AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಳೀಯ ಪಂಚಾಯತಿಗಳಿಗೆ ಲಕ್ಷ ಲಕ್ಷ ರೂ. ತೇರಿಗೆ ಕಟ್ಟದೆ ಕಳ್ಳಾಟ; ಮೊಬೈಲ್ ಟವರ್ ಕಂಪನಿಗಳಿಗೆ ಅಧಿಕಾರಿಗಳಿಂದ ಶಾಕ್

ಕಳೆದೊಂದು ತಿಂಗಳಿಂದ ನೋಟಿಸ್ ನೀಡಿ ಬೀಗ ಜಡಿದು ತೆರಿಗೆ ಕಟ್ಟಲು ಸೂಚನೆ ಮಾಡಲಾಗಿತ್ತು. ಬೀಗ ಹಾಕುತ್ತಿದ್ದಂತೆ ಎಚ್ಚೆತ್ತ ಮೊಬೈಲ್ ಟವರ್ ಕಂಪನಿಗಳ ಅಧಿಕಾರಿಗಳು, ಬಾಕಿ ಉಳಿಸಿಕೊಂಡಿದ್ದ ಕಂದಾಯದಲ್ಲಿ ಅರ್ಧ ಹಣ ಕಟ್ಟಿ ಬೀಗ ತೆರೆಯುವಂತೆ ಕೋರಿದ್ದಾರೆ. ಅದರಂತೆ ಬೀಗ ಜಡಿಯಲು ಮುಂದಾದ 20 ದಿನಗಳಲ್ಲೇ 21 ಲಕ್ಷ 7 ಸಾವಿರ ರೂಪಾಯಿ ಹಣವನ್ನು ಅಧಿಕಾರಿಗಳು ವಸೂಲಿ ಮಾಡಿದ್ದಾರೆ.

ಸ್ಥಳೀಯ ಪಂಚಾಯತಿಗಳಿಗೆ ಲಕ್ಷ ಲಕ್ಷ ರೂ. ತೇರಿಗೆ ಕಟ್ಟದೆ ಕಳ್ಳಾಟ; ಮೊಬೈಲ್ ಟವರ್ ಕಂಪನಿಗಳಿಗೆ ಅಧಿಕಾರಿಗಳಿಂದ ಶಾಕ್
ಸ್ಥಳೀಯ ಪಂಚಾಯತಿ
TV9 Web
| Edited By: |

Updated on:Mar 24, 2022 | 5:41 PM

Share

ಬೆಂಗಳೂರು: ಸ್ಥಳೀಯ ಪಂಚಾಯತಿಗಳಿಗೆ ಲಕ್ಷ ಲಕ್ಷ ರೂಪಾಯಿ ತೇರಿಗೆ (Tax) ಕಟ್ಟದೆ ವಂಚನೆ ಮಾಡುತ್ತಿದ್ದ​ ಮೊಬೈಲ್ ಟವರ್ (Mobile Tower) ಕಂಪನಿಗಳಿಗೆ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ತೆರಿಗೆ ಕಟ್ಟದ ಮೊಬೈಲ್ ಟವರ್​ಗಳ ವಿದ್ಯುತ್ ಸಂಪರ್ಕ ಕಟ್ ಮಾಡಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಮೊಬೈಲ್ ಟವರ್​ಗಳಿಗೆ ಬೀಗ ಹಾಕುವ ಮೂಲಕ ತಾಲೂಕು ಪಂಚಾಯತಿ ಇಒ(EO) ಶ್ರೀನಾಥ್ ವಿಭಿನ್ನ ರೀತಿಯಲ್ಲಿ ಕಂದಾಯ ವಸೂಲಿ ಮಾಡಿದ್ದಾರೆ.

2016 ರಿಂದ ಕಂದಾಯ ಕಟ್ಟದೆ ಮೊಬೈಲ್​ ಟವರ್​ ಕಂಪನಿಗಳು ಕಳ್ಳಾಟ ಮಾಡುತ್ತಿದ್ದವು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 69 ಟವರ್​ಗಳಿಂದ ಒಟ್ಟು 45 ಲಕ್ಷ ರೂಪಾಯಿ ತೆರಿಗೆ ಬಾಕಿ ಇತ್ತು. ಕಳೆದೊಂದು ತಿಂಗಳಿಂದ ನೋಟಿಸ್ ನೀಡಿ ಬೀಗ ಜಡಿದು ತೆರಿಗೆ ಕಟ್ಟಲು ಸೂಚನೆ ಮಾಡಲಾಗಿತ್ತು. ಬೀಗ ಹಾಕುತ್ತಿದ್ದಂತೆ ಎಚ್ಚೆತ್ತ ಮೊಬೈಲ್ ಟವರ್ ಕಂಪನಿಗಳ ಅಧಿಕಾರಿಗಳು, ಬಾಕಿ ಉಳಿಸಿಕೊಂಡಿದ್ದ ಕಂದಾಯದಲ್ಲಿ ಅರ್ಧ ಹಣ ಕಟ್ಟಿ ಬೀಗ ತೆರೆಯುವಂತೆ ಕೋರಿದ್ದಾರೆ.

ಅದರಂತೆ ಬೀಗ ಜಡಿಯಲು ಮುಂದಾದ 20 ದಿನಗಳಲ್ಲೇ 21 ಲಕ್ಷ 7 ಸಾವಿರ ರೂಪಾಯಿ ಹಣವನ್ನು ಅಧಿಕಾರಿಗಳು ವಸೂಲಿ ಮಾಡಿದ್ದಾರೆ. ಅಧಿಕಾರಿಗಳ‌ ಕಾರ್ಯಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳು ಸದ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಯಚೂರು: ಜಿಲ್ಲಾಡಳಿತ ಮೂಲಸೌಕರ್ಯ ನೀಡದ ಆರೋಪ; ಚರಂಡಿಯಲ್ಲಿದ್ದ ಕಸ ಸುರಿದುಕೊಂಡು ಪ್ರತಿಭಟನೆಗೆ ಯತ್ನಿಸಿದ ಸಫಾಯಿ ಕರ್ಮಚಾರಿ

ರಾಯಚೂರು: ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ವೈಫಲ್ಯವಾದ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಬಳಿ ಪ್ರತಿಭಟನೆ ವೇಳೆ ಸಫಾಯಿ ಕರ್ಮಚಾರಿ ಗೀತಾಸಿಂಗ್ ಚರಂಡಿಯಲ್ಲಿದ್ದ ಕಸ ಸುರಿದುಕೊಂಡು ಪ್ರತಿಭಟನೆಗೆ ಯತ್ನಿಸಿದ್ದಾರೆ. ಜಿಲ್ಲಾಡಳಿತ ಮೂಲಸೌಕರ್ಯ ನೀಡದ ಆರೋಪ ಮಾಡಿದ್ದು, ಇಂದು (ಮಾರ್ಚ್​ 24) ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಬೇರೊಬ್ಬರ ಮೂಲಕ ಸಫಾಯಿ ಕರ್ಮಚಾರಿ ಗೀತಾಸಿಂಗ್ ಚರಂಡಿ ವೇಸ್ಟೇಜ್ ತರಿಸಿಕೊಂಡಿದ್ದು, ಮೈ ಮೇಲೆ ಸುರಿದುಕೊಳ್ಳಲು ಯತ್ನಿಸಿದ್ದಾರೆ.

ಕಸವನ್ನು ಮೈಮೇಲೆ ಸುರಿದುಕೊಳ್ಳುವ ವೇಳೆ ಸಫಾಯ ಕರ್ಮಚಾರಿ ಗೀತಾಸಿಂಗ್ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯ ಸದರ್ ಬಜಾರ್ ಠಾಣೆ ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕೊಡಿಸುವುದಾಗಿ ಆನ್​ಲೈನ್​ ವಂಚನೆ! ಬೆಂಗಳೂರಿನಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿ ಅರೆಸ್ಟ್

ಬಿಲ್​ ಪಾವತಿಸದ ಕಾರಣ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ಸಂಪರ್ಕ ಕಡಿತ

Published On - 5:15 pm, Thu, 24 March 22