಶಾನ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 13, 2023 | 12:13 PM

ಆ ಗ್ರಾಮದ ಹೊರವಲಯದಲ್ಲಿ ಸರ್ಕಾರದಿಂದ ಸ್ಮಶಾನ ಭೂಮಿಯನ್ನ ಗುರುತಿಸಿದೆ. ಆದರೆ ಅದೇ ಸ್ಮಶಾನದ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗವಿದ್ದು, ದೇವಸ್ಥಾನದ ಹೆಸರಿನಲ್ಲಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲು ಮುಂದಾಗಿರುವ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ನೆಲಮಂಗಲ: ವ್ಯಕ್ತಿಯಿಂದ ಸ್ಮಶಾನ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಆಕ್ರೋಶ
ಸ್ಮಶಾನ ಜಾಗ ಒತ್ತುವರಿ ವಿರುದ್ದ ಗ್ರಾಮಸ್ಥರ ಆಕ್ರೋಶ
Follow us on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಬರಗೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಸರ್ಕಾರ ಸರ್ವೇ ನಂಬರ್ 35ರಲ್ಲಿ 17 ಗುಂಟೆ ಭೂಮಿಯನ್ನ ಸ್ಮಶಾನಕ್ಕಾಗಿ ಗುರುತಿಸಿದೆ. ಆದರೆ ಇದೇ ಸ್ಮಶಾನ ಭೂಮಿಯ ಪಕ್ಕದ ಜಮೀನಿನಲ್ಲಿ ದೇವಸ್ಥಾನ ಹಾಗೂ ಮಂಜುನಾಥ್ ಅಲಿಯಾಸ್ ಪೇಂಟ್ ಮಂಜಾ ಎಂಬ ಹೆಸರಿನ ವ್ಯಕ್ತಿಯ ಖಾಸಗಿ ಜಮೀನು ಇದ್ದು, ಆತ ದೇವಸ್ಥಾನದ ಹೆಸರಲ್ಲಿ ಸ್ಮಶಾನ ಭೂಮಿ ಜಾಗದಲ್ಲಿ ಜೆಸಿಬಿ‌ ಮೂಲಕ ಜಲ್ಲಿ‌ಕಲ್ಲು ಹಾಕಿ ರಸ್ತೆ ಮಾಡಲು ಮುಂದಾಗಿದ್ದು, ಅಕ್ರಮವಾಗಿ ಸ್ಮಾಶಾನ ಭೂಮಿ ಒತ್ತುವರಿ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಘಟನಾ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿ ಅಕ್ರಮವಾಗಿ ನಡೆಯುತ್ತಿದ್ದ ರಸ್ತೆ ಕಾಮಗಾರಿಗೆ ತಡೆ ಒಡ್ಡುತ್ತಿದ್ದಂತೆ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಹಾಗೂ ನೆಲಮಂಗಲ ತಹಶೀಲ್ದಾರ್ ಸ್ಥಳಕ್ಕೆ ದೌಡಾಯಿಸಿ‌ ಸರ್ಕಾರ ಗುರುತಿಸಿದ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡುತ್ತಿದ್ದ ಜಾಗದಲ್ಲಿ ಸರ್ವೆ ಆಗುವವರೆಗೆ ಯಾವುದೇ ಕಾಮಗಾರಿ ಮಾಡದಂತೆ ಹೇಳಿದ್ದು, ಇಲ್ಲಿ ಸರ್ವೇ ಮಾಡಿ ಜಾಗ ಸ್ಮಶಾನದಾಗಿದ್ದರೆ ಜಾಗ ತೆರವುಗೊಳಿಸುತ್ತೇವೆ. ಜಾಗ ಅವರದ್ದಾಗಿದರೆ ಅವರಿಗೆ ಬಿಟ್ಟು ಕೊಡುವುದಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಕಾಫಿ, ಏಲಕ್ಕಿ, ಮೆಣಸು ಬೆಳಗಾರರಿಗೆ ಗುತ್ತಿಗೆಗೆ ಜಮೀನು ನೀಡಲು ರಾಜ್ಯ ಸರ್ಕಾರ ನಿರ್ಧಾರ

ಒಟ್ಟಿನಲ್ಲಿ‌ ಗ್ರಾಮಸ್ಥರು ಸ್ಮಶಾನ ಭೂಮಿ‌ ಒತ್ತುವರಿ ಆಗಿದೆ ಎಂದು ಆರೋಪಿಸಿದರೆ. ಅತ್ತ ತಹಶೀಲ್ದಾರ್​ ಸಧ್ಯ ರಸ್ತೆ ಕಾಮಗಾರಿಗೆ ತಡೆ ಹಾಕಿದ್ದು, ಸರ್ಕಾರಿ ಸ್ಮಶಾನ ಭೂಮಿನಾ ಅಥವಾ ಅಕ್ರಮವಾಗಿ ಒತ್ತುವರಿ ಮಾಡಲಾಗುತ್ತಿದೆಯಾ ಎನ್ನುವುದರ ಕುರಿತು ಸರ್ವೇ ಬಳಿಕವಷ್ಟೇ ಗೊತ್ತಾಗಲಿದೆ.

ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ