AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕೊಡಿಸುವುದಾಗಿ ಆನ್​ಲೈನ್​ ವಂಚನೆ! ಬೆಂಗಳೂರಿನಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿ ಅರೆಸ್ಟ್

ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮಾತನಾಡಿದ್ದರು. ಡಿಸ್ಕೌಂಟ್ ಕೊಡಿಸುವುದಾಗಿ ಹೇಳಿ ವಿವಿಧ ಶುಲ್ಕದ ಹೆಸರಲ್ಲಿ ಒಂದು ಲಕ್ಷ ರೂಪಾಯಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕೊಡಿಸುವುದಾಗಿ ಆನ್​ಲೈನ್​ ವಂಚನೆ! ಬೆಂಗಳೂರಿನಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿ ಅರೆಸ್ಟ್
ಬಂಧಿತ ಮಹಿಳೆ
TV9 Web
| Edited By: |

Updated on:Mar 24, 2022 | 9:06 AM

Share

ಹುಬ್ಬಳ್ಳಿ: ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಕೊಡಿಸುವುದಾಗಿ ಹುಬ್ಬಳ್ಳಿಯ ಸುರೇಶ್ ಕುಮಾರ್ ಎಂಬುವವರಿಗೆ ಅಪರಿಚಿತ ವ್ಯಕ್ತಿಗಳು ಆನ್​ಲೈನ್​ (Online) ವಂಚನೆ ಮಾಡಿದ್ದಾರೆ. ಸುರೇಶ್ ಕುಮಾರ್​ಗೆ ಆನ್​ಲೈನ್​ ವಂಚಕರು ಸುಮಾರು ಒಂದು ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. ಸುರೇಶ್ ಕುಮಾರ್ 499 ರೂಪಾಯಿ ತುಂಬಿ ಕೋಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದ್ದರು. ಅದೇ ದಿನ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮಾತನಾಡಿದ್ದರು. ಡಿಸ್ಕೌಂಟ್ ಕೊಡಿಸುವುದಾಗಿ ಹೇಳಿ ವಿವಿಧ ಶುಲ್ಕದ ಹೆಸರಲ್ಲಿ ಒಂದು ಲಕ್ಷ ರೂಪಾಯಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿ ಅರೆಸ್ಟ್!: ಬೆಂಗಳೂರು: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ಜಯಂತಿ ಅಲಿಯಾಸ್ ಕುಟ್ಟಿಯಮ್ಮ ಬಂಧಿತ ಆರೋಪಿತೆ. ನಗರದ ಒಟ್ಟು ಇಪ್ಪತ್ತು ಮೂರು ಕಳ್ಳತನ ಪ್ರಕರಣದಲ್ಲಿ ಈಕೆ ಅರೋಪಿತೆಯಾಗಿದ್ದಾಳೆ. ಮಹಿಳೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತಿದ್ದಳಿ. ಬಳಿಕ ಒಂಟಿಯಾಗಿ ಮನೆಗೆಳಿಗೆ ಹೋಗಿ, ಮನೆ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಳು.

ಬಂಧಿತ ಮಹಿಳೆ ಒಂದೆ ಏರಿಯಾದಲ್ಲಿ ಎರಡು ಕಳ್ಳತನ ಮಾಡಿದ್ದಾಳೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಎರಡು ಹೊಸ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಅಂಬೇಡ್ಕರ್ ಬ್ಯಾನರ್ ವಿರೂಪಗೊಳಿಸಿ ಆರೋಪಿಗಳು ಸೆರೆ: ಅಂಬೇಡ್ಕರ್ ಬ್ಯಾನರ್ ವಿರೂಪಗೊಳಿಸಿದ ಆರೋಪದ ಹಿನ್ನೆಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೋಣಾಜೆ ಪೊಲೀಸರು ಶರಣ್ (24), ಸುಜಿತ್ (26) ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳು ಮಂಗಳೂರು ಹೊರವಲಯದ ಅಸ್ಶೆಗೋಳಿಯಲ್ಲಿ ಅಳವಡಿಸಿದ ಅಂಬೆಡ್ಕರ್ ಜಯಂತಿ ಫ್ಲೆಕ್ಸ್​ಗೆ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಅರಿವಿನ ಜ್ಯೋತಿ ಎಂದರೇನು? ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹೇಳ್ತಾರೆ ಕೇಳಿ

‘ನಿಮ್ಮ ದೇಶದಲ್ಲಿರುವ ಪುಟಿನ್ ವಿಹಾರನೌಕೆ ಮತ್ತು ಆಸ್ತಿಗಳನ್ನು ಜಪ್ತಿ ಮಾಡಿ’: ಇಟಲಿ ಸಂಸತ್ತಿಗೆ ವೊಲೊದಿಮಿರ್ ಜೆಲೆನ್ಸ್ಕಿ ಆಗ್ರಹ

Published On - 8:57 am, Thu, 24 March 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್