ಚೀಟಿ ಹೆಸರಲ್ಲಿ ಉಂಡೆನಾಮ; ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು ಪರಾರಿಯಾದ ಕುಟುಂಬ, ಬೀದಿಗೆ ಬಂದ ಜನರಿಂದ ಪ್ರತಿಭಟನೆ

ಹೊಸಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಿವಕುಮಾರ್ ಎಂಬುವವರು ಚೀಟಿ ನಡೆಸುತ್ತಿದ್ದರು. ಇವರನ್ನು ನಂಬಿ ನೂರಾರು ಜನ ಚೀಟಿ ಹಾಕಿದ್ದಾರೆ. ಆದ್ರೆ ಕಳೆದ ಆಗಸ್ಟ್ ನಲ್ಲಿ ಅನಾರೋಗ್ಯದಿಂದ ಶಿವಕುಮಾರ್ ಸಾವನ್ನಪ್ಪಿದ್ರು.

ಚೀಟಿ ಹೆಸರಲ್ಲಿ ಉಂಡೆನಾಮ; ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು ಪರಾರಿಯಾದ ಕುಟುಂಬ, ಬೀದಿಗೆ ಬಂದ ಜನರಿಂದ ಪ್ರತಿಭಟನೆ
ಶಿವಕುಮಾರ್ ಕುಟುಂಬ
Edited By:

Updated on: Nov 25, 2021 | 1:01 PM

ದೇವನಹಳ್ಳಿ: ಚೀಟಿ ಹೆಸರಲ್ಲಿ ಬಡ ಜನರಿಗೆ ಉಂಡೆನಾಮ ಹಾಕಲಾಗಿದೆ. ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು ವಂಚನೆ ಮಾಡಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಿವಕುಮಾರ್ ಎಂಬುವವರು ಚೀಟಿ ನಡೆಸುತ್ತಿದ್ದರು. ಇವರನ್ನು ನಂಬಿ ನೂರಾರು ಜನ ಚೀಟಿ ಹಾಕಿದ್ದಾರೆ. ಆದ್ರೆ ಕಳೆದ ಆಗಸ್ಟ್ ನಲ್ಲಿ ಅನಾರೋಗ್ಯದಿಂದ ಶಿವಕುಮಾರ್ ಸಾವನ್ನಪ್ಪಿದ್ರು. ಇದಾದ ಬಳಿಕ ಇದೀಗ ಹಣದೊಂದಿಗೆ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಲಿ ಮಾಡಿ ಕೂಡಿಟ್ಟಿದ್ದ ಹಣ ಕಳೆದುಕೊಂಡ ಜನರು ಕೆಇಬಿ ಕಪ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಚೀಟಿ ಹೆಸರಲ್ಲಿ ಬಡ ಜನರಿಗೆ ಉಂಡೆನಾಮ; ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು ಪರಾರಿಯಾದ ಕುಟುಂಬ, ಬೀದಿಯಲ್ಲಿ ಕುಳಿತು ಜನರಿಂದ ಪ್ರತಿಭಟನೆ

ಕೂಲಿ ಮಾಡಿ‌ ಹೂ ಮಾರಿ ಹಣ ಕಟಿದ್ದೀವಿ, ಮಗಳ ಮದುವೆ ಮತ್ತು ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಟ್ಟಿದ್ವಿ ಆದ್ರೆ ಇದೀಗ ಮೋಸ ಮಾಡಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ನಮಗೆ ನ್ಯಾಯ ಕೊಡಿಸಿ ಚೀಟಿ ನಡೆಸಿ ಮುನ್ನೂರಕ್ಕೂ ಅಧಿಕ ಜನರಿಗೆ ವಂಚನೆ ಮಾಡಲಾಗಿದೆ. ಪರಾರಿಯಾಗಿರೂ ಕುಟುಂಬಸ್ಥರಿಂದ ಹಣ ಕೊಡಿಸಿ ಅಂತಾ ನೊಂದ ಮಹಿಳೆಯರು ಕಣ್ಣೀರು ಹಾಕುತ್ತ ರಸ್ತೆಯಲ್ಲಿ ಕುಳಿತು ಧರಣಿ ನಡೆಸುತ್ತಿದ್ದಾರೆ. 80 ಕ್ಕೂ ಅಧಿಕ ಜನರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಚೀಟಿ ಅವ್ಯವಹಾರದಲ್ಲಿ ಭಾಗಿಯಾಗಿದ್ದ ದಂಪತಿಯಿಂದ ಮನೆ ಖರೀದಿ; ಸೈನಿಕನ ವಿರುದ್ಧ ದೂರು ದಾಖಲು

Published On - 12:43 pm, Thu, 25 November 21