ಯೂಟ್ಯೂಬರ್​ಗಳು ದೇಶದ ಆರ್ಥಿಕತೆಗೆ 6,800 ಕೋಟಿ ರೂ ಕೊಡುಗೆ ನೀಡಿದ್ದಾರೆ! ಇದು 2 ವರ್ಷದ ಹಿಂದಿನ ಸಾಧನೆ; ಈಗ ಎಷ್ಟಿರಬಹುದು?

YouTube creators: 2021 ಜೂನ್​ ಅಂಕಿ ಅಂಶದ ಪ್ರಕಾರ ವಾರ್ಷಿಕ 1 ಲಕ್ಷ ರೂಪಾಯಿ ಆದಾಯ ಗಳಿಸುವವರ ಸಂಖ್ಯೆ ಶೇ. 60 ರಷ್ಟು ಏರಿಕೆ ಕಂಡಿದೆ. ಇದು ನಾನಾ ಹಿನ್ನೆಲೆಯ, ವಿವಿಧ ಪ್ರದೇಶಗಳಲ್ಲಿರುವ ಹೊಸಬರಿಗೆ ಆಶಾದಾಯಕವಾಗಿದ್ದು, ಅವಕಾಶಗಳ ಹೆಬ್ಬಾಗಿಲನ್ನು ತೆರೆದಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ YouTube creators ಗೆ ವೃತ್ತಿ ಸಂತೃಪ್ತಿ ನೀಡುತ್ತಿದೆ.

ಯೂಟ್ಯೂಬರ್​ಗಳು ದೇಶದ ಆರ್ಥಿಕತೆಗೆ 6,800 ಕೋಟಿ ರೂ ಕೊಡುಗೆ ನೀಡಿದ್ದಾರೆ! ಇದು 2 ವರ್ಷದ ಹಿಂದಿನ ಸಾಧನೆ; ಈಗ ಎಷ್ಟಿರಬಹುದು?
ಭಾರತದ ಯೂಟ್ಯೂಬ್​ ಕ್ರಿಯೇಟರ್​ಗಳು ದೇಶದ ಆರ್ಥಿಕತೆಗೆ 6,800 ಕೋಟಿ ರೂ ಕೊಡುಗೆ ನೀಡಿದ್ದಾರೆ! ಇದು 2 ವರ್ಷದ ಹಿಂದಿನ ಸಾಧನೆ; ಈಗ ಎಷ್ಟಿರಬಹುದು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 10, 2022 | 7:03 PM

ಬೆಂಗಳೂರು: ಸಮೀಕ್ಷೆಯೊಂದರ ಅನುಸಾರ YouTube creators ಎಂಬ ಒಂದು ನಿರ್ದಿಷ್ಟ ವರ್ಗವು 2020ನೇ ಸಾಲಿನಲ್ಲಿ ಸುಮಾರು 7 ಲಕ್ಷ ಪೂರ್ಣಾವಧಿ ಉದ್ಯೋಗಗಳನ್ನು ಸೃಷ್ಟಿಸಿದೆ. YouTube ಸಂಸ್ಥೆಯ ಅಂಕಿ ಅಂಶಗನ್ನು ಆಧರಿಸಿ, ಆಕ್ಸ್​​ಫರ್ಡ್​​ ಎಕನಾಮಿಕ್ಸ್​ (Oxford Economics) ಸಂಸ್ಥೆ ಕೈಗೊಂಡಿದ್ದ ಈ ಸಮೀಕ್ಷೆಯ ಪ್ರಕಾರ ಭಾರತದ ಮೂಲೆಮೂಲಗೆಳಲ್ಲಿ ಸಕ್ರಿಯವಾಗಿರುವ Indian YouTube creators ಭಾರತದ ಜಿಡಿಪಿ ಗೆ 6,800 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ಸಮೀಕ್ಷೆಯಲ್ಲಿ ಭಾರತದ ಸುಮಾರು 6,000 ಮಂದು ಬಳಕೆದಾರರು ಮತ್ತು ವಹಿವಾಟುದಾರರು ಪಾಲ್ಗೊಂಡಿದ್ದರು. ಭಾರತದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ YouTube ಹೇಗೆ ಪ್ರಭಾವ ಬೀರಿದೆ ಎಂಬುದು ಈ ಅಂಕಿಅಂಶಗಳಿಂದ ತಿಳಿದುಬರುತ್ತದೆ.

ದಾಖಲಾರ್ಹ ಸಂಗತಿಯೆಂದರೆ ಈ ಮಾಹಿತಿ 2020ನೇ ಸಾಲಿಗೆ ಮುಂಚಿನದು. ಅದಾದಮೇಲೆ ಭಾರತದಲ್ಲಿ YouTube creators ಇನ್ನೂ ಹೆಚ್ಚು ಸಕ್ರಿಯವಾಗಿದ್ದು, ಮಿಲಿಯನ್​ಗಟ್ಟಲೆ ರೀಲ್​​ಗಳನ್ನು ಸುತ್ತಿದ್ದಾರೆ ಎಂಬುದು ಶತ:ಸಿದ್ಧ. ಪರಿಸ್ಥಿತಿ ಹೀಗಿರುವಾಗ ಇಂದಿನ ದಿನಮಾನದಲ್ಲಿ YouTube creators ಕೊಡುಗೆ ಗಣನೀಯವಾಗಿರುವುದರಲ್ಲಿ ಅನುಮಾನವಿಲ್ಲ. ಮತ್ತೊಂದು ಅಂಶವೆಂದರೆ ಈ ಎರಡು ವರ್ಷಗಳಲ್ಲಿ YouTube creators ಸಂಖ್ಯೆ ಹೆಚ್ಚಾಗಿದೆ.

ಇದು ಅವಕಾಶಗಳ ಮಹಾಪೂರನ್ನೇ ಹರಿಸಿದೆ. ಕೊರೊನಾ ಮಹಾಸಂಕಷ್ಟದಲ್ಲಿ ಯೂಟ್ಯೂಬ್​ ಸೃಷ್ಟಿಗಳು ಹೆಚ್ಚಾಗಿದೆ. ಈ ಎರಡು ವರ್ಷದಲ್ಲಿ ಕೊರೊನಾ ಕ್ರಿಮಿ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಿರುವಾಗ ಉದ್ಯೋಗ ಸೃಷ್ಟಿ, ಆರ್ಥಿಕತೆ ಬಲವರ್ಧನೆ ಯೂಟ್ಯೂಬ್​ ಸೃಷ್ಟಿಗಳಿಂದ ಆಗುತ್ತಿರುವುದು ಸ್ವಾಗತಾರ್ಹವಾಗಿದೆ. ಯೂಟ್ಯೂಬ್ ವೇದಿಕೆಯಿಂದ ಆರ್ಥಿಕ ಬೆಳವಣಿಗೆ, ಉದ್ಯೋಗ ಋಷ್ಟಿ ಅಷ್ಟೇ ಅಲ್ಲ, ಸಾಂಸ್ಕೃತಿಕವಾಗಿಯೂ ಅಪಾರ ಪ್ರಭಾವ ಬೀರಿದೆ. ಇದೆಲ್ಲದರ ಜೊತೆಗೆ ಯೂಟ್ಯೂಬ್ ಜಾಗತಿಕ ವೇದಿಕೆಯಾಗಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುತ್ತದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

2021 ಜೂನ್​ ಅಂಕಿ ಅಂಶದ ಪ್ರಕಾರ ವಾರ್ಷಿಕ 1 ಲಕ್ಷ ರೂಪಾಯಿ ಆದಾಯ ಗಳಿಸುವವರ ಸಂಖ್ಯೆ ಶೇ. 60 ರಷ್ಟು ಏರಿಕೆ ಕಂಡಿದೆ. ಇದು ನಾನಾ ಹಿನ್ನೆಲೆಯ, ವಿವಿಧ ಪ್ರದೇಶಗಳಲ್ಲಿರುವ ಹೊಸಬರಿಗೆ ಆಶಾದಾಯಕವಾಗಿದ್ದು, ಅವಕಾಶಗಳ ಹೆಬ್ಬಾಗಿಲನ್ನು ತೆರೆದಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ YouTube creators ಗೆ ವೃತ್ತಿ ಸಂತೃಪ್ತಿ ನೀಡುತ್ತಿದೆ.

ಯೂಟ್ಯೂಬ್​ಗೆ ಕಂಟೆಂಟ್ ಸೃಷ್ಟಿ ಮಾಡುವ ಪ್ರಕ್ರಿಯೆಯಲ್ಲಿ YouTube creators ಅನೇಕ ಸರಕು ಸರಂಜಾಮುಗಳನ್ನು ಖರೀದಿಸಬೇಕಾಗುತ್ತದೆ. ಪರಿಣತರ ಸೇವೆ ಪಡೆಯಬೇಕಾಗುತ್ತದೆ. ಅವರು ವಿಡಿಯೋ ಎಡಿಟರ್​​, ಗ್ರಾಫಿಕ್​ ಡಿಸೈನರ್, ಪ್ರೊಡ್ಯುಸರ್​ಗಳು ಹೀಗೆ. ಒಳ್ಳೆಯ ಕ್ಯಾಮರಾ ಖರೀದಿ, ಕಂಪ್ಯೂಟರ್​ ಖರೀದಿ ಹೀಗೆ ಒಟ್ಟಾರೆಯಾಗಿ YouTube creators ತಮ್ಮ ಆದಾಯದ ಬಹು ಭಾಗವನ್ನು ಇಂತಹ ಆಯಕಟ್ಟಿನ ಖರ್ಚುಗಳಿಗಾಗಿ ವಿನಿಯೋಗಿಸುತ್ತಾರೆ. ಅಂದರೆ, ಇದೂ ಸಹ ಮತ್ತೆ ಆರ್ಥಿಕತೆಯಲ್ಲಿ ತೊಡಗಿದಂತಾಗುತ್ತದೆ. ಅಂದರೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮತ್ತು ಪೂರಕವಾಗಿ ಈ ಚಕ್ರ ತಿರುಗುತ್ತಿದ್ದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಸುತ್ತಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Published On - 6:56 pm, Thu, 10 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್