Gitam University: ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು, 4 ತಿಂಗಳಲ್ಲಿ ಇದು ಮೂರನೇ ವಿದ್ಯಾರ್ಥಿ ಬಲಿ
ಬೆಂಗಳೂರು ಗ್ರಾ. ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯಿರುವ ಗೀತಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಾಲು ಸಾಲು ಸಾವು ಸಂಭವಿಸುತ್ತಿದೆ. ಮೊದಲನೆ ವರ್ಷದ ಬಿಟೆಕ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ನಿನ್ನೆ ಹಾಸ್ಟೆಲ್ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಈ ಹಿಂದೆ ಕೂಡ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ನವೆಂಬರ್ನಲ್ಲಿ ನೇಣು ಬಿಗಿದುಕೊಂಡು ಓರ್ವ ವಿದೇಶಿ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಕಳೆದ ಪೆಬ್ರವರಿ 06 ರಂದು ರೈಲಿಗೆ ಸಿಲುಕಿ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ.
ದೇವನಹಳ್ಳಿ, ಮಾರ್ಚ್.13: ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟ (Death) ಘಟನೆ ಬೆಂಗಳೂರು ಗ್ರಾ. ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯಿರುವ ಗೀತಂ ವಿಶ್ವವಿದ್ಯಾಲಯದಲ್ಲಿ (Gitam University) ನಡೆದಿದೆ. ಆಂಧ್ರದ ಕರ್ನೂಲ್ ಮೂಲದ ದಾಸರಿ ಬ್ರಹ್ಮಸಾಯಿರೆಡ್ಡಿ ಎಂಬ ವಿದ್ಯಾರ್ಥಿ ನಿನ್ನೆ ರಾತ್ರಿ ಊಟ ಮಾಡಿದ ಬಳಿಕ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೊದಲನೆ ವರ್ಷದ ಬಿಟೆಕ್ ವ್ಯಾಸಾಂಗ ಮಾಡುತ್ತಿದ್ದ ದಾಸರಿ ಬ್ರಹ್ಮಸಾಯಿರೆಡ್ಡಿ, ರಾತ್ರಿ ಊಟ ಮಾಡಿ ತನ್ನ ಕೋಣೆಗೆ ಮರಳಿದ್ದ. ಈ ವೇಳೆ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.
ಪ್ರತಿಷ್ಠಿತ ಗೀತಂ ವಿವಿಯಲ್ಲಿ ಸಾಲು ಸಾಲು ಆತ್ಮಹತ್ಯೆ
ಕಳೆದ ನಾಲ್ಕು ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿಯು ಓರ್ವ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ನವೆಂಬರ್ನಲ್ಲಿ ನೇಣು ಬಿಗಿದುಕೊಂಡು ಓರ್ವ ವಿದೇಶಿ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಕಳೆದ ಪೆಬ್ರವರಿ 06 ರಂದು ರೈಲಿಗೆ ಸಿಲುಕಿ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ ಇದೀಗ ಹಾಸ್ಟೆಲ್ ಮಹಡಿ ಮೇಲಿಂದ ಬಿದ್ದು ಆಂಧ್ರ ಮೂಲದ ಮತ್ತೋರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಪ್ರತಿಷ್ಠಿತ ಗೀತಂ ವಿವಿಯಲ್ಲಿ ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಮೆಲ್ನೋಟಕ್ಕೆ ಆತ್ಮಹತ್ಯೆಯಾದ್ರು ವಿವಿಯಲ್ಲಿ ಕಿರುಕುಳ ಮತ್ತು ಮಾದಕ ದ್ರವ್ಯಗಳ ಬಳಕೆ ಆರೋಪ ಕೇಳಿ ಬಂದಿದೆ. ಗಾಂಜಾ ಮತ್ತು ಡ್ರಗ್ಸ್ ಹೇರಳ ಮಾರಾಟದಿಂದ ವಿದ್ಯಾರ್ಥಿಗಳ ಸಾವು ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಕೇರಳದ ಇನ್ನಿಬ್ಬರು ಪೊಲೀಸ್ ವಶಕ್ಕೆ
ಯುವಕನ ಹುಚ್ಚಾಟಕ್ಕೆ 27 ನಿಮಿಷ ಮೆಟ್ರೋ ಸ್ಥಗಿತ
ಯುವಕನ ಹುಚ್ಚಾಟಕ್ಕೆ 27 ನಿಮಿಷ ಮೆಟ್ರೋ ಸೇವೆ ಸ್ಥಗಿತಗೊಂಡ ಪ್ರಸಂಗ ನಡೆದಿದೆ. ನಿನ್ನೆ ಮೈಸೂರು ರೋಡ್ ನಿಂದಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಮೆಟ್ರೋ ವಾಯಡಕ್ಟ್ ನಲ್ಲಿ ಅಪರಿಚಿತ ವ್ಯಕ್ತಿ ನಡೆದುಕೊಂಡು ಹೋಗ್ತಿದ್ದ. ಇದನ್ನು ಗಮನಿಸಿದ ಅಧಿಕಾರಿಗಳು ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ರು. ಮೆಟ್ರೋ ಹಳಿಗಳ ಬಳಿ ಹೈವೊಲ್ಟೇಜ್ ಕರೆಂಟ್ ಇರೋದ್ರಿಂದ ಪವರ್ ಆಫ್ ಮಾಡಿಸಿ ಮೆಟ್ರೋ ಸೇವೆ ಸ್ಥಗಿತ ಗೊಳಿಸಿದ್ರು. ಮದ್ಯಾಹ್ನ 3ರಿಂದ 3.27 ರವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ