ನೆಲಮಂಗಲದಲ್ಲಿ ಹಿಟ್ ಆ್ಯಂಡ್ ರನ್ಗೆ ವೃದ್ಧೆ ಬಲಿ
ನೆಲಮಂಗಲ(Nelamangala) ತಾಲೂಕಿನ ರಾಷ್ಟ್ರೀಯ ಹೆದ್ದಾರಿ4 ಆನಂದನಗರದಲ್ಲಿ ಹಿಟ್ ಆ್ಯಂಡ್ ರನ್(Hit And Run)ಗೆ ವೃದ್ಧೆ ಬಲಿಯಾಗಿದ್ದಾರೆ. ರಸ್ತೆ ದಾಟುವ ವೇಳೆ ವೃದ್ದೆಗೆ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ, ಏ.07: ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ರಾಷ್ಟ್ರೀಯ ಹೆದ್ದಾರಿ4 ಆನಂದನಗರದಲ್ಲಿ ಹಿಟ್ ಆ್ಯಂಡ್ ರನ್(Hit And Run)ಗೆ ವೃದ್ಧೆ ಬಲಿಯಾಗಿದ್ದಾರೆ. ರಸ್ತೆ ದಾಟುವ ವೇಳೆ ವೃದ್ದೆಗೆ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಿರೇಸಂದ್ರದ ನಾರಯಣಮ್ಮ(66) ಮೃತ ರ್ದುದೈವಿ. ಅಪಘಾತದ ಬಳಿಕ ಕಾರಿನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಆಸ್ಪತ್ರೆಯಿಂದ ವಾಪಸ್ ಮನೆಗೆ ತೆರಳುವಾಗ ಈ ಅವಘಡ ಸಂಭವಿಸಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗೂಡ್ಸ್ ವಾಹನ ಡಿಕ್ಕಿ; ಟ್ರ್ಯಾಕ್ಟರ್ನಲ್ಲಿದ್ದ ರೈತ ಸ್ಥಳದಲ್ಲೇ ದುರ್ಮರಣ
ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನ ಡಿಕ್ಕಿಯಾಗಿ ಟ್ರ್ಯಾಕ್ಟರ್ನಲ್ಲಿದ್ದ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ತವಾಡ ಗ್ರಾಮದ ಮಲ್ಲಪ್ಪ ದೊಡ್ಡಕಲ್ಲನ್ನವರ್(41) ಮೃತ ರ್ದುದೈವಿ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಘಟನೆ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:Arunachal Crime: ಹೋಟೆಲ್ವೊಂದರಲ್ಲಿ ಕೇರಳದ ದಂಪತಿ ಹಾಗೂ ಸ್ನೇಹಿತೆ ಸೇರಿ ಮೂವರ ನಿಗೂಢ ಸಾವು
ಚಳ್ಳಕೆರೆಯಲ್ಲಿ ಬೈಕ್ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಿತ್ರದುರ್ಗ: ಚಳ್ಳಕೆರೆಯ ಚಿತ್ರಯ್ಯನಹಟ್ಟಿಯಲ್ಲಿ ಕೆಎಸ್ಆರ್ಟಿಸಿ ನಿರ್ವಾಹಕ ನಾಗರಾಜು ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Sun, 7 April 24