AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಲ್​ ಪಾವತಿಸದ ಕಾರಣ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ಸಂಪರ್ಕ ಕಡಿತ

ಚೆಸ್ಕಾಂನ ನಿರ್ಧಾರದಿಂದಾಗಿ ಮೈಸೂರು ಸರ್ಕಾರಿ ಕಚೇರಿಗಳು ಕಗ್ಗತ್ತಲಲ್ಲಿ ಮುಳುಗಿವೆ. ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನ ಸೌಧ, ಸಬ್ ರಿಜಿಸ್ಟಾರ್​ ಕಚೇರಿ, PWD, ಸಣ್ಣನೀರಾವರಿ, ಮಹಾರಾಣಿ ಕಾಲೇಜು ಸೇರಿದಂತೆ ಬೇರೆ ಬೇರೆ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ಸಂಪರ್ಕ ಸ್ಥಗಿತಗೊಂಡಿದೆ.

ಬಿಲ್​ ಪಾವತಿಸದ ಕಾರಣ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ಸಂಪರ್ಕ ಕಡಿತ
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Aug 31, 2021 | 8:56 AM

Share

ಮೈಸೂರು: ಹಲವು ಸಮಯದಿಂದ ವಿದ್ಯುತ್​ ಬಿಲ್​ ಪಾವತಿಸದೇ ಬಾಕಿ ಉಳಿಸಿಕೊಂಡ ಮೈಸೂರಿನ ಸರ್ಕಾರಿ ಕಚೇರಿಗಳಿಗೆ (Mysuru Government Offices) ಚೆಸ್ಕಾಂ (CHESCOM) ಶಾಕ್​ ನೀಡಿದೆ. ಮೈಸೂರು ಜಿಲ್ಲಾಧಿಕಾರಿ (Mysuru DC Office), ತಾಲ್ಲೂಕು ಕಚೇರಿ ಸೇರಿ ಒಟ್ಟು 20ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿಗೆ ಸೋಮವಾರ ಬೆಳಗ್ಗೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದ್ದು, ಬಾಕಿ ಬಿಲ್ ಪಾವತಿಸುವ ತನಕವೂ ವಿದ್ಯುತ್ ಸ್ಥಗಿತಗೊಳಿಸಲು ಚೆಸ್ಕಾಂ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ಬಿಲ್​ ಪಾವತಿಸುವಂತೆ ಮನವಿ ಮಾಡಿದರೂ ಸ್ಪಂದಿಸದ ಇಲಾಖಾ ಕಚೇರಿಗಳ ಪಟ್ಟಿಮಾಡಿಕೊಂಡ ಚೆಸ್ಕಾಂ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ.

ಚೆಸ್ಕಾಂನ ನಿರ್ಧಾರದಿಂದಾಗಿ ಮೈಸೂರು ಸರ್ಕಾರಿ ಕಚೇರಿಗಳು ಕಗ್ಗತ್ತಲಲ್ಲಿ ಮುಳುಗಿವೆ. ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನ ಸೌಧ, ಸಬ್ ರಿಜಿಸ್ಟಾರ್​ ಕಚೇರಿ, PWD, ಸಣ್ಣನೀರಾವರಿ, ಮಹಾರಾಣಿ ಕಾಲೇಜು ಸೇರಿದಂತೆ ಬೇರೆ ಬೇರೆ ಸರ್ಕಾರಿ ಕಚೇರಿಗಳಿಗೆ ವಿದ್ಯುತ್​ ಸಂಪರ್ಕ ಸ್ಥಗಿತಗೊಂಡಿದೆ. ಇದರಿಂದಾಗಿ ಕಚೇರಿಗಳ ಕೆಲಸದಲ್ಲಿ ವ್ಯತ್ಯಯವಾಗುತ್ತಿದ್ದು, ಅಧಿಕಾರಿಗಳು ಹಾಗೂ ಕೆಲಸ ಮಾಡಿಸಿಕೊಳ್ಳಲು ಬಂದ ಜನ ಸಾಮಾನ್ಯರು ಪರದಾಡುವಂತಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಟ್ಟು 5 ವಿದ್ಯುತ್​ ಮೀಟರ್​ಗಳಿಂದ 3 ಲಕ್ಷದ 50 ಸಾವಿರ ರೂಪಾಯಿ ಬಿಲ್ ಬಾಕಿ ಇದೆ. ಮಿನಿ ವಿಧಾನಸೌಧದಲ್ಲಿ ಒಟ್ಟು 6 ಮೀಟರ್​ಗಳಿಂದ 3 ಲಕ್ಷದ 90 ಸಾವಿರ ರೂಪಾಯಿ ಬಿಲ್ ಬಾಕಿ ಉಳಿದಿದೆ. PWD ಕಚೇರಿಯಲ್ಲಿ 56 ಸಾವಿರ ರೂ, ಸಣ್ಣ ನೀರಾವರಿ ಇಲಾಖೆ 18 ಸಾವಿರ ರೂ ಬಿಲ್ ಬಾಕಿ ಇದೆ ಎನ್ನಲಾಗಿದೆ. ವಿದ್ಯುತ್​ ಸಂಪರ್ಕ ಕಡಿತದಿಂದಾಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಕೆಲಸವೂ ಸ್ಥಗಿತವಾಗಿದ್ದು, ತಾಲ್ಲೂಕು ಕಚೇರಿಯಲ್ಲಿ ಕೆಲಸ ಸ್ಥಗಿತದಿಂದ ಜನರು ಪರದಾಡಬೇಕಾಗಿದೆ. ಇತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನರೇಟರ್ ಬಳಸಿ, ಮಿತವಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಈ ಹಿಂದೆ ಮೈಸೂರು ಬೆಟ್ಟದ ಬಳಿ ಸುಮಾರು ದರೋಡೆ ಮಾಡಿದ್ವಿ, ಯಾರೂ ದೂರು ಕೊಡಲ್ಲ ಎಂಬ ಧೈರ್ಯವಿತ್ತು: ಆರೋಪಿಗಳು 

ಕೋಳಿ ಫಾರಂ​ಗೆ ಅಕ್ರಮ ವಿದ್ಯುತ್ ಸಂಪರ್ಕ; 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

(CESC Cuts Power supply to Mysuru Govt offices Including DC Office for not paying Bills)

ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು