ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ವಿದೇಶಿ ಪ್ರಜೆ ಹುಚ್ಚಾಟ; ಮಹಿಳಾ ತಪಾಸಣಾ ಕೊಠಡಿಗೆ ನುಗ್ಗಲು ಯತ್ನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2024 | 2:40 PM

ದೇವನಹಳ್ಳಿ ಕೆಂಪೇಗೌಡ (Kempegowda International Airport) ಏರ್​​ಪೋರ್ಟ್​ನಲ್ಲಿ ಚಿನ್ನ ಸಾಗಣೆ, ವಿಮಾನದಲ್ಲಿ ಸಿಗರೇಟ್​ ಸೇವನೆ ಸೇರಿದಂತೆ ಇನ್ನಿತರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೀಗ ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಜಿಂಬಾಂಬ್ವೆ ಪ್ರಜೆ ಹುಚ್ಚಾಟ ಮೆರೆದಿದ್ದು, ಮಹಿಳಾ ತಪಾಸಣಾ ಕೊಠಡಿಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ವಿದೇಶಿ ಪ್ರಜೆ ಹುಚ್ಚಾಟ; ಮಹಿಳಾ ತಪಾಸಣಾ ಕೊಠಡಿಗೆ ನುಗ್ಗಲು ಯತ್ನ
ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ವಿದೇಶಿ ಪ್ರಜೆ ಹುಚ್ಚಾಟ
Follow us on

ಬೆಂಗಳೂರು ಗ್ರಾಮಾಂತರ, ಫೆ.15: ದೇವನಹಳ್ಳಿ ಕೆಂಪೇಗೌಡ (Kempegowda International Airport) ಏರ್​​ಪೋರ್ಟ್​ನಲ್ಲಿ ಜಿಂಬಾಂಬ್ವೆ(Zimbabwe) ಪ್ರಜೆ ಹುಚ್ಚಾಟ ಮೆರೆದಿದ್ದಾನೆ. ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಚೇಕಿಂಗ್ ವೇಳೆ ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ರುಕುಡ್ಸೋ ಚಿರಿಕುವಾರಾರ ಎಂಬಾತ ಮಹಿಳಾ ತಪಾಸಣಾ ಕೊಠಡಿಗೆ ನುಗ್ಗಲು ಯತ್ನಿಸಿ ಪುಂಡಾಟವಾಡಿರುವ ಘಟನೆ ನಡೆದಿದೆ.

ಏರ್​​ಪೋರ್ಟ್​​​ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು

ಇನ್ನು ಈ ವೇಳೆ ಭದ್ರತಾ ಸಿಬ್ಬಂದಿಗಳು ತಡೆಯಲು ಪ್ರಯತ್ನಿಸಿದಾಗ ಸಿಐಎಸ್​ಎಫ್ ಹಾಗೂ ಈತನ ನಡುವೆ ತಳ್ಳಾಟ ನೂಕಾಟವಾಗಿದ್ದು, ಬಳಿಕ ಆರೋಪಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಆತನ ವಿರುದ್ದ ಏರ್​​ಪೋರ್ಟ್​​​ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು ಮಾಡಲಾಗಿದ್ದು, ಐಪಿಸಿ ಸೆಕ್ಷನ್ 354 ಅಡಿ ಪ್ರೆಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ:ದೇವನಹಳ್ಳಿ ಏರ್​​ಪೋರ್ಟ್​​​​ ಸಮೀಪ ಆರು ಗುಂಟೆ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್, ಮಾರಾಮಾರಿ, ಆಸ್ಪತ್ರೆಯಲ್ಲಿ ನರಳಾಟ!

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ; 17 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶ

ಇನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಲಾಗಿದ್ದು, ಕುವೈತ್​ನಿಂದ J9 – 431 ವಿಮಾನದಲ್ಲಿ ಬಂದಿದ್ದ ಇತನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕ ಆರ್ಟಿಫಿಶಿಯಲ್ ದೀಪ ಮಾದರಿಯ ಬರ್ನರ್ನಲ್ಲಿ ಚಿನ್ನದ ತುಂಡುಗಳನ್ನು ಅಡಗಿಸಿಟ್ಟಿದ್ದ. ಕುವೈತ್​ನಿಂದ ಕೆಂಪೇಗೌಡ ಏರ್ಪೋಟ್​ಗೆ ಬಂದ ವೇಳೆ ವಶಕ್ಕೆ ಪಡೆಯಲಾಗಿದೆ. ಮೆಲ್ನೂಟಕ್ಕೆ ಕೃತಕ ದೀಪ ಮಾದರಿ ಎಂದು ನಂಬಿಸಿ ಚಿನ್ನ ಸಾಗಿಸಲು ಯತ್ನಿಸಿದ್ದಾನೆ. ಒಳ ಭಾಗದಲ್ಲಿ ಪೇಪರ್​ನಲ್ಲಿ ಸುತ್ತಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳಿಂದ 17 ಲಕ್ಷ 23 ಸಾವಿರ ಮೌಲ್ಯದ 279.5 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದು, ಚಿನ್ನ ಸಮೇತ ಪ್ರಯಾಣಿಕನನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ