ಮೈಸೂರು: ವೃತ್ತಿ ವೈಷಮ್ಯದಿಂದ ದರೋಡೆಗೆ ಸುಪಾರಿ ನೀಡಿದ್ದ ಬೇರೊಂದು ಗೋಲ್ಡ್ ಅಂಗಡಿಯ ಮಾಲೀಕನ ಬಂಧನ
ನಾಲ್ವರು ದುಷ್ಕರ್ಮಿಗಳು ಒಳ ನುಗ್ಗಿ ಮಾಲೀಕನಿಗೆ ಥಳಿಸಿ, ಬಳಿಕ ಕೈ ಕಾಲು ಕಟ್ಟಿ ಚಿನ್ನಾಭರಣ ಲೂಟಿ ಮಾಡಿದ್ದರು. ನಂತರ ಅಂಗಡಿಯ ಬಾಗಿಲು ತೆಗೆದು ಓಡಿ ಹೋಗಿದ್ದರು.
ಮೈಸೂರು: ನಗರದಲ್ಲಿ ದರೋಡೆ, ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಆಭರಣದಂಗಡಿ ಮಾಲೀಕನನ್ನು ಬಂಧಿಸಲಾಗಿದೆ. ಬಾಲಾಜಿ ಬ್ಯಾಂಕರ್ಸ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆಗೆ ಸುಪಾರಿ ನೀಡಿದ್ದ ಎಂಬ ಆರೋಪದಲ್ಲಿ ಮಾಲೀಕ ಮಹೇಂದ್ರನನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ನಲ್ಲಿ ಕಳ್ಳತನವಾಗಿತ್ತು. ಇದಕ್ಕೆ ಆರೋಪಿ ಮಹೇಂದ್ರ ಎಂಬುವವನು ಸುಪಾರಿ ನೀಡಿದ್ದ ಎಂದು ಹೇಳಲಾಗುತ್ತಿದೆ. ವೃತ್ತಿ ವೈಷಮ್ಯದಿಂದ ದರೋಡೆಗೆ ಸುಪಾರಿ ನೀಡಿದ್ದು, ಪ್ರಮುಖದ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.
ನಾಲ್ವರು ದುಷ್ಕರ್ಮಿಗಳು ಒಳ ನುಗ್ಗಿ ಮಾಲೀಕನಿಗೆ ಥಳಿಸಿ, ಬಳಿಕ ಕೈ ಕಾಲು ಕಟ್ಟಿ ಚಿನ್ನಾಭರಣ ಲೂಟಿ ಮಾಡಿದ್ದರು. ನಂತರ ಅಂಗಡಿಯ ಬಾಗಿಲು ತೆಗೆದು ಓಡಿ ಹೋಗಿದ್ದರು. ಈ ವೇಳೆ ಅಡ್ಡ ಬಂದವರ ಮೇಲೆ ಗುಂಡು ಹಾಯಿಸಿ, ಕಿವಿ ಓಲೆ ಖರೀದಿಸಲು ಬಂದಿದ್ದ ದಡದಹಳ್ಳಿ ಚಂದ್ರುಗೆ ಗುಂಡು ತಗಲಿ ಸಾವನ್ನಪ್ಪಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಆಗಸ್ಟ್ 24ರಂದು ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಬೆಚ್ಚಿ ಬೀಳಿಸಿದ ದರೋಡೆ ಶೂಟೌಟ್ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಮೈಸೂರು ಕಮಿಷನರ್ ಚಂದ್ರಗುಪ್ತ ಘೋಷಿಸಿದ್ದರು. ತನಿಖೆಗೆ 25 ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿತ್ತು. 80 ಪೊಲೀಸರು ತನಿಖೆಯಲ್ಲಿ ಭಾಗಿಯಾಗಲಿದ್ದರು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ರಚನೆ ಮಾಡಲಾಗಿತ್ತು. ಇದರ ಜೊತೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿ, ಇಲಾಖೆಯಿಂದ ರೂ. 5 ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದರು.
ಇದನ್ನೂ ಓದಿ
ಈ ಹಿಂದೆ ಮೈಸೂರು ಬೆಟ್ಟದ ಬಳಿ ಸುಮಾರು ದರೋಡೆ ಮಾಡಿದ್ವಿ, ಯಾರೂ ದೂರು ಕೊಡಲ್ಲ ಎಂಬ ಧೈರ್ಯವಿತ್ತು: ಆರೋಪಿಗಳು
ಮೈಸೂರಿನ ದರೋಡೆ, ಶೂಟೌಟ್ ಪ್ರಕರಣದ 6 ಆರೋಪಿಗಳ ಬಂಧನ; ಪ್ರವೀಣ್ ಸೂದ್ ಮಾಹಿತಿ
(A gold shop owner has been arrested by police on Supari of robbery in mysuru)
Published On - 9:59 am, Tue, 31 August 21