ಕಲಬುರಗಿ ಹನಿಟ್ರ್ಯಾಪ್ ಪ್ರಕರಣ: ತಪ್ಪೊಪ್ಪಿಕೊಂಡ ವಿಡಿಯೋ ಬಿಡುಗಡೆ ಮಾಡಿದ ಆರೋಪಿ
ಕಲಬುರಗಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್ನಿಂದ ಹಣ ತೆಗೆದುಕೊಂಡಿದ್ದ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಆರೋಪಿ ಪ್ರಭು ಹಿರೇಮಠ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಉದ್ಯಮಿ ವಿನೋದ್ ಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದು ನಿಜ. 6 ಲಕ್ಷ ನನ್ನ ಅಕೌಂಟ್ ಗೆ RTGS ಮಾಡಿದ್ದಾರೆ. ಅದಾದ ಬಳಿಕ ನಮ್ಮ ಮಾವನ ಅಕೌಂಟ್ ಗೆ 8 ಲಕ್ಷ ಹಣ ಹಾಕಲಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಕಲಬುರಗಿ, ಸೆ.08: ಕಲಬುರಗಿಯ ಹನಿಟ್ರ್ಯಾಪ್ (Honeytrap) ಕಹಾನಿ ಬಗೆದಷ್ಟು ಬಯಲಾಗುತ್ತಿದೆ. ಕಷ್ಟವೆಂದು ಬರುವ ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಸಲಿಯತ್ತು ಬಯಲಾಗಿದೆ. ಸದ್ಯ ಇದೀಗ ಹನಿಟ್ರ್ಯಾಪ್ನಿಂದ ಹಣ ತೆಗೆದುಕೊಂಡಿದ್ದ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಆರೋಪಿ ಪ್ರಭು ಹಿರೇಮಠ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಹನಿಟ್ರ್ಯಾಪ್ ಪ್ರಕರಣದ ಆರೋಪಿ ಪ್ರಭು ಹಿರೇಮಠ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಉದ್ಯಮಿ ವಿನೋದ್ ಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದು ನಿಜ. 6 ಲಕ್ಷ ನನ್ನ ಅಕೌಂಟ್ ಗೆ RTGS ಮಾಡಿದ್ದಾರೆ. ಅದಾದ ಬಳಿಕ ನಮ್ಮ ಮಾವನ ಅಕೌಂಟ್ ಗೆ 8 ಲಕ್ಷ ಹಣ ಹಾಕಲಾಗಿದೆ. ನನ್ನ ಅಕೌಂಟ್ಗೆ ಹಣ ಹಾಕಿ ರಾಜು ಲೆಂಗಟಿ ವಿತ್ ಡ್ರಾ ಮಾಡಿಸಿಕೊಂಡಿದ್ದಾನೆ. ಆ ಹಣವನ್ನು ಸರ್ ಗೆ ಕೊಡಬೇಕು ಅಂತಾ ಹೇಳಿ ತೆಗೆದುಕೊಂಡು ಹೋಗಿದ್ದಾನೆ. ಸದ್ಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಭು ವಿಡಿಯೋ ಮಾಡಿ ತಾನು ಹಾಗೂ ಮತ್ತೊಬ್ಬ ಆರೋಪಿ ರಾಜು ಲೆಂಗಟಿ ಹಣ ಹಾಕಿದ್ದನ್ನ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಯಾದಗಿರಿ: ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ
ಅಮಾಯಕ ಯುವತಿಯರು, ತಮಗೆ ಕಷ್ಟವಾಗಿದೆ ಎಂದು ಆ ಗ್ಯಾಂಗ್ ಹತ್ತಿರ ಬಂದಿದ್ದರು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಕಿರಾತಕರು ಹುಡುಗಿಯರನ್ನೆ ಇಟ್ಟುಕೊಟ್ಟು ಹನಿಟ್ರ್ಯಾಪ್ ದಂಧೆಗಿಳಿದಿದ್ದರು. ಸರ್ಕಾರಿ ಅಧಿಕಾರಿಗಳು, ಉಧ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ವಂಚನೆ ಮಾಡಿ ಕಿರುಕುಳ ನೀಡಿದ್ದಾರೆ. ಸಂತ್ರಸ್ತ ಯುವತಿಯರೇ ಟಿವಿಗಳ ಬಳಿ ಹನಿ ಹನಿಗ್ಯಾಂಗ್ ಕಹಾನಿ ಬಯಲು ಮಾಡಿದ್ದಾರೆ.
ತಮ್ಮ ಮನೆಯಲ್ಲಿ ಕಷ್ಟ ಇದೆ ಎಂದು ಬಂದ ಯುವತಿಯರನ್ನ ಖೆಡ್ಡಾಗೆ ಕೆಡವುತ್ತಿದ್ದ ಗ್ಯಾಂಗ್ ತಮ್ಮ ತೀಟೆ ತೀರಿಸಿಕೊಂಡು, ಬಳಿಕ ಹನಿ ಟ್ರ್ಯಾಪ್ ಮಾಡ್ತಿತ್ತು. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನೆ ಟಾರ್ಗೇಟ್ ಮಾಡಿ ಗಾಳ ಹಾಕ್ತಿದ್ದ ಗ್ಯಾಂಗ್ ಯುವತಿರನ್ನ ಮುಂದೆ ಬಿಟ್ಟು ಲಾಡ್ಜ್ ಗೆ ಕರೆಯಿಸುತ್ತಿತ್ತು. ಬಳಿಕ ತಾವೇ ದಾಳಿ ಮಾಡಿ, ಫೋಟೋ, ವಿಡಿಯೋ ತೆಗೆದು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡ್ತಿತ್ತು. ಬಳಿಕ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿತ್ತು. ಓರ್ವ ಕಾನ್ಸಟೇಬಲ್ ಹಾಗೂ ಉಧ್ಯಮಿಯನ್ನ ಹನಿಟ್ರ್ಯಾಪ್ ಮಾಡಿ ಬರೋಬ್ಬರಿ 47 ಲಕ್ಷ ವಸೂಲಿ ಮಾಡ್ತಿದ್ದರು. ಬಳಿಕ ಅಮಾಯಕ ಯುವತಿಯರನ್ನೂ ಹಣ ನೀಡದೇ ವಿಡಿಯೋ ಇಟ್ಟುಕೊಂಡು ವಂಚಿಸುತ್ತಿದ್ದರು. ಹೀಗಾಗೇ ಸಧ್ಯ ಸಂತ್ರಸ್ತ ಯುವತಿಯರು ನೀಡುದ ದೂರಿನ ಆಧಾರದ ಮೇಲೆ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ರಾಜು ಲೆಂಗಟಿ, ಮಂಜು ಬಂಢಾರಿ, ಶ್ರೀಕಾಂತ ರೆಡ್ಡಿ, ಸಂತೋಷ ಸೇರಿದಂತೆ ಎಂಟು ಜನರ ವಿರುದ್ದ ಕೇಸ್ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ