AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ; ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ- ಸುಮಲತಾ

ಮಂಡ್ಯ ಲೋಕಸಭಾ ಚುನಾವಣೆ ಅಭ್ಯರ್ಥಿ ಬಗ್ಗೆ ವಿಜಯೇಂದ್ರ ಅವರು ಸಹ ಮಾರ್ಚ್​ 22 ರ‌ವರೆಗೂ ಟಿಕೆಟ್​ ಫೈನಲ್ ಆಗಲ್ಲ ಅಂದಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು ಕೂತು ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಾರೆ. ನಾನು ರಾಜಕೀಯ ಮಾಡಿದ್ರೆ, ಮಂಡ್ಯದಿಂದಲೇ ಮಾಡುತ್ತೇನೆ ಎಂದು ಹೇಳಿದ್ದೆ, ಈಗಲೂ ಅದನ್ನೆ ಹೇಳ್ತಿದ್ದೀನಿ ಎಂದು ಸಂಸದೆ ಸುಮಲತಾ ಅವರು ಹೇಳಿದರು.

ಮಂಡ್ಯದ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ; ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ- ಸುಮಲತಾ
ಸುಮಲತಾ
ನವೀನ್ ಕುಮಾರ್ ಟಿ
| Edited By: |

Updated on:Mar 20, 2024 | 7:01 PM

Share

ಬೆಂಗಳೂರು ಗ್ರಾಮಾಂತರ, ಮಾ.20: ಲೋಕಸಭಾ ಚುನಾವಣೆ(Lok sabha Election) ದಿನಾಂಕ ಘೋಷಣೆ ಆಗುತ್ತಿದ್ದಂತೆ ಅದರ ಕಾವು ಜೋರಾಗಿದೆ. ಈ ಮಧ್ಯೆ ಮಂಡ್ಯ(Mandya)ದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರನ್ನ ಕಣಕ್ಕೀಳಿಸುತ್ತದೆ ಎಂಬ ಕುತೂಹಲವಿದೆ. ಈ ಕುರಿತು ದೆಹಲಿಯಿಂದ ಆಗಮಿಸಿದ ಹಾಲಿ ಸಂಸದೆ ಸುಮಲತಾ(Sumalatha) ಅವರು ಕೆಂಪೇಗೌಡ ಏಪೋರ್ಟ್​ನಲ್ಲಿ ಮಾತನಾಡಿ, ‘ಮಂಡ್ಯದ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ ಮಾಡಿದ್ದೀನಿ. ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ,ಗೃಹ ಸಚಿವರು ಕೂತು ಅಂತಿಮ ನಿರ್ಧಾರ

ವಿಜಯೇಂದ್ರ ಅವರು ಸಹ ಮಾರ್ಚ್​ 22 ರ‌ವರೆಗೂ ಟಿಕೆಟ್​ ಫೈನಲ್ ಆಗಲ್ಲ ಅಂದಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು ಕೂತು ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಾರೆ. ನಾನು ರಾಜಕೀಯ ಮಾಡಿದ್ರೆ, ಮಂಡ್ಯದಿಂದಲೇ ಮಾಡುತ್ತೇನೆ ಎಂದು ಹೇಳಿದ್ದೆ, ಈಗಲೂ ಅದನ್ನೆ ಹೇಳ್ತಿದ್ದೀನಿ. ಬೇರೆಯವರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ಎಂದು ಹೇಳುತ್ತಿದ್ದಾರೆ. ಪ್ರಧಾನಿಯವರೆ ಕರೆ ಮಾಡಿ ನನ್ನನ್ನ ಕರೆಸಿ ಮಾತನಾಡಿ ಎಂದು ಹೇಳಿದರು. ಹೀಗಾಗಿ ನನ್ನನ್ನ ಕರೆಸಿದ್ದಾಗಿ ನಡ್ಡಾ ಅವರು ಹೇಳಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ತುಂಬಾ ಗೌರವವಿದ್ದು, ಪಕ್ಷದಲ್ಲಿಇರಬೇಕು ಎಂದು ಹೇಳಿದ್ದಾರೆ. ಪಾಸಿಟಿವ್ ಆಗಿ ರಿಸಲ್ಟ್ ಬರುತ್ತೆ ಎನ್ನುವ ವಿಶ್ವಾಸವಿದೆ. ವರಿಷ್ಠರು ಯಾವ ತೀರ್ಮಾನ ಮಾಡ್ತಾರೆ ಕಾದು ನೋಡೋಣ ಎಂದರು.

ಇದನ್ನೂ ಓದಿ:ಸುಮಲತಾ ವಿರುದ್ಧದ ರಾಜಕೀಯ ಕದನಕ್ಕೆ ವಿರಾಮ ಘೋಷಿಸಿದ ಕುಮಾರಸ್ವಾಮಿ, ಪಾಠ ಕಲಿತರೇ ಎಚ್​ಡಿಕೆ!

ಅಲೋಕ್ ವಿಶ್ವನಾಥ್​ಗೆ ಚಿಕ್ಕಬಳ್ಳಾಪುರ ಟಿಕೆಟ್​ ಕೊಡಲ್ಲ ಅಂದ್ರೆ ನನಗೆ ಟಿಕೆಟ್ ಕೊಡಲಿ-ಎಸ್ ಆರ್ ವಿಶ್ವನಾಥ್

ಇನ್ನು ಅಲೋಕ್ ವಿಶ್ವನಾಥ್​ಗೆ ಟಿಕೆಟ್​ ಕೊಡಲ್ಲ ಅಂದ್ರೆ ನನಗೆ ಟಿಕೆಟ್ ಕೊಡಲಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಅಭ್ಯರ್ಥಿ‌ ಎನ್ನುವ ಮೂಲಕ ಶಾಸಕ ಎಸ್ ಆರ್ ವಿಶ್ವನಾಥ್ ಕೂಡ ಹೊಸಬಾಂಬ್ ಸಿಡಿಸಿದ್ದಾರೆ. ಸುಧಾಕರ್ ವಿರುದ್ದ ಈಗಾಗಲೆ ಜಿಲ್ಲೆಯಲ್ಲಿ ವಿರೋಧಿ ಅಲೆ ಇದೆ. ಅವರಿಗೆ ಕೊಡಬಾರದು ಎಂದು ಸಾಕಷ್ಟು ಜನ ಹೇಳ್ತಿದ್ದಾರೆ. ಅಲೋಕ್ ವಿಶ್ವನಾಥ್ ಆರು ತಿಂಗಳಿಂದಲೇ ತಯಾರಿ ಶುರು ಮಾಡಿದ್ದಾರೆ. ಸುಧಾಕರ್ ನನ್ನ ಬಳಿಯು ಮಾತನಾಡಿ ನನಗೆ ಯಾರು ಗೌರವ ಕೊಡ್ತಿಲ್ಲ. ಯಾರು ಕರೆ ಮಾಡ್ತಿಲ್ಲ, ನಾಲ್ಕು ವರ್ಷ ಸಂಸದನಾಗಿರ್ತೀನಿ ಎಂದು ಹೇಳಿದ್ದಾರೆ.

ಆದರೆ ನನ್ನ ಮಗ ಇನ್ನೂ‌ 25 ವರ್ಷ ರಾಜಕೀಯ ಮಾಡಬೇಕಿದೆ. ಹೀಗಾಗಿ ಅಲೋಕ್​ಗೆ ಟಿಕೆಟ್ ಸಿಗಬೇಕು ಎಂದು ಸರ್ವೆಯಲ್ಲೂ ಮುಖಂಡರು ಹೇಳಿದ್ದಾರೆ. ಅಲೋಕ್​ಗೆ ಟಿಕೆಟ್ ಕೊಡಲ್ಲ ಅಂದ್ರೆ ನನಗೆ ಕೊಡಲಿ ನಾನು ಸ್ವರ್ಧೆ ಮಾಡ್ತೀನಿ. ನಮ್ಮ ಕ್ಷೇತ್ರವನ್ನ ಬೇರೊಬ್ಬರಿಗೆ ಬಿಟ್ಟು ಕೊಡಲು ನಾವು ತಯಾರಿಲ್ಲ. ನಮ್ಮ ಯಲಹಂಕ ಒಂದು ಕ್ಷೇತ್ರದಲ್ಲೇ ಎರಡು ಕ್ಷೇತ್ರಗಳಷ್ಟು ಮತಗಳಿವೆ. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎನ್ನುವ ವಿಶ್ವಾಸವಿದೆ. ದೆಹಲಿಯಿಂದ ಆಗಮಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೊಸ ಬಾಂಬ್​ ಸಿಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Wed, 20 March 24