ಬೆಂಗಳೂರು ಗ್ರಾಮಾಂತರ, ಏ.27: ಫೇಸ್ ಬುಕ್ನಲ್ಲಿ ಹಳೇ ಕಾಯಿನ್(coin) ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಜಾಹೀರಾತು ನಂಬಿ ಆರೋಪಿಗಳ ಅಕೌಂಟ್ಗೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ. ಹಣ ಹಾಕಿ ನೆಲಮಂಗಲದ ರಾಯನ್ ನಗರದ ಮಹಿಳೆ ಲಾವಣ್ಯ ಎಂಬುವವರು ಮೋಸ(fraud) ಹೋಗಿದ್ದಾರೆ. ತಮ್ಮಲ್ಲಿದ್ದ 5ಪೈಸೆ, 10ಪೈಸೆ ನಾಣ್ಯಗಳ ಪೋಟೋ ಹಾಕಿದ್ದ ಮಹಿಳೆ, ಬಳಿಕ ಕಂಪನಿಯ ಅಕೌಂಟಿಂಗ್ ಪ್ರೋಸೆಸ್ ಎಂದು ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಹಿನ್ನಲೆ ಸೆಕ್ಷನ್ 66(C), 66(D)IT ACT 419, 420, ರೀತ್ಯಾ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಪ್ಯಾಕ್ಸ್ ಮೂಲಕ ಬಂದ ಪೇಸ್ಟ್ ರೂಪದ 55 ಲಕ್ಷ ರೂಪಾಯಿ ಮೌಲ್ಯದ 799 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೇಸ್ಟ್ ರೂಪದಲ್ಲಿ ಸಿಂಗಾಪುರದಿಂದ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟು ಸಾಗಾಟ ಮಾಡಿದ್ದಾರೆ.ಈ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಓರ್ವ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಸೈಬರ್ ವಂಚನೆ: ರೈತರಿಗೆ ಮೋಸ
ಕಲಬುರಗಿ ಮಾಜಿ ಮೇಯರ್ ಕಾರಿನಲ್ಲಿ 2 ಕೋಟಿ ಹಣ ಪತ್ತೆ
ಕಲಬುರಗಿ: ನಗರದ ರೈಲ್ವೆ ನಿಲ್ದಾಣದ ಬಳಿ ಮಾಜಿ ಮೇಯರ್ಗೆ ಸೇರಿದ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆಯಾಗಿದೆ. ಕಾರಿನಲ್ಲಿ ಹಣ ಸಾಗಿಸುವಾಗ ಐಟಿ ಅಧಿಕಾರಿಗಳ ರೇಡ್ ಮಾಡಿದ್ದು, ಕಾಂಗ್ರೆಸ್ ಮಾಜಿ ಮೇಯರ್ ಸೇರಿದ ಕಾರನ್ನು ವಶಕ್ಕೆ ಪಡೆದು ಕಂದಾಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Sat, 27 April 24