Mysuru Gang Rape: ಜೇಬಲ್ಲಿ ಸದಾ ಕಾಂಡೋಮ್​ ಇಟ್ಟುಕೊಂಡೇ ಓಡಾಡುತ್ತಿದ್ದ ಆರೋಪಿ; 3 ಯುವತಿಯರು ಕೈಕೊಟ್ಟ ಬಳಿಕ ವಿಕೃತನಾಗಿದ್ದ

ಕಾಮುಕನಾಗಿರುವ ಆತ ಯಾವಾಗಲೂ ಜೇಬಿನಲ್ಲಿ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತಿದ್ದ. ಉಳಿದ ಆರೋಪಿಗಳು ದರೋಡೆ ನಡೆಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರೆ ಈತ ಹೆಣ್ಣುಮಕ್ಕಳನ್ನು ತನ್ನಿಚ್ಛೆಯಂತೆ ಬಳಸಿಕೊಳ್ಳಲು ಹೊಂಚುಹಾಕುತ್ತಿದ್ದ ಎಂದು ಗೊತ್ತಾಗಿದೆ.

Mysuru Gang Rape: ಜೇಬಲ್ಲಿ ಸದಾ ಕಾಂಡೋಮ್​ ಇಟ್ಟುಕೊಂಡೇ ಓಡಾಡುತ್ತಿದ್ದ ಆರೋಪಿ; 3 ಯುವತಿಯರು ಕೈಕೊಟ್ಟ ಬಳಿಕ ವಿಕೃತನಾಗಿದ್ದ
ದುಷ್ಕೃತ್ಯ ನಡೆದ ಸ್ಥಳ
Follow us
TV9 Web
| Updated By: Skanda

Updated on:Aug 30, 2021 | 8:05 AM

ಮೈಸೂರು: ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ (Gang Rape) ಸಂಬಂಧಿಸಿದಂತೆ ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು (Mysuru Police), ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಹುಡಕಾಟ ಮುಂದುವರೆಸಿದ್ದಾರೆ. ಇತ್ತ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಸಾಕಷ್ಟು ಮಾಹಿತಿ ಲಭ್ಯವಾಗುತ್ತಿದೆ. ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಓರ್ವ ಭಗ್ನ ಪ್ರೇಮಿಯಾಗಿದ್ದ ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಆತನೇ ಬಾಯಿಬಿಟ್ಟಿದ್ದು, ಈ ಹಿಂದೆ ತಾನು ಮೂವರು ಯುವತಿಯರನ್ನು ಪ್ರೀತಿಸಿದ್ದಾಗಿ ಹಾಗೂ ಅವರೆಲ್ಲರೂ ತನ್ನಿಂದ ದೂರಾಗಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ, ಮೂವರು ಯುವತಿಯರು ಕೈಕೊಟ್ಟ ಬಳಿಕ ಆತ ವಿಕೃತನಾಗಿದ್ದು, ಅವಕಾಶ ಸಿಕ್ಕಾಗಲೆಲ್ಲ ಯುವತಿಯರಿಗೆ ಲೈಂಗಿಕ‌ ದೌರ್ಜನ್ಯ (Sexual Harassment) ಎಸಗುತ್ತಿದ್ದ ಎಂದು ತಿಳಿದುಬಂದಿದೆ.

ಅಂತೆಯೇ ಆರೋಪಿಯ ಜೇಬಿನಲ್ಲಿ ಸದಾ ಕಾಂಡೋಮ್ ಪ್ಯಾಕೆಟ್ ಇರುತ್ತಿತ್ತು ಎಂಬ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಮುಕನಾಗಿರುವ ಆತ ಯಾವಾಗಲೂ ಜೇಬಿನಲ್ಲಿ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತಿದ್ದ. ಉಳಿದ ಆರೋಪಿಗಳು ದರೋಡೆ ನಡೆಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರೆ ಈತ ಹೆಣ್ಣುಮಕ್ಕಳನ್ನು ತನ್ನಿಚ್ಛೆಯಂತೆ ಬಳಸಿಕೊಳ್ಳಲು ಹೊಂಚುಹಾಕುತ್ತಿದ್ದ ಎಂದು ಗೊತ್ತಾಗಿದೆ.

ಸದರಿ ಅತ್ಯಾಚಾರಕ್ಕೂ ಮುನ್ನ ಈತ ಅನೇಕ ಯುವತಿಯರು, ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ನಿರ್ಜನ ಪ್ರದೇಶಕ್ಕೆ ಪುರುಷರ ಜೊತೆ ಬರುವ ಮಹಿಳೆಯರು ಹಾಗೂ ಪ್ರೇಮಿಗಳನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸಿ, ದರೋಡೆ ನಂತರ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಗೊತ್ತಾಗಿದೆ. ಉಳಿದವರು ಮದ್ಯಕ್ಕಾಗಿ, ಹಣಕ್ಕಾಗಿ ದರೋಡೆ ನಡೆಸಿದರೆ ಈತನ ಉದ್ದೇಶವೇ ಲೈಗಿಂಕ ದೌರ್ಜನ್ಯವಾಗಿತ್ತು ಎನ್ನಲಾಗಿದೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅತ್ಯಾಚರ ನಡೆದ ಸ್ಥಳದಲ್ಲೂ ಕಾಂಡೋಮ್​ ಸಿಕ್ಕಿದ್ದು, ಅದು ಈತನದ್ದೇ ಎಂದು ಹೇಳಲಾಗಿದೆ. ಮೂವರು ಯುವತಿಯರು ಕೈ ಕೊಟ್ಟ ಮೇಲೆ ವಿಕೃತನಾಗಿದ್ದ ಆರೋಪಿ ಸದಾ ಕಾಂಡೋಮ್ ಇಟ್ಟುಕೊಂಡು ಅವಕಾಶ ಸಿಕ್ಕಗಾಲೆಲ್ಲಾ ಯುವತಿಯರ ಮೇಲೆ ಲೈಂಗಿಕ‌ ದೌಜ್ಯನ್ಯ ಎಸಗುತ್ತಿದ್ದ ಎಂಬ ಮಾಹಿತಿ ಮೈಸೂರು ಪೊಲೀಸರಿಗೆ ಮಹತ್ವದ ಸಾಕ್ಷ್ಯವಾಗಲಿದೆ.

ಈ ಆರೋಪಿಗಳಿಗೆ ಇಂದು ಪೊಲೀಸರಿಂದ 2ನೇ ದಿನದ ವಿಚಾರಣೆ ನಡೆಯಲಿದ್ದು, ಮೈಸೂರಿನ ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮುಂದುವರೆಯಲಿದೆ. ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಮಾರ್ಗದರ್ಶನದಲ್ಲಿ ಕಾನೂನು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಗುಂಟಿ, ದೇವರಾಜ ವಿಭಾಗದ ಎಸಿಪಿ ಡಾ.ಎಂ.ಎನ್.ಶಶಿಧರ್, ಆಲನಹಳ್ಳಿ ಇನ್ಸ್‌ಪೆಕ್ಟರ್ ರವಿಶಂಕರ್‌ರಿಂದ ವಿಚಾರಣೆ ನಡೆಯಲಿದ್ದು, ಇಂದು ಪೊಲೀಸರು ಸ್ಥಳ ಮಹಜರು ಮಾಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ಹಿಂದೆ ಮೈಸೂರು ಬೆಟ್ಟದ ಬಳಿ ಸುಮಾರು ದರೋಡೆ ಮಾಡಿದ್ವಿ, ಯಾರೂ ದೂರು ಕೊಡಲ್ಲ ಎಂಬ ಧೈರ್ಯವಿತ್ತು: ಆರೋಪಿಗಳು 

ಮದುವೆ ಮಾಡಿಕೊಟ್ಟಿಲ್ಲ ಎಂದು ಹುಡುಗಿಯ ತಂದೆಯನ್ನೇ ಕೊಂದಿದ್ದ; ಮೈಸೂರು ರೇಪ್ ಕೇಸ್ ಆರೋಪಿಯ ಹಿನ್ನೆಲೆ ಬಯಲಿಗೆ

(Mysuru Gang Rape Case Update a culprit used to carry condom with him after breaking up with 3 girls)

Published On - 8:03 am, Mon, 30 August 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ