ಕಾಮಗಾರಿ ವಿಳಂಬ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ನೆಲಮಂಗಲ ಕ್ಷೇತ್ರದ ಶಾಸಕನ ದರ್ಪ
ಕಾಮಗಾರಿ ವಿಳಂಬ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಶಾಸಕರ ದರ್ಪ. ನೆಲಮಂಗಲ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ದರ್ಪ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಟ್ಟಕೆರೆ ಗ್ರಾಮದಲ್ಲಿ ಘಟನೆ. ನಿನ್ನೆ ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಆಗಮಿಸಿದ್ದ ಶ್ರೀನಿವಾಸಮೂರ್ತಿ.
ರಾಮನಗರ: ಕಾಮಗಾರಿ ವಿಳಂಬ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಶಾಸಕರು ದರ್ಪ ಮೆರೆದಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಟ್ಟಕೆರೆ ಗ್ರಾಮದಲ್ಲಿ ನೆಲಮಂಗಲ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಯುವಕನ ಮೇಲೆ ದರ್ಪ ಮೆರೆದಿದ್ದಾರೆ. ನೆಲಮಂಗಲ ಕ್ಷೇತ್ರ ವ್ಯಾಪ್ತಿಗೆ ಬರುವ ತಟ್ಟೆಕೆರೆಯಲ್ಲಿ ನಿನ್ನೆ ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಶ್ರೀನಿವಾಸಮೂರ್ತಿ ಅವರು ಆಗಮಿಸಿದ್ದರು. ಈ ವೇಳೆ ಗ್ರಾಮದ ಯುವಕ ಶ್ರೀನಿವಾಸ್ ಶಾಸಕರಿಗೆ ತರಾಟೆಗೆ ತೆಗೆದುಕೊಂಡಿದ್ದಾನೆ. ಗೆದ್ದ ಬಳಿಕ ಗ್ರಾಮಕ್ಕೆ ಬಂದಿಲ್ಲ, ಕರೆ ಮಾಡಿದ್ರೂ ಸ್ವೀಕರಿಸಲ್ಲ ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಕುಪಿತಗೊಂಡು ಯುವಕ ಶ್ರೀನಿವಾಸ್ ಮೇಲೆ ಶಾಸಕ ದರ್ಪ ಮೆರೆದಿದ್ದಾರೆ. ಶಾಸಕನ ಬೆಂಬಲಿಗರು ಯುವಕನನ್ನು ನೂಕಾಡಿ ತಳ್ಳಾಡಿದ್ದಾರೆ.
Published on: Dec 16, 2022 11:20 AM
Latest Videos