ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

Doddaballapur Government hospital: ತಾಯಿ ಸವಿತಾ ಸಾವು ಸಂಭವಿಸಿದ್ದರಿಂದ ವೈದ್ಯರ ನಿರ್ಲಕ್ಷ್ಯವೆ ಅದಕ್ಕೆ ಕಾರಣ ಅಂತಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ವತ್ರೆ ಮುಂದೆ ಮೃತದೇಹ ತಂದು ಸವಿತಾ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
Updated By: ಸಾಧು ಶ್ರೀನಾಥ್​

Updated on: Mar 10, 2022 | 8:43 PM

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Doctor negligence) ಬಾಣಂತಿ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ (Doddaballapur Government hospital) ಆಸ್ಪತ್ರೆಯ ಮುಂದೆ ಮೃತಳ‌ ಕುಟುಂಬಸ್ಥರು ಆಕ್ರೋಶ (family protest) ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಗ್ರಾಮದ ಸವಿತಾ (22) ಮೃತ ದುರ್ದೈವಿ.

ಸವಿತಾ ಇಂದು ಬೆಳಗ್ಗೆ 9 ಗಂಟೆಗೆ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ‌ ‌ವೇಳೆ ಅರ್ಚನಾ ಎಂಬ ವೈದ್ಯೆಯಿಂದ ಆಕೆಗೆ ಹೆರಿಗೆ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದೆ. ರಕ್ತಸ್ರಾವ ಹೆಚ್ಚಾದ ಕೆಲ ಗಂಟೆಗಳ ನಂತರ ಬೇರೆ ಕಡೆಯಿಂದ ರಕ್ತ ತರುವಂತೆ ಸೂಚಿಸಿದ್ದಾರೆ. ಬೇರೆ ಕಡೆಯಿಂದ ರಕ್ತ ತರುವ ವೇಳೆಗೆ ಸವಿತಾ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಹಾಗಾಗಿ ಬೇರೆ ಕಡೆಗೆ ಕರೆದೊಯ್ಯುವಂತೆ ವೈದ್ಯರು ಹೇಳಿದ್ದಾರೆ.

ಕೊನೆಗೆ ಕುಟುಂಬಸ್ಥರು ಮಧ್ಯಾಹ್ನ 2 ಗಂಟೆಯ ನಂತರ ತಾಯಿ ಮತ್ತು ಮಗುವನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಾರ್ಗ ಮಧ್ಯೆಯೇ ಅತೀವ ರಕ್ತ ಸ್ರಾವವಾಗಿ ತಾಯಿ ಸವಿತಾ ಕೊನೆಯುಸಿರೆಳೆದಿದ್ದಾರೆ.

ತಾಯಿ ಸವಿತಾ ಸಾವು ಸಂಭವಿಸಿದ್ದರಿಂದ ವೈದ್ಯರ ನಿರ್ಲಕ್ಷ್ಯವೆ ಅದಕ್ಕೆ ಕಾರಣ ಅಂತಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ವತ್ರೆ ಮುಂದೆ ಮೃತದೇಹ ತಂದು ಸವಿತಾ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬೈಕ್ ಸ್ಕಿಡ್: ಕೆಂಗೇರಿ ಮೂಲದ ಸವಾರ ಸ್ಥಳದಲ್ಲೇ ಸಾವು
ನೆಲಮಂಗಲ: ಬೈಕ್ ಸ್ಕಿಡ್ ನಿಂದಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹಿಮಪುರದಲ್ಲಿ ಘಟನೆ ನಡೆದಿದೆ. ಕೆಂಗೇರಿ ಮೂಲದ ರವಿ (49) ಮೃತ ದುರ್ದೈವಿ. ಸಂಬಂಧಿಯೊಬ್ಬರ ಮನೆಗೆ ನಾಮಕರಣ ಕಾರ್ಯಕ್ರಮಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Also Read:
ಯೂಟ್ಯೂಬರ್​ಗಳು ದೇಶದ ಆರ್ಥಿಕತೆಗೆ 6,800 ಕೋಟಿ ರೂ ಕೊಡುಗೆ ನೀಡಿದ್ದಾರೆ! ಇದು 2 ವರ್ಷದ ಹಿಂದಿನ ಸಾಧನೆ; ಈಗ ಎಷ್ಟಿರಬಹುದು?

Also Read:
ಸಭಾಪತಿ ವಿರುದ್ಧ ಎಫ್​ಐಆರ್: ಬೆಳಗಿ‌ನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ

 

Published On - 7:47 pm, Thu, 10 March 22