ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ನೆಲಮಂಗಲ ಮಾಜಿ ಶಾಸಕನ ಗನ್​ ಮ್ಯಾನ್​ನಿಂದ ವಂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 13, 2024 | 6:29 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ(Dr. K Srinivasamurthy) ಗನ್ ​ಮ್ಯಾನ್​, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ 1860-406,420 ರೀತ್ಯಾ ದೂರು ದಾಖಲು ಮಾಡಲಾಗಿದೆ.

ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ನೆಲಮಂಗಲ ಮಾಜಿ ಶಾಸಕನ ಗನ್​ ಮ್ಯಾನ್​ನಿಂದ ವಂಚನೆ
ಆರೋಪಿ ಗನ್​ ಮ್ಯಾನ್​ ವೆಂಕಟೇಶ್​
Follow us on

ಬೆಂಗಳೂರು ಗ್ರಾಮಾಂತರ, ಜೂ.13: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ(Dr. K Srinivasamurthy) ಗನ್ ​ಮ್ಯಾನ್​ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ನೆಲಮಂಗಲದಲ್ಲಿ ಹಿಂದಿನ ಎಂಎಲ್​ಎ ಗೆ 10ವರ್ಷ ಗನ್ ಮ್ಯಾನ್ ಆಗಿದ್ದ ವೆಂಕಟೇಶ್ ಎಂಬಾತ ವಿಧಾನಸೌಧದಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಹಣಪೀಕಿದ ಆರೋಪದ ಹಿನ್ನಲೆ ದಾಬಸ್ ಪೇಟೆ ನಿವಾಸಿ ಸುನಂದಾ ಅವರು ಠಾಣೆಗೆ ದೂರು ದಾಖಲಿಸಿದ್ದಾರೆ.

ಇಂಜಿನಿಯರಿಂಗ್ ಪದವೀಧರರಾದ ತನ್ನ ಎರಡು ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಬರೋಬ್ಬರಿ 16.50 ಲಕ್ಷ ಹಣ ಪೀಕಿರುವ ಗನ್ ಮ್ಯಾನ್, ಇತ್ತ ಕೆಲಸವೂ ಕೊಡಿಸದೇ, ಹಣವೂ ನೀಡದೆ ಸತಾಯಿಸುತ್ತಿದ್ದ. ಡಿಸೆಂಬರ್ 2022 ರಿಂದಲೂ ಕೆಲಸ ಕೊಡಿಸೊದಾಗಿ ನಂಬಿಸಿದ್ದ ವೆಂಕಟೇಶ್, ಪೋನ್ ಪೇ ಮೂಲಕ ಹಾಗೂ ನಗದು ರೂಪದಲ್ಲಿ 25 ಬಾರಿ ಹಣ ಪಡೆದಿದ್ದಾನೆ. ಇದೀಗ ವೆಂಕಟೇಶ್ ವಿರುದ್ದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ 1860-406,420 ರೀತ್ಯಾ ದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಬ್ಯಾಂಕ್ ಸಿಬ್ಬಂದಿಗಳೇ ಸೇರಿಕೊಂಡು ಬ್ಯಾಂಕ್, ಗ್ರಾಹಕರಿಗೆ ವಂಚನೆ; ಏನಿದು ಪ್ರಕರಣ?

ಇಬ್ಬರು ಕಳ್ಳರ ಮೇಲೆ ಮಾರಣಾಂತಿಕ ಹಲ್ಲೆ, ಓರ್ವ ಸ್ಥಳದಲ್ಲೇ ಸಾವು

ಬೆಂಗಳೂರು: ಆರ್​ಬಿಐ ಲೇಔಟ್​ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣ ಕದಿಯಲು ಹೋಗಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಂಜಾನೆ 4.30ರ ಸುಮಾರಿಗೆ ಕಬ್ಬಿಣ ಕಳ್ಳತನಕ್ಕೆ ಹೋಗಿದ್ದ ಸಲ್ಮಾನ್, ಸಲೀಂ ಮೇಲೆ ಕೂಲಿ ಕಾರ್ಮಿಕರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಸಲ್ಮಾನ್(25) ಸ್ಥಳದಲ್ಲೇ ಸಾವನ್ನಪ್ಪಿದರೆ, ಹಲ್ಲೆಗೊಳಗಾದ ಸಲೀಂ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Thu, 13 June 24