ಸ್ನೇಹಿತರ ಜೊತೆ ಲಾಂಗ್ ಡ್ರೈವ್ ಹೋದ ಇಬ್ಬರು ನೀರಿನಲ್ಲಿ ಮುಳುಗಿ ಸಾವು

ಶುಕ್ರವಾರ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿಗೆ 6 ಜನ ಸ್ನೇಹಿತರು ಲಾಂಗ್​ ಡ್ರೈವ್​ ಹೋಗಿದ್ದರು. ಆರು ಜನರಲ್ಲಿ ಮೂವರು ಬೆಟ್ಟಹಲಸೂರಿನಲ್ಲಿನ ಕ್ವಾರಿಯ ನೀರಿನಲ್ಲಿ ಈಜಲು ಹೋಗಿದ್ದಾರೆ. ಆದರೆ, ಮೂವರು ಮುಳುಗಲು ಆರಂಭಿಸಿದ್ದಾರೆ. ಮುಂದೇನಾಯ್ತು? ಈ ಸ್ಟೋರಿ ಓದಿ

ಸ್ನೇಹಿತರ ಜೊತೆ ಲಾಂಗ್ ಡ್ರೈವ್ ಹೋದ ಇಬ್ಬರು ನೀರಿನಲ್ಲಿ ಮುಳುಗಿ ಸಾವು
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jun 15, 2024 | 3:08 PM

ದೇವನಹಳ್ಳಿ, ಜೂನ್​​ 15: ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಕ್ವಾರಿಯ ನೀರಿನಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬೆಂಗಳೂರು (Bengaluru) ಮೂಲದ ಮೊಹಮದ್ (18) ಉಹೇಸ್ ಖಾನ್ (18) ಮೃತ ಯುವಕರು. ಶುಕ್ರವಾರ (ಜೂ.14) ಆರು ಜನ ಸ್ನೇಹಿತರು ಲಾಂಗ್ ಡ್ರೈವ್ ಟ್ರಿಪ್ ಅಂತ ಬೆಟ್ಟಹಲಸೂರಿಗೆ ಹೋಗಿದ್ದರು. ಈ ವೇಳೆ ಮೂವರು ನೀರಿನಲ್ಲಿ ಈಜಲು ತೆರಳಿದ್ದರು. ಕ್ವಾರಿಯ ನೀರಿ‌ನಲ್ಲಿ ಈಜಲಾಗದೆ ಮೂವರು ಮುಳಗಲು ಆರಂಭಿಸಿದರು.

ಮುಳುಗುವುದನ್ನು ಕಂಡ ಇತರೆ ಸ್ನೇಹಿತರು, ಮೂವರಲ್ಲಿ ಒರ್ವನನ್ನು ರಕ್ಷಿಸಿದ್ದಾರೆ. ಮತ್ತಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸಂಜೆ ಒರ್ವನ ಶವ ಹೊರ ತೆಗೆದಿದ್ದಾರೆ. ಇಂದು (ಜೂ.15) ಮತ್ತೊಬ್ಬನ ಮೃತ ದೇಹ ಸಿಕ್ಕಿದೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ನೇರಳೆ ಹಣ್ಣಿಗಾಗಿ ಮರ ಹತ್ತಿದ ಮೂವರು ಸ್ನೇಹಿತರಲ್ಲಿ ಓರ್ವನ ಸಾವು

ನಾಗರಹಾವು ಕಚ್ಚಿ 3 ವರ್ಷದ ಬಾಲಕ ಸಾವು

ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ 3 ವರ್ಷದ ಬಾಲಕ ಮೃತಪಟ್ಟ ಘಟನೆ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಮನೆಯ ಮುಂದೆ ರಾತ್ರಿ ಮಲಗಿದ್ದಾಗ ನಾಗರಹಾವು ಕಚ್ಚಿ ದೀಕ್ಷಿತ್(3) ಮೃತಪಟ್ಟಿದ್ದಾನೆ. ಸೂಕ್ತ ಸಮಯದಲ್ಲಿ ಬಾಗೇಪಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೊಮ್ಮಣ್ಣ ಸ್ಪಂದಿಸಿಲ್ಲ. ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಾಲತಿ ಹಾಘೂ ಸುರೇಶ್ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಮುಂದೆ ಕಾಪೌಂಡ್​ನಲ್ಲಿ ಮಲಗಿದ್ದಾಗ ರಾತ್ರಿ ನಾಗರಹಾವು ಕಚ್ಚಿದೆ. ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ