ಈ ಹಿಂದೆ ಮೈಸೂರು ಬೆಟ್ಟದ ಬಳಿ ಸುಮಾರು ದರೋಡೆ ಮಾಡಿದ್ವಿ, ಯಾರೂ ದೂರು ಕೊಡಲ್ಲ ಎಂಬ ಧೈರ್ಯವಿತ್ತು: ಆರೋಪಿಗಳು

ಈ ಹಿಂದಿನ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು‌ ಕೊಡದಿರುವುದೆ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿದ್ದು, ದರೋಡೆ ನಡೆಸುವುದು ಸುಲಭವಾಗಿತ್ತು. ದರೋಡೆಯ ನಂತರ ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ ಎಂಬುದನ್ನು ಕಂಡುಕೊಂಡ ಆರೋಪಿಗಳು ಎಗ್ಗಿಲ್ಲದೆ ದುಷ್ಕೃತ್ಯ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಹಿಂದೆ ಮೈಸೂರು ಬೆಟ್ಟದ ಬಳಿ ಸುಮಾರು ದರೋಡೆ ಮಾಡಿದ್ವಿ, ಯಾರೂ ದೂರು ಕೊಡಲ್ಲ ಎಂಬ ಧೈರ್ಯವಿತ್ತು: ಆರೋಪಿಗಳು
ನಿರ್ಜನ ಪ್ರದೇಶಗಳೇ ಆರೋಪಿಗಳ ಟಾರ್ಗೆಟ್​ ಆಗಿತ್ತು
Follow us
TV9 Web
| Updated By: Skanda

Updated on: Aug 29, 2021 | 1:36 PM

ಮೈಸೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಒಂದೊಂದೇ ವಿಚಾರಗಳು ಪೊಲೀಸರಿಗೆ ಲಭ್ಯವಾಗುತ್ತಿದ್ದು, ಈ ದುಷ್ಕೃತ್ಯ ಎಸಗಲು ಆರೋಪಿಗಳಿಗೆ ಧೈರ್ಯ ನೀಡಿದ ಅಂಶವೊಂದು ಬಯಲಾಗಿದೆ. ಈ ಹಿಂದೆಯೂ ಮೈಸೂರಿನಲ್ಲಿ ಅದರಲ್ಲೂ ಚಾಮುಂಡಿ ಬೆಟ್ಟದ ಸುತ್ತಮುತ್ತಲ ಭಾಗದಲ್ಲಿ ಬಂಧಿತ ಆರೋಪಿಗಳು ಹಲವು ದರೋಡೆ ಮಾಡಿರುವ ಕುರಿತು ಬಾಯ್ಬಿಟ್ಟಿದ್ದಾರೆ. ಈ ಹಿಂದೆ ಮಾಡಿದ್ದ ಅಪರಾಧಗಳ ಬಗ್ಗೆ ದೂರು ನೀಡಿರಲಿಲ್ಲ. ಯಾರೂ ಕೂಡ ನಮ್ಮ ವಿರುದ್ಧ ದೂರು ನೀಡದ ಹಿನ್ನೆಲೆ. ಇಂಥ ದುಷ್ಕೃತ್ಯವೆಸಗಲು ನಾವು ಮೈಸೂರಿಗೆ ಬರುತ್ತಿದ್ದೆವು. ಚಾಮುಂಡಿ ಬೆಟ್ಟದ ಸುತ್ತಮುತ್ತ ಅಪರಾಧ ಮಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ.

ಈ ಹಿಂದಿನ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು‌ ಕೊಡದಿರುವುದೆ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿದ್ದು, ದರೋಡೆ ನಡೆಸುವುದು ಸುಲಭವಾಗಿತ್ತು. ದರೋಡೆಯ ನಂತರ ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ ಎಂಬುದನ್ನು ಕಂಡುಕೊಂಡ ಆರೋಪಿಗಳು ಎಗ್ಗಿಲ್ಲದೆ ದುಷ್ಕೃತ್ಯ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ತಾವು ಮಾಡುವ ಕ್ರೈಂ ಪೊಲೀಸರಿಗೆ ಗೊತ್ತಾಗುತ್ತಿಲ್ಲ ಎಂಬುದೇ ಇವರಿಗೆ ಪದೇ ಪದೇ ಅಪರಾಧ ಎಸಗಲು ಪ್ರೇರಣೆಯಾಗಿದ್ದು, ಪೊಲೀಸರ ವಿಚಾರಣೆ ವೇಳೆ ಆರೋಪಿಗಳೇ ಅದನ್ನು ಹೇಳಿಕೊಂಡಿದ್ದಾರೆ. ಹಿಂದೆ ಸಾಕಷ್ಟು ದರೋಡೆ ಪ್ರಕರಣಗಳನ್ನ ನಡೆಸಿದ್ದರೂ ಯಾರು ಕೂಡ ಮರ್ಯಾದೆಗೆ ಅಂಜಿ ದೂರು ಕೊಡಲು‌ ಮುಂದಾಗಿಲ್ಲ. ಈ ಕಾರಣದಿಂದಲೆ ತಮಗೆ ಮೈಸೂರಿನ ಆ ಸ್ಥಳ ದರೋಡೆಗೆ ಸೇಫ್ ಎಂದು ಆರೋಪಿಗಳು ಭಾವಿಸಿದ್ದಾರೆ. ಅದಕ್ಕೆ ತಮಗೆ ಚಿರಪರಿಚಿತ ಚಾಮುಂಡಿ ಬೆಟ್ಟದ ಸುತ್ತಮುತ್ತ ಕೃತ್ಯ ನಡೆಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಒಂದುವೇಳೆ, ಹಿಂದೆ ನಡೆದ ಪ್ರಕರಣದಲ್ಲಿ ಯಾರದರೂ ಒಬ್ಬರು ದೂರು ಕೊಟ್ಟಿದ್ದರೆ. ಇವರನ್ನು ಮೊದಲೇ ಹಿಡಿಯಬಹುದಾಗಿತ್ತು ಅಥವಾ ಇನ್ನೂ ಹೆಚ್ಚಿನ ಪೊಲೀಸ್​ ಭದ್ರತೆ ವಹಿಸಬಹುದಿತ್ತು. ಆಗ ಈ ರೀತಿ ಕೃತ್ಯ ನಡೆಯುತ್ತಿರಲಿಲ್ಲ‌‌‌. ಆದರೆ, ಮೋಸ ಹೋದವರು ಯಾರೂ ಬಾಯ್ಬಿಡದ ಕಾರಣ ಆರೋಪಿಗಳು ಇದೀಗ ಅತ್ಯಾಚಾರ ನಡೆಸುವುದಕ್ಕೂ ಹಿಂಜರಿಯಲಿಲ್ಲ ಎನ್ನುವುದು ವಿಷಾದನೀಯ.

ಆರೋಪಿಗಳು ತನಿಖೆ ವೇಳೆ ಮತ್ತೊಂದು ವಿಚಾರವನ್ನು ಬಾಯ್ಬಿಟ್ಟಿದ್ದು, ದುಷ್ಕೃತ್ಯದ ವೇಳೆ ಇದ್ದಿದ್ದು 6 ಜನ ಅಲ್ಲ. ಇನ್ನೋರ್ವ ಕೂಡಾ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ. ಆ ಮೂಲಕ ಅತ್ಯಾಚಾರದಲ್ಲಿ 6 ಜನ ಭಾಗಿಯಾಗಿದ್ದು, 5 ಜನರನ್ನು ಪತ್ತೆ ಹಚ್ಚಿದ್ದೇವೆ ಓರ್ವ ತಲೆಮರಿಸಿಕೊಂಡಿದ್ದಾನೆ ಎಂದಿದ್ದ ಪೊಲೀಸರಿಗೆ ಇನ್ನೂ ಒಬ್ಬ ತಪ್ಪಿಸಿಕೊಂಡಿರುವುದು ಗೊತ್ತಾಗಿದೆ.

ಸದ್ಯ ತಮಿಳುನಾಡು ಮೂಲದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇನ್ನೋರ್ವ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿದ್ದರು. ಆದರೆ, ಈಗ ತಪ್ಪಿಸಿಕೊಂಡಿರುವುದು ಇಬ್ಬರು ಎಂಬ ಮಾಹಿತಿ ಲಭ್ಯವಾಗಿದ್ದು, ಒಟ್ಟು 7 ಜನ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಹೀಗಾಗಿ ಆರೋಪಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಇನ್ನಿಬ್ಬರಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

ಇದನ್ನೂ ಓದಿ: ನಿನ್ನೆ ಬಂಧನಕ್ಕೊಳಗಾಗಿದ್ದ ಅತ್ಯಾಚಾರ ಆರೋಪಿ ಠಾಣೆ ಶೌಚಾಲಯದಲ್ಲಿ ನೇಣಿಗೆ ಶರಣು; ಪೋಷಕರ ಆಕ್ರೋಶ 

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳು ಪೊಲೀಸರ ಬಲೆಗೆ ಬೀಳಲು ಈ ಸುಳಿವುಗಳೇ ಮುಖ್ಯ ಕಾರಣ

(Mysuru Gang Rape Case Update culprits have done many robberies before near Chamundi Hill but no one gave complaint)