ಚಿತ್ರದುರ್ಗ ಜಿಲ್ಲೆಯ ವಿವಿದೆಡೆಯ ಇಟ್ಟಿಗೆ ಬಟ್ಟಿಗಳ ಮೇಲೆ ಅಧಿಕಾರಗಳ ದಾಳಿ; 9 ಜನ ಬಾಲ ಕಾರ್ಮಿಕರ ರಕ್ಷಣೆ

ಚಿತ್ರದುರ್ಗ ಜಿಲ್ಲೆಯ ವಿವಿದೆಡೆಯ ಇಟ್ಟಿಗೆ ಬಟ್ಟಿಗಳ ಮೇಲೆ ಅಧಿಕಾರಗಳ ದಾಳಿ; 9 ಜನ ಬಾಲ ಕಾರ್ಮಿಕರ ರಕ್ಷಣೆ
ಬಾಲ ಕಾರ್ಮಿಕರ ರಕ್ಷಣೆ ಮಾಡಿದ ಅಧಿಕಾರಿಗಳು

ಭೀಮಾತೀರದ ಹಂತಕ‌ ಧರ್ಮರಾಜ ಚಡಚಣ ಸಂಶಯಾಸ್ಪದ ನಕಲಿ ಪೊಲೀಸ್ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣ ಹಿನ್ನೆಲೆ ಪ್ರಮುಖ ಆರೋಪಿ ಮಹಾದೇವ ಬೈರಗೊಂಡ ಹಾಗೂ ಇತರೆ 16 ಆರೋಪಿಗಳು ಕೋರ್ಟಿಗೆ ಹಾಜರು ಪಡಿಸಲಾಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 22, 2022 | 1:58 PM

ಚಿತ್ರದುರ್ಗ: ಮೊಳಕಾಲ್ಮೂರಿನ ವಿವಿದೆಡೆಯ ಇಟ್ಟಿಗೆ ಬಟ್ಟಿಗಳ (Brick Stills) ಮೇಲೆ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿ, ಗುಂಡ್ಲೂರು, ಮರ್ಲಹಳ್ಳಿ ಬಳಿಯ ಇಟ್ಟಿಗೆ ಬಟ್ಟಿಗಳ ಮೇಲೆ ದಾಳಿ ಮಾಡಿದ್ದು, 4 ಬಾಲಕಿ, 5 ಬಾಲಕರು ಸೇರಿ ಒಟ್ಟು 9 ಜನ ಬಾಲ ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಮಕ್ಕಳನ್ನು ಕೆಲಸಕ್ಕೆ ಬಳಸುತ್ತಿದ್ದ ಇಟ್ಟಿಗೆ ಬಟ್ಟಿ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾದೇವ ಭೈರಗೊಂಡ ಹಾಗೂ ಇತರೆ ಆರೋಪಿಗಳು ಕೋರ್ಟ್​ಗೆ ಹಾಜರ್:

ವಿಜಯಪುರ: ಭೀಮಾತೀರದ ಹಂತಕ‌ ಧರ್ಮರಾಜ ಚಡಚಣ ಸಂಶಯಾಸ್ಪದ ನಕಲಿ ಪೊಲೀಸ್ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣ ಹಿನ್ನೆಲೆ ಪ್ರಮುಖ ಆರೋಪಿ ಮಹಾದೇವ ಬೈರಗೊಂಡ ಹಾಗೂ ಇತರೆ 16 ಆರೋಪಿಗಳು ಕೋರ್ಟಿಗೆ ಹಾಜರು ಪಡಿಸಲಾಗಿದೆ. ವಿಚಾರಣೆಗಾಗಿ ವಿಜಯಪುರ ಜಿಲ್ಲಾ ಮತ್ತು ಸತ್ರ‌ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಚಾರಣೆಗಾಗಿ ಕೋರ್ಟಿಗೆ ಆರೋಪಿತರು ಆಗಮಿಸಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿರೋ ಆರೋಪಿಗಳು. ಆರೋಪಿಗಳಿಗೆ ಜೀವ ಬೆದರಿಕೆ ಇರೋ ಕಾರಣ ಪೊಲೀಸ್ ಭದ್ರತೆ ನೀಡಲಾಗಿದೆ. ವಿಚಾರಣೆ ಬಳಿಕ ಮತ್ತೇ ಪೊಲೀಸ್ ಭದ್ರತೆಯಲ್ಲಿ ಮಹಾದೇವ ಭೈರಗೊಂಡ ಹಾಗೂ ಇತರರನ್ನು ಚಡಚಣ ತಾಲೂಕಿನ ಕೆರೂರು ಗ್ರಾಮಕ್ಕೆ ಪೊಲೀಸರು ಬಿಟ್ಟು ಬರಲಿದ್ದಾರೆ. ಮುಂದಿನ ವಿಚಾರಣೆಗೆ ಮತ್ತೇ‌ ನ್ಯಾಯಾಲಯದ ವಿಚಾರಣೆಗೆ ಮಹಾದೇವ ಭೈರಗೊಂಡ ಹಾಗೂ ಇತರೆ ಆರೋಪಿಗಳು ಹಾಜರಾಗಲಿದ್ದಾರೆ.

ಅರಣ್ಯ ಸಚಿವರ ತವರಲ್ಲೇ ಅರಣ್ಯ ಸಂಪತ್ತು ಕಳ್ಳತನ:

ಬೆಳಗಾವಿ: ಅರಣ್ಯ ಸಚಿವರ ತವರಲ್ಲೇ ಕಳ್ಳರಿಂದ ಜಪ್ತಿ ಮಾಡಿದ್ದ ಅರಣ್ಯ ಸಂಪತ್ತು ಕಳ್ಳತನ ನಡೆದಿರುವಂತಹ ಘಟನೆ ನಡೆದಿದೆ. ಬೆಳಗಾವಿಯ ಆರ್‌ಎಫ್‌ಒ ಕಚೇರಿ ಆವರಣದ ಗೋದಾಮಿನಿಂದಲೇ ಕಳ್ಳತನ ಮಾಡಲಾಗಿದೆ. ಫೆಬ್ರವರಿ 22 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಶ್ರೀಗಂಧ ಸೇರಿ ಇತರ ವಸ್ತು ಕಳ್ಳತನ ಮಾಡಲಾಗಿತ್ತು. ಸದ್ಯ ಕಳ್ಳತನ ಮಾಡಿದ್ದ ಮಾಲನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. 2019-20ನೇ ಸಾಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಅರಣ್ಯ ಸಂಪತ್ತು ಜಪ್ತಿ ಮಾಡಿದ್ದ ಅರಣ್ಯ ಇಲಾಖೆ. ಶ್ರೀಗಂಧ, ನೀರಗಂಧ, ಗುವಾಡಾ, ವಿವಿಧ ಜಾತಿ ಕಟ್ಟಿಗೆ ತುಂಡು, ವನ್ಯಮೃಗಗಳ ಚರ್ಮ, ಕೊಂಬು ಸೇರಿ ಸಾಗಾಟಕ್ಕೆ ಬಳಸಿದ ವಾಹನ ಹಾಗೂ ಆಯುಧ ಸಂಗ್ರಹಿಸಿಡಲಾಗಿತ್ತು. ಫೆಬ್ರವರಿ 12ರಂದು ಇಲಾಖೆ ಅಧಿಕಾರಿಗಳು ಈ ಗೊದಾಮಿನ ಕೀಲಿ ತೆಗೆದು, ಪರಿಶೀಲನೆ ನಡೆಸಲಾಗಿತ್ತು. ಇದಾದ 10 ದಿನ ಬಳಿಕ ಸಿಬ್ಬಂದಿ ಗೋದಾಮಿನ ಬಳಿ ತೆರಳಿದ್ದಾಗ ಬಾಗಿಲಿನ ಚಿಲಕ ಮೀಟಿ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಹತ್ತೇ ದಿನದಲ್ಲಿ ಗೋದಾಮಿನಲ್ಲಿದ್ದ ಅರಣ್ಯಸಂಪತ್ತು ಖಾಲಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಡೆ ತೀವ್ರ ಅನುಮಾನಕ್ಕೆ ಎಡೆ ಮಾಡಿ‌ಕೊಟ್ಟಿದೆ. ಶ್ರೀಗಂಧ, ನೀರಗಂಧ, ಗುವಾಡಾ, ವಿವಿಧ ಜಾತಿಯ ಕಟ್ಟಿಗೆ ತುಂಡು. ವನ್ಯಮೃಗಗಳ ಚರ್ಮ, ಕೊಂಬು ಸೇರಿ ಒಟ್ಟು 75.5 ಕೆಜಿ ತೂಕದ ಅರಣ್ಯ ಸಂಪತ್ತು ಕಳ್ಳತನವಾಗಿದೆ. ಈ ಬಗ್ಗೆ ಆರ್‌ಎಫ್‌ಒ ವಿನಯ್ ಗೌಡರರಿಂದ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ:

Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ರಾಜ್ಯಗಳ 240 ರೈಲುಗಳ ಸಂಚಾರ ರದ್ದು

Follow us on

Most Read Stories

Click on your DTH Provider to Add TV9 Kannada