ದೇವನಹಳ್ಳಿ ಏರ್​​ಪೋರ್ಟ್​​​​ ಸಮೀಪ ಆರು ಗುಂಟೆ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್, ಮಾರಾಮಾರಿ, ಆಸ್ಪತ್ರೆಯಲ್ಲಿ ನರಳಾಟ!

Devanahalli: ದೇವನಹಳ್ಳಿ ಬಳಿ ಯಾವಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂತೋ ಆಗ ಅದರ ಆಸುಪಾಸು ಜಮೀನು ಬೆಲೆಗಳು ಗಗನಕ್ಕೆ ಚಿಮ್ಮಿದವು. ಅದರಿಂದ ಒಂದಿಂಚೂ ಜಮೀನಿಗೂ ಅಲ್ಲಿನ ಜನ ಹೊಡೆದಾಟ-ಬಡಿದಾಟಗಳಿಗೆ ಇಳಿದಿದ್ದಾರೆ.

ದೇವನಹಳ್ಳಿ ಏರ್​​ಪೋರ್ಟ್​​​​ ಸಮೀಪ ಆರು ಗುಂಟೆ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್, ಮಾರಾಮಾರಿ, ಆಸ್ಪತ್ರೆಯಲ್ಲಿ ನರಳಾಟ!
ಆರು ಗುಂಟೆ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್
Follow us
| Updated By: ಸಾಧು ಶ್ರೀನಾಥ್​

Updated on:Apr 10, 2023 | 1:30 PM

ಅದು ಒಂದೇ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿರುವ (Neighbour) ಎರಡು ಕುಟಂಬಗಳು, ಸಾಕಷ್ಟು ವರ್ಷಗಳಿಂದ ಆತ್ಮೀಯರಂತಿದ್ದ ಆ ಇಬ್ಬರ ನಡುವೆ ಕಳೆದ ಕೆಲ ತಿಂಗಳುಗಳಿಂದ ಸಣ್ಣ ಭೂಮಿ ವಿಚಾರಕ್ಕೆ ಕಿರಿಕ್ ಶುರುವಾಗಿತ್ತು. ಆದ್ರೆ ಇದೇ ಕಿರಿಕ್ ಇಂದು ಕಸದ ವಿಚಾರಕ್ಕೆ ದೊಡ್ಡ ಹೈಡ್ರಾಮವನ್ನೆ ಸೃಷ್ಟಿಸಿದ್ದು ಹಾಡಹಗಲೆ ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಳ್ಳುವಂತೆ ಮಾಡಿದೆ! ಅದರಲ್ಲೂ ದೇವನಹಳ್ಳಿ (Devanahalli) ಬಳಿ ಯಾವಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Devanahalli Airport) ಬಂತೋ ಆಗ ಅದರ ಆಸುಪಾಸು ಜಮೀನು ಬೆಲೆಗಳು ಗಗನಕ್ಕೆ ಚಿಮ್ಮಿದವು. ಅದರಿಂದ ಒಂದಿಂಚು ಜಮೀನಿಗೂ (Land Dispute) ಅಲ್ಲಿನ ಜನ ಹೊಡೆದಾಟ-ಬಡಿದಾಟಗಳಿಗೆ ಇಳಿದಿದ್ದಾರೆ (Fight).

ಹಾಡಹಗಲಲ್ಲಿ ಅಕ್ಕಪಕ್ಕದ ಮನೆಯವರು ಎಂದಿನಂತೆ ಅವರವರ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಕಸದ ಸಣ್ಣ ವಿಚಾರದ ಬಗ್ಗೆ ಇವರದ್ದು ಯಾವಾಗಲೂ ಇದ್ದದ್ದೆ ಅಂತಲೆ ನೆರೆಹೊರೆಯವರು ಅಂದುಕೊಂಡಿದ್ದರು. ಆದ್ರೆ ಸಣ್ಣ ವಿಚಾರಕ್ಕೆ ಶುರುವಾದ ಕಿರಿಕ್ ನೋಡ ನೋಡ್ತಿದ್ದಂತ ದೊಣ್ಣೆ ಕಲ್ಲುಗಳಿಂದ ಹೊಡೆದಾಡುವ ಹಂತಕ್ಕೆ ತಲುಪಿದ್ದು ಶಾಂತವಾಗಿದ್ದ ಗ್ರಾಮ ಕ್ಷಣ ಮಾತ್ರದಲ್ಲಿ ರಣರಂಗವಾಗಿ ಮಾರ್ಪಟ್ಟಿದೆ. ಎಲ್ಲೆಡೆ ಕೂಗಾಟ ಚೀರಾಟ ಜೊತೆಗೆ ನೆತ್ತರು ಹರಿದಿದ್ದು ಮನೆಯಲ್ಲಿರಬೇಕಾದವರು ಆಸ್ವತ್ರೆಯ ಬೆಡ್ ಮೇಲೆ ಮಲಗಿ ನರಳಾಡುತ್ತಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದುಆ ಒಂದು ಚಿಕ್ಕ (ಆರು ಗುಂಟೆ) ಜಮೀನು.

ಅಂದಹಾಗೆ ಇಂತಹ ಹೊಡಿಬಡಿ ದೃಶ್ಯಗಳಿಗೆ ಕಾರಣವಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಹಳಿಯೂರು ಗ್ರಾಮ, ಹೌದು ಅಂದಹಾಗೆ ಗ್ರಾಮದ ನಾರಾಯಣಸ್ವಾಮಿ ಮತ್ತು ಮುನಿ ಆಂಜಿನಪ್ಪ ನಡುವೆ ಕಳೆದ ಕೆಲ ತಿಂಗಳುಗಳಿಂದ ಮನೆ ಮುಂದಿನ ಆರು ಗುಂಟೆ ಜಮೀನು ವಿಚಾರಕ್ಕೆ ಕಲಹ ನಡೆಯುತ್ತಿದ್ದು ಹಲವು ಭಾರಿ ಗಲಾಟೆ ಮಾಡಿಕೊಂಡು ಎರಡೂ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ರಂತೆ.

ಹೀಗಾಗಿ ಪೊಲೀಸರು ಸಹ ಹಲವು ಬಾರಿ ರಾಜಿ ಪಂಚಾಯ್ತಿ ಮಾಡಿ ಕೋರ್ಟ್ ಗೆ ಹೋಗುವಂತೆ ಹೇಳಿದ್ದು ಇದೇ ವಿಚಾರಕ್ಕೆ ಕೋರ್ಟ್ ನಲ್ಲಿ ಎರಡೂ ಕಡೆಯವರು ವ್ಯಾಜ್ಯ ನಡೆಸುತ್ತಿದ್ದಾರಂತೆ. ಈ ನಡುವೆ ಮೊನ್ನೆ ಶನಿವಾರ ಸಂಜೆ ಮನೆ ಮುಂದಿನ ಖಾಲಿ ಜಮೀನಿನಲ್ಲಿ ಕಸ ಹಾಕ್ತಿದ್ದಾರೆ, ಕೇಳಿದ್ರೆ ಗಲಾಟೆ ಮಾಡ್ತಿದ್ದಾರೆ ಅಂತ ನಾರಾಯಣಸ್ವಾಮಿ ಕುಟುಂಬಸ್ಥರು ಮನೆ ಮುಂದೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಈ ವೇಳೇ ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ನಡೆದಿದ್ದ ಮಾತುಗಳಿಂದ ಶುರುವಾದ ಜಗಳ ನೋಡನೋಡ್ತಿದ್ದಂತೆ ಇಬ್ಬರು ಪರಸ್ಪರ ಬಡಿದಾಡಿಕೊಳ್ಳುವ ಹಂತಕ್ಕೆ ಬಂದಿದೆ.

ಇದನ್ನೂ ಓದಿ:

ಆನೇಕಲ್ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಯುವಕರು ಬುಲ್ಲೆಟ್ ಬೈಕುಗಳನ್ನು ಖರೀದಿ ಮಾಡಲು ಒಲ್ಲೆ ಅನ್ನುತ್ತಿದ್ದಾರೆ! ಯಾಕೆ ಗೊತ್ತಾ?

ಸಿಸಿ ಕ್ಯಾಮರಾ ಹಾಕಬಾರದು ವ್ಯಾಜ್ಯ ಮುಗಿಯುವವರೆಗೂ ಎಂದಿನಂತೆ ಯಥಾಸ್ಥಿತಿ ಮುಂದುವರೆಸಿ ಅಂತ ಅಧಿಕಾರಿಗಳು ಹೇಳಿದ್ದರೂ, ರಕ್ಷಣೆಗೆ ಇರಲಿ ಅಂತ ನಾರಾಯಣಸ್ವಾಮಿ ಕುಟುಂಬಸ್ಥರು ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದ್ರಂತೆ. ಆದ್ರೆ ಇದೇ ವಿಚಾರವೆ ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಳ್ಳುವಂತೆ ಮಾಡಿದ್ದು ಹೊಡೆದಾಟದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಲ್ಲದೆ ಗಲಾಟೆಯಲ್ಲಿ ಎರಡೂ ಕುಟುಂಬಸ್ಥರು ಹೊಡೆದಾಡಿಕೊಂಡ ಕಾರಣ ತಲೆಗೆ ಪೆಟ್ಟಾಗಿದ್ದು 6 ಜನ ಆಸ್ವತ್ರೆ ಪಾಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಬಗ್ಗೆ ಎರಡು ಕುಟುಂಬಸ್ಥರು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಾರೆ ಸಣ್ಣ ಜಮೀನು ವಿಚಾರದ ವ್ಯಾಜ್ಯ ಕೋರ್ಟ್ ನಲ್ಲಿ ನಡೆಯುತ್ತಿದ್ದರೂ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಿಂದ ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನು ಈ ಸಂಬಂಧ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುವ ಕೆಲಸ ಮಾಡಬೇಕಿದೆ.

ವರದಿ: ನವೀನ್, ಟಿವಿ 9, ದೇವನಹಳ್ಳಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:43 pm, Mon, 10 April 23

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ