ಹಾಲು ತರಲು ಹೋದ ಮಹಿಳೆಯನ್ನು ಎಳೆದೊಯ್ಯಲು ಯತ್ನ: ಖದೀಮನನ್ನು ನಗ್ನಗೊಳಿಸಿ ಥಳಿಸಿದ ಯುವಕರು

ಹಾಲು ತರಲು ಅಂಗಡಿಗೆ ಹೋದ ವೇಳೆ ಮಹಿಳೆಯನ್ನು ವ್ಯಕ್ತಿಯೋರ್ವ ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ್ದಾನೆ. ಇದನ್ನು ನೋಡಿದ ಯುವಕ ತಂಡವೊಂದು ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಕಾಲೋನಿ ಬಳಿ ಘಟನೆ ನಡೆದಿದೆ.

ಹಾಲು ತರಲು ಹೋದ ಮಹಿಳೆಯನ್ನು ಎಳೆದೊಯ್ಯಲು ಯತ್ನ: ಖದೀಮನನ್ನು ನಗ್ನಗೊಳಿಸಿ ಥಳಿಸಿದ ಯುವಕರು
ಬೆತ್ತಲೆಗೊಳಿಸಿ ಥಳಿತ
Updated By: ರಮೇಶ್ ಬಿ. ಜವಳಗೇರಾ

Updated on: Sep 08, 2024 | 1:47 PM

ಬೆಂಗಳೂರು, (ಸೆಪ್ಟೆಂಬರ್ 08): ಅಂಗಡಿಗೆ ಹಾಲು ತರಲು ಬಂದಿದ್ದ ಮಹಿಳೆಯನ್ನು ಬಾಯಿ ಮುಚ್ಚಿ ಎಳೆದೊಯ್ಯಲು (Physical Abuse) ಯತ್ನಿಸಿದ ವ್ಯಕ್ತಿಗೆ ಧರ್ಮದೇಟು ಬಿದ್ದಿವೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಕಾಲೋನಿ ಬಳಿ ಘಟನೆ ನಡೆದಿದೆ. ಧಾರವಾಡ ಮೂಲದ ರವಿಕುಮಾರ್ ಎನ್ನುವಾತ ಕುಡಿದ ನಶೆಯಲ್ಲಿ ಮಹಿಳೆಯನ್ನು ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ್ದಾನೆ. ಇದನ್ನು ನೋಡಿದ ಯುವಕ ತಂಡವೊಂದು ರವಿಕುಮಾರ್ ನನ್ನು ಹಿಡಿದು ನಗ್ನಗೊಳಿಸಿ ಮನಸೋ ಇಚ್ಛೆ ಥಳಿಸಿದ್ದಾರೆ.

ಧಾರವಾಡ ಮೂಲದ ರವಿಕುಮಾರ್ ರವಿಕುಮಾರ್‌ ಕಲ್ಕೆರೆ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಅಪರಿಚಿತ ಮಹಿಳೆಯೊಬ್ಬರು ಅಂಗಡಿಗೆ ಹಾಲು ತೆಗೆದುಕೊಂಡು ಬರಲು ಹೋಗಿದ್ದರು. ನಶೆ ಏರಿಸಿಕೊಂಡಿದ್ದ ರವಿಕುಮಾರ್‌, ಮಹಿಳೆಯ ಹಿಂದಿನಿಂದ ಬಂದು ಬಾಯಿ ಮುಚ್ಚಿಕೊಂಡು ಎಳೆದೊಯ್ಯಲು ಯತ್ನಿಸಿದ್ದಾನೆ.ಇದರಿಂದ ಆತಂಕಗೊಂಡ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ.

ಇದನ್ನೂ ಓದಿ: ಕಲಬುರಗಿ ಹನಿಟ್ರ್ಯಾಪ್ ಪ್ರಕರಣ: ತಪ್ಪೊಪ್ಪಿಕೊಂಡ ವಿಡಿಯೋ ಬಿಡುಗಡೆ ಮಾಡಿದ ಆರೋಪಿ

ಅಲ್ಲಿಯೇ ಇದ್ದ ಗ್ರಾಮದ ಯುವಕರು ಮಹಿಳೆ ನೆರವಿಗೆ ಧಾವಿಸಿದ್ದಾರೆ. ಬಳಿಕ ಯುವಕರ ಕಂಡು ಎಸ್ಕೇಪ್ ಆಗಲು ಯತ್ನಿಸಿದ ರವಿಕುಮಾರ್‌ನನ್ನು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ. ರವಿಕುಮಾರ್‌ನನ್ನು ನಗ್ನಗೊಳಿಸಿ ಹೊಡೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಆಗಮಿಸಿ ರವಿಕುಮಾರ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ರವಿಕುಮಾರ್​​ನನ್ನು ಪೊಲೀಸರು, ಗೊಟ್ಟಿಗೆರೆಯ ವಿಜಯಶ್ರೀ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:10 pm, Sun, 8 September 24