ವೀಕೆಂಡ್​ನಲ್ಲಿ ಏರ್​ಪೋರ್ಟ್ ರಸ್ತೆಯಲ್ಲಿ ಬೆಲೆ ಬಾಳುವ ಬೈಕ್​ಗಳ ಜೊತೆ ಯುವಕರ ರೇಸ್; ಕಿರಿಕಿರಿಗೆ ಬೇಸತ್ತ ಇತರೆ ಸವಾರರು

ಲಕ್ಷಗಳಿಂದ ಕೋಟಿ ಬೆಲೆ ಬಾಳುವ ಬೈಕ್​ಗಳು ರಸ್ತೆಯಲ್ಲಿ ಕಾಣುವುದಕ್ಕಿಂತ ಶ್ರೀಮಂತರ ಮನೆಗಳಲ್ಲಿ ಕಾಣಿಸೋದೆ ಹೆಚ್ಚು. ಆದ್ರೆ, ಇಲ್ಲೊಂದು ಕಡೆ ಮಾತ್ರ ವೀಕೆಂಡ್ ಬಂತು ಅಂದರೆ ಸಾಕು ದುಬಾರಿ ಬೈಕ್​ಗಳದ್ದೆ ಕಾರುಬಾರು, ಈ ಬೆಲೆ ಬಾಳುವ ಬೈಕ್​ಗಳ ವೀಕ್ಷಣೆ ಒಂದು ಕಡೆ ಖುಷಿ ನೀಡಿದ್ರೆ, ಅದೇ ಕಾಸ್ಟ್ಲಿ ಬೈಕ್ಗಳ ಹುಚ್ಚಾಟ ಇದೀಗ ಇತರ ಸಾವರರ ಆತಂಕವನ್ನ ಹೆಚ್ಚಾಗುವಂತೆ ಮಾಡಿದೆ.

ವೀಕೆಂಡ್​ನಲ್ಲಿ ಏರ್​ಪೋರ್ಟ್ ರಸ್ತೆಯಲ್ಲಿ ಬೆಲೆ ಬಾಳುವ ಬೈಕ್​ಗಳ ಜೊತೆ ಯುವಕರ ರೇಸ್; ಕಿರಿಕಿರಿಗೆ ಬೇಸತ್ತ ಇತರೆ ಸವಾರರು
ಏರ್​ಪೋರ್ಟ್ ರಸ್ತೆಯಲ್ಲಿ ಬೆಲೆ ಬಾಳುವ ಬೈಕ್​ಗಳ ಜೊತೆ ಯುವಕರ ರೇಸ್
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2024 | 7:38 PM

ಬೆಂಗಳೂರು ಗ್ರಾಮಾಂತರ, ಆ.25: ಬೆಳ್ಳಂ ಬೆಳಗ್ಗೆ ಟೆಕ್ಕಿಗಳು, ಯುವಕ-ಯುವತಿಯರು ಸೌಂಡ್ ಮಾಡುತ್ತಾ ಲಕ್ಷ ಲಕ್ಷ ಬೆಲೆ ಬಾಳುವ ಬೈಕ್​ಗಳನ್ನು ತೆಗೆದುಕೊಂಡು ಹೆದ್ದಾರಿಯಲ್ಲಿ ಶರವೇಗದಲ್ಲಿ ಹೋಗುತ್ತಿದ್ದರೆ, ಇತ್ತ ಸ್ಥಳೀಯರು ಬೈಕ್​ಗಳ ಹಾವಳಿಗೆ ಕಂಗಾಲಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೌದು, ಬೆಂಗಳೂರು ಗ್ರಾಮಾಂತರ(Bangalore Rural) ಜಿಲ್ಲೆಯ ದೇವನಹಳ್ಳಿ ಪಟ್ಟಣದ ಮೂಲಕ ಹಾದು ಹೋಗಿರುವ ಬೆಂಗಳೂರು ಹೈದರಾಬಾದ್ ಮತ್ತು ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯಾ ಹೆದ್ದಾರಿ, ಇದೀಗ ಹೈ ಸ್ಪೀಡ್ ಬೈಕ್ ಸವಾರರಿಗೆ ರಹದಾರಿಯಾಗಿ ಮಾರ್ಪಟ್ಟಿದೆ.

ವೀಕೆಂಡ್​ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ

ಅದರಲ್ಲೂ ವೀಕೆಂಡ್ ಬಂತೆಂದರೆ ಸಾಕು ವಿವಿಧ ಬ್ರಾಂಡ್​ಗಳ ದುಬಾರಿ ಬೆಲೆ ಬಾಳುವ ಬೈಕ್​ಗಳಲ್ಲಿ ಸಿಲಿಕಾನ್ ಸಿಟಿಯಿಂದ ಹೆದ್ದಾರಿಗೆ ಎಂಟ್ರಿಕೊಡುತ್ತಿರುವ ಯುವಕ-ಯುವತಿಯರು ಗುಂಪು ಗುಂಪಾಗಿ ಬಂದು ಏರ್ಪೋಟ್ ರಸ್ತೆ ಮತ್ತು ಹೊಸಕೋಟೆ ರಸ್ತೆಯಲ್ಲಿ ರೇಸ್ ಮಾಡ್ತಿದ್ದಾರೆ. ಜೊತೆಗೆ ಬೆಳ್ಳಂ ಬೆಳಗ್ಗೆ ರೇಸ್ ಮಾಡಿಕೊಂಡು ಬಂದು ಕಾಫೀ, ಟೀ ಎಂದು ಹೆದ್ದಾರಿ ಬದಿಯಲ್ಲಿ ಬೈಕ್ ಸವಾರರು ಬೀಡು ಬಿಡ್ತಿದ್ದಾರೆ. ಹೀಗಾಗೆ ಕಾಸ್ಟ್ಲಿ ಬೈಕ್​​ಗಳನ್ನ ನೋಡಿ ಸೆಲ್ಪಿ ತೆಗೆದುಕೊಳ್ಳುವ ಖುಷಿಯಲ್ಲಿ ಇತರೆ ಬೈಕ್ ಸವಾರರು ಹೆದ್ದಾರಿಯಲ್ಲಿ ಬರ್ತಿದ್ದು, ಸಾಕಷ್ಟು ಅಪಘಾತಗಳು ವೀಕೆಂಡ್​ನಲ್ಲಿಯೇ ಗಣನೀಯವಾಗಿ ಹೆಚ್ಚಾಗುತ್ತಿದೆ.

ಇದನ್ನೂ ಓದಿ:ಬೆಂಗಳೂರು: ಠಾಣೆಗೆ ಮುತ್ತಿಗೆ ಹಾಕಿದ ಶಾಸಕನ​ ಮುಂದೆಯೇ ACP ಚಂದನ್ ಕುಮಾರ್ ಆಕ್ರೋಶ

ಕಿಡಿಕಾರಿದ ಸಾರ್ವಜನಿಕರು

ಮುಂಜಾನೆ ನಂದಿಬೆಟ್ಟದಲ್ಲಿ ಸನ್ ರೈಸ್ ನೋಡಲು ಮತ್ತು ಮುಸ್ಸಂಜೆ ಚಿಕ್ಕಬಳ್ಳಾಪುರ ಬಳಿಯ ಈಶಾ ಪೌಂಡೇಶನ್​ನಲ್ಲಿ ಲೇಸರ್ ಶೋ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಬರ್ತಿದ್ದು, ಬೇಗ ಹೋಗುವ ಭರದಲ್ಲಿ ರೇಸ್​ಗೆ ಇಳಿದು ಅತಿವೇಗದಲ್ಲಿ ಸಂಚಾರ ಮಾಡ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಹೆದ್ದಾರಿಯಲ್ಲಿ ಸ್ವೀಡ್ ಮೀಟರ್​ಗಳನ್ನ ಸಂಚಾರಿ ಪೊಲೀಸರು ಹಾಕದ ಕಾರಣ ಪೊಲೀಸರ ಭಯವಿಲ್ಲದೆ ಬೇಕಾಬಿಟ್ಟಿ ಕಾರು, ಬೈಕ್ ಚಾಲನೆ ಮಾಡ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೆ ದುಬಾರಿ ಬೈಕ್​ಗಳಿಂದ ಪಕ್ಕದಲ್ಲೆ ಬಂದು ಒಂದೇ ಸಮನೆ ಸೌಂಡ್ ಮಾಡುವ ಕಾರಣ, ಪಕ್ಕದ ಸವಾರರು ಭಯದಿಂದ ಕೆಳಕ್ಕೆ ಬೀಳ್ತಿದ್ದು, ಅತಿವೇಗದ ಬೈಕ್ ರೇಸ್​ಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ. ಒಟ್ಟಾರೆ ಸಣ್ಣ ಸಣ್ಣ ರಸ್ತೆಗಳು ಹೆದ್ದಾರಿಗಳಾಗಿ ಮೇಲ್ದರ್ಜೆ ವಾಹನ ಸವಾರರಿಗೆ ಬೈಕ್ ರೇಸ್​ಗಳಿಂದ ಕಿರಿಕಿರಿ ಹೆಚ್ಚಾಗ್ತಿದ್ದು, ಜೋಶ್​ಗಾಗಿ ಕೆಲ ಯುವಕ- ಯುವತಿಯರು ಮಾಡುವ ರೇಸ್, ಇತರರ ಜೀವಕ್ಕೆ ಹಾನಿಯಾಗ್ತಿರುವುದಂತು ಸುಳ್ಳಲ್ಲ. ಇನ್ನಾದರೂ ಪೊಲೀಸರು ಎಚ್ಚೆತ್ತು ಹೆದ್ದಾರಿಯಲ್ಲಿ ರೇಸ್ ಬೈಕ್ ಸವಾರರಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ