ಟಿವಿ9 ಫಲಶ್ರುತಿ: 2 ವರ್ಷದಿಂದ ಪಿಂಚಣಿ ಸಿಗದ ನೆಲಮಂಗಲದ ವೃದ್ಧೆಗೆ ದೊರೆಯಿತು ಪಿಂಚಣಿ

ವೃದ್ಧೆ ನಿಂಗಮ್ಮ ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿತ್ತು, ವೃದ್ಧೆಗೆ ಸಹಾಯ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗದೇ, ನಿರ್ಲಕ್ಷ್ಯ ತೋರಿದ್ದರು. ಈಕುರಿತು ಟಿವಿ9 ಕನ್ನಡ ಡಿಜಿಟಲ್ ಸುದ್ದಿ ಪ್ರಕಟಿಸಿತ್ತು.

ಟಿವಿ9 ಫಲಶ್ರುತಿ: 2 ವರ್ಷದಿಂದ ಪಿಂಚಣಿ ಸಿಗದ ನೆಲಮಂಗಲದ ವೃದ್ಧೆಗೆ ದೊರೆಯಿತು ಪಿಂಚಣಿ
ತಹಶೀಲ್ದಾರ್ ಕೆ ಮಂಜುನಾಥ್ ವೃದ್ಧೆಗೆ ಪಿಂಚಣಿ ವ್ಯವಸ್ಥೆ ಮಾಡಿದರು
TV9kannada Web Team

| Edited By: guruganesh bhat

Sep 24, 2021 | 9:59 PM

ನೆಲಮಂಗಲ: 2 ವರ್ಷದಿಂದ ಪಿಂಚಣಿ ಸಿಗದೆ 85 ವರ್ಷದ ವೃದ್ಧೆ ಪರದಾಟ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಜಕ್ಕಸಂದ್ರ ಗ್ರಾಮದ ವೃದ್ದೆ ನಿಂಗಮ್ಮ ಆದೇಶ ಪ್ರತಿ ಕಳೆದುಕೊಂಡಿದ್ದು, ಪಿಂಚಣಿ ಹಣದಿಂದ ವಂಚಿತರಾಗಿದ್ದರು. ಈಕುರಿತು ಟಿವಿ9 ಕನ್ನಡ ವರದಿ ಪ್ರಕಟಿಸಿತ್ತು. ಇದಾದ ಕೆಲವೇ ಹೊತ್ತಲ್ಲೇ ವೃದ್ಧೆ ನಿಂಗಮ್ಮ ಅವರ ಮನೆಗೆ ತೆರಳಿ ಪಿಂಚಣಿ ಆದೇಶ ಪ್ರತಿ ನೀಡಲಾಗಿದೆ. ಸುದ್ದಿ ಪ್ರಕಟವಾದ ಕೆಲವೇ ಗಂಟೆಯಲ್ಲಿ ವೃದ್ದೆಯ ಮನೆ ಬಾಗಿಲಿಗೆ ತಹಶಿಲ್ದಾರ್ ಕೆ.ಮಂಜುನಾಥ್ ಪಿಂಚಣಿ ಆದೇಶ ಪತ್ರ ತಲುಪಿಸಿದ್ದಾರೆ. 

ವೃದ್ಧೆ ನಿಂಗಮ್ಮ ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿತ್ತು, ವೃದ್ಧೆಗೆ ಸಹಾಯ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗದೇ, ನಿರ್ಲಕ್ಷ್ಯ ತೋರಿದ್ದರು. ಈಕುರಿತು ಟಿವಿ9 ಕನ್ನಡ ಡಿಜಿಟಲ್ ಸುದ್ದಿ ಪ್ರಕಟಿಸಿತ್ತು. ಇದಾದ ಕೆಲವೇ ಹೊತ್ತಲ್ಲಿ ವೃದ್ಧೆಗೆ ಪರಿಹಾರ ದೊರೆತಿದೆ.

ಬೆಂಗಳೂರು: 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ; ವಿದೇಶಿ ಪ್ರಜೆ ಬಂಧನ ಬೆಂಗಳೂರು: ನಗರದಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಪ್ರಜೆ ಡೊಸೊ ಕಲೋಫಾ ಎಂಬಾತನನ್ನು ಬಂಧಿಸಲಾಗಿದೆ. ಗೋವಿಂದಪುರ ಠಾಣೆಯ ಪೊಲೀಸರಿಂದ ಆರೋಪಿ ಬಂಧನವಾಗಿದೆ. ವಿದೇಶಿ ಫುಟ್‌ಬಾಲ್‌ ಆಟಗಾರನಾಗಿದ್ದ ಡೊಸೊ ಕಲೋಫಾ, ಸ್ಪೋರ್ಟ್ಸ್‌ ವೀಸಾದಲ್ಲಿ 2015ರಲ್ಲಿ ಭಾರತಕ್ಕೆ ಬಂದಿದ್ದ. ಆರೋಪಿಯ ಬಳಿ ಅಧಿಕೃತ ಪಾಸ್‌ಪೋರ್ಟ್, ವೀಸಾ ಇರಲಿಲ್ಲ.

ಪ್ರತಿಷ್ಠಿತ ಹೋಟೆಲ್​ಗಳಿಗೆ ಡ್ರಗ್ಸ್ ಮಾರಾಟ ಮಾಡುತಿದ್ದ ಆರೋಪಿ ನಗರದ ಹೈಎಂಡ್ ಪಾರ್ಟಿಗಳಲ್ಲಿ ಡ್ರಗ್ ಸರಬರಾಜು ಮಾಡುತ್ತಿರುವುದು ಪತ್ತೆಯಾಗಿತ್ತು. 2018 ರಿಂದ ಆ್ಯಕ್ಟೀವ್ ಆಗಿ ತನ್ನ ಚಟುವಟಿಕೆ ನಡೆಸುತ್ತಿದ್ದ. ಆರೋಪಿ ಡೊಸೊ ವಿರುದ್ಧ ಅಕ್ರಮ ವಿದೇಶಿ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಜೊತೆಗೆ ಅಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತಿದ್ದ ಮಾದಕ ವಸ್ತುಗಳು ಜಪ್ತಿ ಮಾಡಲಾಗಿದೆ. ಗೋವಾದಿಂದ ಶ್ಯಾಪೇನ್ ಮುಖಾಂತರ ಮಾದಕ ವಸ್ತು ತರುತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಶಾಂಪೇನ್ ಬಾಟಲ್​ನಲ್ಲಿ ಮಾದಕ ವಸ್ತು ಇಟ್ಟು ಅಕ್ರಮವಾಗಿ ತಂದು ಮಾರಾಟ ಮಾಡುತಿದ್ದ. ಮೂಲತಃ ಐವೊರಿಯನ್ ಕೊಸ್ಟ್ ದೇಶದ ಪ್ರಜೆ, ಗೋವಾದ ಮೂಲಕ ಬೆಂಗಳೂರಿಗೆ ಮಾದಕ ವಸ್ತು ಎಂಡಿಎಂಎ, ಕ್ರಿಸ್ಟಲ್ ಪೌಡರ್ ತರುತಿದ್ದ. ಬಂಧಿತನಿಂದ 2.5 ಕೋಟಿ ರೂಪಾಯಿ ಮೌಲ್ಯದ‌ 2500 ಗ್ರಾಂ ಎಂಡಿಎಂಎ, ಕ್ರಿಸ್ಟಲ್ ಪೌಡರ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: 

ಪುರಸಭೆಯಲ್ಲಿ ಕಸ ಗುಡಿಸುವ ಮಹಿಳೆಯ ಕೈ ಹಿಡಿದ ಸರ್ಕಾರ! ಏನಿದು ಸ್ಟೋರಿ? ಆ ಮಹಿಳೆ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

Bank Deposits: ಬ್ಯಾಂಕ್​ ಠೇವಣಿಯಲ್ಲಿ ಪ್ರಗತಿ; ಎಷ್ಟಾಗಿದೆ ಎಂಬ ವಿವರಕ್ಕೆ ಇಲ್ಲಿದೆ ಆರ್​ಬಿಐ ಮಾಹಿತಿ

(Nelamangala Tv9 Kannada Impact old woman get pension by tv9 report)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada