ದೇವನಹಳ್ಳಿ: ಕೋಟಿ ಆಸೆಗೆ ಉಂಡ ಮನೆಗೆ ಕನ್ನ ಹಾಕಲು ಯತ್ನಿಸಿ ಪೊಲೀಸರ ಅತಿಥಿಯಾದ ಕಾರ್ ಡ್ರೈವರ್ ಮತ್ತು ಸಹಚರರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾಗಮಂಗಲ ಗ್ರಾಮದಲ್ಲಿ ಕಾರ್ ಡ್ರೈವರ್ ತಾನು ಕೆಲಸ ಮಾಡುತ್ತಿದ್ದ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿ ವಿಶ್ವನಾಥಪುರ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ. ಸದ್ಯ ಚಾಲಕ ಕೃಷ್ಣಮೂರ್ತಿ ಮತ್ತು ಸಹಚರ ಅನಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಯತ್ನದ ದೃಶ್ಯಗಳು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ದೇವನಹಳ್ಳಿ: ಕೋಟಿ ಆಸೆಗೆ ಉಂಡ ಮನೆಗೆ ಕನ್ನ ಹಾಕಲು ಯತ್ನಿಸಿ ಪೊಲೀಸರ ಅತಿಥಿಯಾದ ಕಾರ್ ಡ್ರೈವರ್ ಮತ್ತು ಸಹಚರರು
ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ
Updated By: ಆಯೇಷಾ ಬಾನು

Updated on: Aug 29, 2023 | 9:03 AM

ದೇವನಹಳ್ಳಿ, ಆ.29: ಕೋಟಿ ಕೋಟಿ ಹಣ ಸಿಗುತ್ತೆ ಎಂಬ ಆಸೆಗೆ 8 ವರ್ಷದಿಂದ ಡ್ರೈವರ್ ಆಗಿದ್ದ ಚಾಲಕನೋರ್ವ(Car Driver) ಉಂಡ ಮನೆಗೆ ಕನ್ನ ಹಾಕಲು ಯತ್ನಿಸಿ ವಿಫಲವಾಗಿ ಪೊಲೀಸರ ಅತಿಥಿಯಾಗಿದ್ದಾನೆ(Theft Attempt). ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾಗಮಂಗಲ ಗ್ರಾಮದಲ್ಲಿ ಕಾರ್ ಡ್ರೈವರ್ ತಾನು ಕೆಲಸ ಮಾಡುತ್ತಿದ್ದ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿ ವಿಶ್ವನಾಥಪುರ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ. ಸದ್ಯ ಚಾಲಕ ಕೃಷ್ಣಮೂರ್ತಿ ಮತ್ತು ಸಹಚರ ಅನಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಯತ್ನದ ದೃಶ್ಯಗಳು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಕಾರ್ ಡ್ರೈವರ್ ಕೃಷ್ಣಮೂರ್ತಿ 8 ವರ್ಷಗಳಿಂದ ಒಂದೇ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮನೆ ಮಾಲೀಕ ಜಮೀನು ಮಾರಿ ಬಂದ ಹಣವನ್ನು ಮನೆಯಲ್ಲಿಟ್ಟಿದ್ದ. ಈ ವಿಚಾರ ತಿಳಿದ ಆರೋಪಿ ಕೃಷ್ಣಮೂರ್ತಿ ಹಣ ಲಪಟಾಯಿಸಲು ಸಂಚು ರೂಪಿಸಿದ್ದ. ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಮನೆಯಲ್ಲಿರುವ ಹಣ ಕದಿಯಲು ಪ್ಲ್ಯಾನ್ ಮಾಡಿದ್ದ. ಅದರಂತೆ ಕಳೆದ ಶನಿವಾರ ಮುಂಜಾನೆ ಮನೆಗೆ ಕನ್ನ ಹಾಕಲು ಮೂವರು ಆರೋಪಿಗಳು ಮನೆಗೆ ಎಂಟ್ರಿಕೊಟ್ಟಿದ್ದರು. ಮುಂಜಾನೆ ಮನೆಯಿಂದ ಶೌಚಾಲಯಕ್ಕೆ ಅಂತ ಎದ್ದು ಹೊರಗಡೆ ಬಂದ ವೇಳೆ ಮನೆ ಮಾಲೀಕ ಹರೀಶ್ ಬಾಬು ಎಂಬುವವರ ಮೇಲೆ ಆರೋಪಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಲಾಂಗು ಚಾಕು ತೋರಿಸಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರ ಜುನೈದ್​​ ಸಹಚರನ ಬಂಧನ; ಸಿನಿಮೀಯ ರೀತಿಯಲ್ಲಿ ​ಆರೋಪಿಯ​ನ್ನ ಲಾಕ್​ ಮಾಡಿದ ಪೊಲೀಸರು

ಈ ವೇಳೆ ಪತ್ನಿ ಕೋಣೆಯಲ್ಲಿ ಬಾಗಿಲು ಲಾಕ್ ಮಾಡಿಕೊಂಡು ಪೊಲೀಸರಿಗೆ ಫೋನ್ ಮಾಡ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಈ ಕೃತ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಆಧರಿಸಿ ವಿಶ್ವನಾಥಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನ ವೇಳೆ ಮನೆ ಮಾಲೀಕ ಜಮೀನು ಮಾರಿದ್ದ‌ ಹಣ ಲಪಟಾಯಿಸಲು ಅಟ್ಯಾಕ್ ನಡೆಸಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ಧ ಚಾಕು ಮತ್ತು ಬೈಕನ್ನು ವಿಶ್ವನಾಥಪುರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:02 am, Tue, 29 August 23