ಭಾರತ್ ಜೋಡೋ ಅಲ್ಲ, ದೇಶವನ್ನ ತುಂಡರಿಸುವ ಕೆಲಸ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಕಾರ್ಯಕ್ರಮಕ್ಕೆ ನಳಿನ್ ಕುಮಾರ್ ಲೇವಡಿ
ಸ್ವಾತಂತ್ರ್ಯ ಭಾರತದ ನಂತರ ಒಂದೇ ಮಾತರಂ, ರಘುಪತಿ ರಾಘವ ರಾಜಾ ರಾಂ ಹಾಡನ್ನು ತುಂಡರಿಸಿದ್ದು ಕಾಂಗ್ರೆಸ್, ರಾಷ್ಟ್ರವನ್ನು ಹಿಬ್ಭಾಗ ಮಾಡಿದ್ದು, ಜಾತಿ ಜಾತಿಗಳ ನಡುವೆ ಅಂತರ ತಂದಿದ್ದು ಕಾಂಗ್ರೆಸ್.
ದೇವನಹಳ್ಳಿ: ಕಾಂಗ್ರೆಸ್(Congress) ಪಕ್ಷದ ಭಾರತ್ ಜೋಡೋ(Bharat Jodo) ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್(Nalin Kumar Kateel) ಲೇವಡಿ ಮಾಡಿದ್ದಾರೆ. ಇದು ಭಾರತ್ ಜೋಡೋ ಅಲ್ಲ, ದೇಶವನ್ನ ತುಂಡರಿಸುವ ಕೆಲಸ ಎಂದು ದೊಡ್ಡಬಳ್ಳಾಪುರದಲ್ಲಿ ವ್ಯಂಗ್ಯವಾಡಿದ್ದಾರೆ.
ಸ್ವಾತಂತ್ರ್ಯ ಭಾರತದ ನಂತರ ಒಂದೇ ಮಾತರಂ, ರಘುಪತಿ ರಾಘವ ರಾಜಾ ರಾಂ ಹಾಡನ್ನು ತುಂಡರಿಸಿದ್ದು ಕಾಂಗ್ರೆಸ್, ರಾಷ್ಟ್ರವನ್ನು ಹಿಬ್ಭಾಗ ಮಾಡಿದ್ದು, ಜಾತಿ ಜಾತಿಗಳ ನಡುವೆ ಅಂತರ ತಂದಿದ್ದು ಕಾಂಗ್ರೆಸ್. ಜನ ಇವತ್ತು ಕಾಂಗ್ರೆಸನ್ನು ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಜೊತೆಯೇ ಕಾಂಗ್ರೆಸ್ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಇನ್ನು ಮತ್ತೊಂದು ಕಡೆ ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ನಲ್ಲಿ ಹುಡುಗಿ ನೋಡಿಲ್ಲ, ಎಂಗೇಜ್ಮೆಂಟ್ ಆಗಿಲ್ಲ, ಮದುವೆ ಆಗಿಲ್ಲ, ಸೀಮಂತ ಆಗಿಲ್ಲ ಆಗಲೇ ಮಗುಗೆ ಸೀಟ್ ಹುಡುಕಲು ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಯಾರು? ಮುಖ್ಯಮಂತ್ರಿ ಯಾರು? ಎಂದು ಸೀಟ್ ಹುಡುಕುತ್ತಿದ್ದಾರೆ. ಈಗ ಕಾಂಗ್ರೆಸ್ ನಲ್ಲಿ ಎರಡು ಗುಂಪಿದೆ. ಸಿದ್ದರಾಮೋತ್ಸವ ಬಳಿಕ 5 ಗುಂಪುಗಳಾಗಲಿವೆ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಜಾತಿಗೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ಪರಮೇಶ್ವರ್ ಹೀಗೆ ಪಟ್ಟಿ ದೊಡ್ಡದಿದೆ. ರಾಜ್ಯ ಮತ್ತು ದೇಶದಲ್ಲಿ ರಾಜ್ಯ ಲೂಟಿ ಹೊಡೆದಿದೆ. ಲೂಟಿಯ ಸಂಪತ್ತು ಎಷ್ಟು ಎಂದು ಸಿದ್ದರಾಮೋತ್ಸವದಲ್ಲಿ, ಬಂಡೆಯ ಅರಮನೆಯಲ್ಲಿ ಕಾಣಿಸಲಿದೆ. ರಮೇಶ್ ಕುಮಾರ್ ರವರ ನಿಜವಾದ ಮುಖ ಕಳಚಿ ಬಿದ್ದಿದೆ ಎಂದರು.
Published On - 8:14 pm, Sun, 24 July 22