ಆನ್ಲೈನ್ ಗೇಮಿಂಗ್ ಹುಚ್ಚಾಟಕ್ಕೆ ಬಿದ್ದು 1 ಲಕ್ಷ ರೂ. ಸಮೇತ ಮನೆಯಿಂದ ಓಡಿ ಹೋದ ಯುವಕ
ಬೆಂಗಳೂರಿನ ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಟಿ.ದಾಸರಹಳ್ಳಿಯಲ್ಲಿ ನಿವಾಸಿ ವರುಣ್ (18) ಆನ್ಲೈನ್ ಗೇಮ್ನಲ್ಲಿ 20 ಸಾವಿರ ರೂ. ಕಳೆದು, ಮನೆಯಿಂದ ಪರಾರಿಯಾಗಿದ್ದಾನೆ. ಮಗನನ್ನು ಹುಡುಕಿಕೊಡುವಂತೆ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು, ಆಗಸ್ಟ್ 28: ಬೆಂಗಳೂರಿನ (Bengaluru) ಟಿ.ದಾಸರಹಳ್ಳಿಯಲ್ಲಿ ನಿವಾಸಿ ವರುಣ್ (18) ಆನ್ಲೈನ್ ಗೇಮ್ನಲ್ಲಿ (Online Gaming) 20 ಸಾವಿರ ರೂ. ಕಳೆದು, ಮನೆಯಿಂದ ಪರಾರಿಯಾಗಿದ್ದಾನೆ. ಗೌರಮ್ಮ ಮತ್ತು ನಾಗರಾಜ್ ದಂಪತಿಗಳ ಪುತ್ರ ವರುಣ್ ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದನು. ಈತನಿಗೆ ವಿಪರೀತ ಆನ್ಲೈನ್ ಗೇಮ್ ಆಡುತ್ತಿದ್ದನು. ಒಂದು ತಿಂಗಳ ಹಿಂದೆ ಆನ್ಲೈನ್ ಗೇಮ್ನಲ್ಲಿ 20 ಸಾವಿರ ಕಳೆದಿದ್ದಲ್ಲದೆ, ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು ಸಮೇತ ನಾಪತ್ತೆಯಾಗಿದ್ದಾನೆ. ತಿಂಗಳಿಂದ ಮನೆಗೆ ಬಾರದ ಮಗನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದಾರೆ.
ತಂದೆ ನಾಗರಾಜ್ ಆಟೋ ಚಾಲಕನಾಗಿದ್ದು, ತಾಯಿ ಗೌರಮ್ಮ ಗೃಹಿಣಿ. ಏಕೈಕ ಪುತ್ರ ವರುಣ್ ನಾಪತ್ತೆಯಾದಾಗಿನಿಂದ ದಂಪತಿ ಸರಿಯಾಗಿ ನಿದ್ದ, ಆಹಾರವಿಲ್ಲದೆ ಮಗನ ಚಿಂತನೆಯಲ್ಲಿ ಕೊರಗುತ್ತಿದ್ದಾರೆ. ಮಗ ಮನೆಗೆ ಬಂದರೆ ಸಾಕು, ಯಾವುದೇ ಹಣದ ವಿಷಯ ಎತ್ತುವುದಿಲ್ಲ, ಮಗ ಕಣ್ಮುಂದೆ ಇದ್ದರೆ ಸಾಕು. ಯಾರಾದರು ನನ್ನ ಮಗನನ್ನು ನೋಡಿದ್ದರೆ, ನಮಗೆ ತಿಳಸಿ ಎಂದು ಗೌರಮ್ಮ ಕಣ್ಣೀರು ಹಾಕುತ್ತಿದ್ದಾರೆ. ಮಗನನ್ನು ಹುಡುಕಿಕೊಡುವಂತೆ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಗೇಮ್: ಬೆಟ್ಟಿಂಗ್ ಹಣ ಹಂಚಿಕೆಯಲ್ಲಿ ಗಲಾಟೆ, ಡ್ರ್ಯಾಗರ್ನಿಂದ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ
ಆನ್ಲೈನ್ ಬೆಟ್ಟಿಂಗಾಗಿ ಸಾಲ ಮಾಡಿ, ತೀರಿಸಲು ಹಡಿದ ದಾರಿ ವಿಚಿತ್ರ
ಆನ್ಲೈನ್ ಬೆಟ್ಟಿಂಗ್ ಹುಚ್ಚಾಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡು ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ ಸುರೇಶ್ ಬಂಧಿತ ಆರೋಪಿ. ಸುರೇಶ್ ಆನ್ಲೈನ್ನಲ್ಲಿ ಬೆಟ್ಟಿಂಗ್ ಗೇಮ್ ಆಡುತಿದ್ದನು. ಈ ವೇಳೆ ಸುರೇಶ್ ಸಾಕಷ್ಟು ಹಣ ಕಳೆದುಕೊಂಡಿದ್ದನು. ಅಲ್ಲದೇ, ಬೆಟ್ಟಿಂಗ್ ಗೇಮ್ಗಾಗಿ ಐದು ಲಕ್ಷ ಸಾಲ ಮಾಡಿಕೊಂಡಿದ್ದನು. ಆರೋಪಿ ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದನು. ಮಾಡಿದ ಸಾಲ ತೀರಿಸಲು ಆಟೋ ಸಹ ಅಡವಿಟ್ಟಿದ್ದನು. ಆದರೂ, ಸಾಲ ತೀರಿರಲಿಲ್ಲ.
ಹೀಗಾಗಿ, ಸಾಲ ತೀರಿಸಲು ದಾರಿ ಕಾಣದೆ ಸರಗಳ್ಳತನಕ್ಕಿಳಿದಿದ್ದನು. ಸುರೇಶ್ ಗಿರಿನಗರದ ಬೈರಪ್ಪ ಲೇಔಟ್ನಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಳ್ಳತನ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು ತನಿಖೆ ನಡೆಸಿ, ಆರೋಪಿ ಸುರೇಶ್ನನ್ನು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ