ಸ್ನೇಹಿತನ ತಂಗಿಗೆ ಕರೆ ಮಾಡಿ ಅಸಭ್ಯ ಮಾತು: ರೊಚ್ಚಿಗೆದ್ದ ಅಣ್ಣ ಮತ್ತು ಗ್ಯಾಂಗ್​ನಿಂದ ತ್ರಿವಳಿ ಕೊಲೆ

| Updated By: Ganapathi Sharma

Updated on: Mar 16, 2025 | 2:45 PM

ಅವರೆಲ್ಲ ಬಿಹಾರ ಮೂಲದ ಕಟ್ಟಡ ಕಾರ್ಮಿಕರು. ಮೂರು ದಿನ ರಜೆ ಇದ್ದುದ್ದರಿಂದ ಹೋಳಿ ಅಂಗವಾಗಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಶೆ ನೆತ್ತಿಗೇರುತ್ತಿದ್ದಂತೆ ಯುವತಿ ವಿಚಾರದಲ್ಲಿ ಕಿರಿಕ್ ಶುರುವಾಗಿದ್ದು, ತ್ರಿಬಲ್ ಮರ್ಡರ್​ನಲ್ಲಿ ಅಂತ್ಯವಾಗಿದೆ. ಸರ್ಜಾಪುರ ಬಾಗಲೂರು ರಸ್ತೆಯ ಬಳಿ ನಡೆದ ಘಟನೆಯ ವಿವರ ಇಲ್ಲಿದೆ.

ಸ್ನೇಹಿತನ ತಂಗಿಗೆ ಕರೆ ಮಾಡಿ ಅಸಭ್ಯ ಮಾತು: ರೊಚ್ಚಿಗೆದ್ದ ಅಣ್ಣ ಮತ್ತು ಗ್ಯಾಂಗ್​ನಿಂದ ತ್ರಿವಳಿ ಕೊಲೆ
ಸಾಂದರ್ಭಿಕ ಚಿತ್ರ
Follow us on

ಅನೇಕಲ್, ಮಾರ್ಚ್ 16: ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಸರ್ಜಾಪುರ (Sarjapur) ಬಾಗಲೂರು ರಸ್ತೆಯ ಪೋರ್ ವಾಲ್ಸ್ ಅವೆನ್ಯೂ ಹೆಸರಿನ ನಿರ್ಮಾಣ ಹಂತದ ಅಪಾರ್ಟ್​​ಮೆಂಟ್​ನಲ್ಲಿ ಮೂವರ ಬರ್ಬರ ಹತ್ಯೆಯಾಗಿದೆ. ಬಿಹಾರ (Bihar) ಮೂಲದ ಅನ್ಸು (19), ರಾಧೆಶ್ಯಾಮ್ (20), ದೀಪು (22), ಮೃತಪಟ್ಟರು. ಹೋಳಿ ಹಬ್ಬದ ಅಂಗವಾಗಿ ಬಿಹಾರ ಮೂಲದ ಕಟ್ಟಡ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಇದೇ ಖುಷಿಯಲ್ಲಿ, ದೊಡ್ಡ ಕನ್ನಲ್ಲಿ ಬಳಿಅಪಾರ್ಟ್​​ಮೆಂಟ್​ನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮದೇ ಊರಿನವರನ್ನು ಆರೋಪಿ ಸೋನಾ ಅಂಡ್ ಗ್ಯಾಂಗ್ ಎಣ್ಣೆಪಾರ್ಟಿಗೆ ಕರೆದಿತ್ತು. ಎಣ್ಣೆಪಾರ್ಟಿ ಏಂಜಾಯ್ ಮಾಡಲು ಅನ್ಸು, ದೀಪು, ರಾಧೆಶ್ಯಾಮ್ ಮತ್ತು ಸಹೋದರ ಬೀರಬಲ್ ಸರ್ಜಾಪುರದ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿದ್ದರು. ಸಂಜೆವರೆಗೆ ಕುಡಿದು ತಿಂದು ಏಂಜಾಯ್ ಮಾಡಿದ್ದರು.

ನಶೆ ನೆತ್ತಿಗೇರುತ್ತಿದ್ದಂತೆ ಓರ್ವ ಎಣ್ಣೆಪಾರ್ಟಿ ಆಯೋಜಿಸಿದ್ದವನ ತಂಗಿಗೆ ಕರೆ ಅಸಭ್ಯವಾಗಿ ಮಾತನಾಡಿದ್ದಾನೆ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು, ಎರಡು ಗ್ಯಾಂಗ್ ನಡುವೆ ಬಡಿದಾಟ ಶುರುವಾಗಿದೆ. ಹೊರಗಿನಿಂದ ಬಂದ ನಾಲ್ವರ ಮೇಲೆ ಸೋನಾ ಅಂಡ್ ಗ್ಯಾಂಗ್ ಕೈಗೆ ಸಿಕ್ಕ ದೊಣ್ಣೆ ಮತ್ತು ಕಬ್ಬಿಣದ ರಾಡ್​ನಿಂದ ಅಟ್ಟಾಡಿಸಿ ಹಲ್ಲೆ ನಡೆಸಿದೆ. ನಶೆ ಏರಿದವರ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್​​ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್

ಇದನ್ನೂ ಓದಿ
ಸಿನಿಮೀಯ ರೀತಿಯಲ್ಲಿ ಚೇಸಿಂಗ್​, ಫೈರಿಂಗ್​, ದರೋಡೆಕೋರರ ಬಂಧನ
ರಾಮನಗರ: ಪ್ರತಿಷ್ಠಿತ ಕಂಪನಿಯಲ್ಲಿ ದೇಶದ್ರೋಹ ಕೃತ್ಯ, ಪಾಕಿಸ್ತಾನ ಪರ ಬರಹ
ಹೆಚ್ಚಿದ ಫೇಕ್ ನ್ಯೂಸ್ ಹಾವಳಿ: ಬೆಂಗಳೂರು, ಉತ್ತರ ಕನ್ನಡ ಮುಂಚೂಣಿಯಲ್ಲಿ
ಬೆಂಗಳೂರು: ಅತೀ ದೊಡ್ಡ ಕಾರ್ಯಾಚರಣೆ, 75 ಕೋಟಿ ರೂ. ಮೌಲ್ಯದ ಡ್ರಗ್ಸ್​ ಜಪ್ತಿ

ಸದ್ಯ ಘಟನೆಯಲ್ಲಿ ಹಲ್ಲೆಗೊಳಗಾದ ಬೀರಬಲ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿ ಪರಾರಿಯಾಗಿದ ಆರೋಪಿಗಳಿಗಾಗಿ ಆನೇಕಲ್ ಉಪವಿಭಾಗದ ಪೊಲೀಸರು ನಾಲ್ಕುತಂಡ ರಚನೆ ಮಾಡಿದ್ದು, ಶೋಧ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ