ಪಾತ್ರೆ ತೊಳೆಯುವಾಗ ವಿದ್ಯುತ್​ ಶಾಕ್; ಹೋಟೆಲ್ ಮಾಲೀಕನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಮಹಿಳೆ ಬಲಿ

| Updated By: preethi shettigar

Updated on: Mar 24, 2022 | 7:57 PM

ದಿವ್ಯ ಅವರಿಗೆ ಸೇರಿದ ಹೋಟೆಲ್​ನಲ್ಲಿ ಈ ಅವಗಢ ಸಂಭವಿಸಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಕಾರ್ಮಿಕರ ಸುರಕ್ಷತೆಗೆ ಗಮನ ಹರಿಸದ ಹೋಟೆಲ್ ಮಾಲೀಕರ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದು, ಸದ್ಯ ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪಾತ್ರೆ ತೊಳೆಯುವಾಗ ವಿದ್ಯುತ್​ ಶಾಕ್; ಹೋಟೆಲ್ ಮಾಲೀಕನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಮಹಿಳೆ ಬಲಿ
ಸಿದ್ದಮ್ಮ(55)
Follow us on

ಬೆಂಗಳೂರು: ಪಾತ್ರೆ ತೊಳೆಯುವಾಗ ವಿದ್ಯುತ್​ ಶಾಕ್​ನಿಂದ (Electric Shock) ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆಯ ಎಸ್.ಆರ್​.ಹೋಟೆಲ್​ನಲ್ಲಿ(Hotel) ನಡೆದಿದೆ. ನಿಡವಂದ ಕಾಲೋನಿ ನಿವಾಸಿ ಸಿದ್ದಮ್ಮ(55) ಮೃತಪಟ್ಟ ದುರ್ದೈವಿ. ದಿವ್ಯ ಅವರಿಗೆ ಸೇರಿದ ಹೋಟೆಲ್​ನಲ್ಲಿ ಈ ಅವಗಢ ಸಂಭವಿಸಿದ್ದು, ಆಸ್ಪತ್ರೆ(Hospital) ಬಳಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಕಾರ್ಮಿಕರ ಸುರಕ್ಷತೆಗೆ ಗಮನ ಹರಿಸದ ಹೋಟೆಲ್ ಮಾಲೀಕರ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದು, ಸದ್ಯ ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಹಾಸಿಗೆ ಗೋದಾಮಿನಲ್ಲಿ ಅಗ್ನಿ ಅವಗಢ

ಶಾರ್ಟ್​ ಸರ್ಕ್ಯೂಟ್​ನಿಂದ ಹಾಸಿಗೆ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಂಗಳೂರಿನ ಮೂಡಲಪಾಳ್ಯದಲ್ಲಿ ನಡೆದಿದೆ. ಮೂಡಲಪಾಳ್ಯದ ಗೋದಾಮಿನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮೂರನೇ ಮಹಡಿಯ ಟೆರಸ್​ನಲ್ಲಿ ಹಾಸಿಗೆ ಶೇಖರಿಸಲಾಗಿತ್ತು. ಸದ್ಯ ಎರಡು ಅಗ್ನಿಶಾಮಕ ವಾಹನದಿಂದ ಬೆಂಕಿ‌ ನಂದಿಸಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಗೋಡೌನ್​ನಲ್ಲಿದ್ದ ಹಾಸಿಗೆಗಳು ಸುಟ್ಟು ಕರಕಲಾಗಿದೆ. ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಾಸನದಲ್ಲಿ ಮಧ್ಯಾಹ್ನದ ಬಿಸಿಯೂಟ ಅಹಾರದಲ್ಲಿ ಹಲ್ಲಿ ಬಿದ್ದು 34 ಮಕ್ಕಳು ಅಸ್ವಸ್ಥ

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 34 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನಾರಾಯಣಗಟ್ಟಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಕ್ಕಳನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಧ್ಯಾಹ್ನದ ಬಿಸಿಯೂಟ ಅಹಾರದಲ್ಲಿ ಹಲ್ಲಿ ಬಿದ್ದಿದ್ದು ಅದನ್ನು ಸೇವಿಸಿದ 34 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಧ್ಯಾಹ್ನ ಊಟಕ್ಕೆ ಕುಳಿತಾಗ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ. ಈ ವಿಚಾರ ತಿಳಿಯುವ ಮುಂಚೆಯೇ ಹಲವು ಮಕ್ಕಳು ಊಟ ಸೇವಿಸಿದ್ದರು. ಇನ್ನು ಈ ವಿಚಾರ ತಿಳಿಯುತ್ತಲೆ ಹಲವು ಮಕ್ಕಳು ಅಸ್ವಸ್ಥವಾಗಿದ್ದಾರೆ. ತಕ್ಷಣವೇ ಶಿಕ್ಷಕರು ಅನ್ಯ ಮಕ್ಕಳು ಊಟ ಸೇವಿಸುವುದನ್ನು ತಡೆದಿದ್ದಾರೆ. ಅಸ್ವಸ್ಥಗೊಂಡಿರುವ ಎಲ್ಲಾ ಮಕ್ಕಳನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿಜೆಪಿ ನಾಯಕ, ಸಿಎಂ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ. ಸದ್ಯ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಮತ್ತೊಂದೆಡೆ ಶಾಸಕ ಕೆ.ಎಂ‌‌.ಶಿವಲಿಂಗೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಅರೋಗ್ಯ ವಿಚಾರಿಸಿದ್ದಾರೆ. ಅಧಿಕಾರಿಗಳ ಬಳಿ ಮಾಹಿತಿ ಕಲೆ ಹಾಕಿದ್ದಾರೆ.

ಶಾಲೆಯಲ್ಲಿ ಒಟ್ಟು 34 ಮಕ್ಕಳಿದ್ದು ಊಟ ಬಡಿಸೋವೇಳೆಯಲ್ಲಿ ಮೂರನೇ ತರಗತಿಯ ಓರ್ವ ವಿದ್ಯಾರ್ಥಿಗೆ ತನಗೆ ಬಡಿಸಿದ ಊಟದಲ್ಲಿ ಹಲ್ಲಿ ಇರೋದು ಗೊತ್ತಾಗಿದೆ. ಅಷ್ಟೊತ್ತಿಗಾಗಲೆ ಕೆಲ ಮಕ್ಕಳು ಊಟ ಆರಂಭಿಸಿದ್ರು, ವಿದ್ಯಾರ್ಥಿ ತನ್ನ ಊಟದಲ್ಲಿ ಹಲ್ಲಿ ಇರೋದನ್ನ ಶಿಕ್ಷಕರಿಗೆ ತಿಳಿಸಿದ ಕೂಡಲೆ ತಕ್ಷಣ ಎಚ್ಚೆತ್ತ ಶಿಕ್ಷಕರು ಎಲ್ಲಾ ಮಕ್ಕಳನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ವಿವರಗಳನ್ನು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೀಡಿದ್ದು ಕೂಡಲೆ ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಧೈರ್ಯ ಹೇಳಿದ್ದಾರೆ. ಜೊತೆಗೆ ಸಿಎಂ ರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಕೂಡ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿರೋ ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಿರುವ ಅಚಾತುರ್ಯದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವತಿ ಸಾವು; ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಬೆಳಗಿನ ಜಾವ ಹೊತ್ತಿ ಉರಿದ ಗುಜರಿ ಗೋದಾಮಿನಲ್ಲಿ ಒಂದೇ ಒಂದು ಬೆಂಕಿ ನಂದಿಸುವ ಉಪಕರಣವಿಲಿಲ್ಲ!

 

Published On - 7:52 pm, Thu, 24 March 22