ರಾಜ್ಯದಲ್ಲಿ 2 ವಿಶೇಷ ರೈಲು, ವಿಮಾನ ಪ್ರಯಾಣಕ್ಕೆ ರೂಲ್ಸ್ ಫಿಕ್ಸ್..

ಬೆಂಗಳೂರು: ಲಾಕ್​ಡೌನ್.. ಲಾಕ್​ಡೌನ್.. ಲಾಕ್​ಡೌನ್.. ಕಳೆದ ಎರಡು ತಿಂಗಳಿನಿಂದ ಈ ಪದ ಕೇಳಿ ಕೇಳಿ ಸುಸ್ತಾಗಿದ್ದ ಜನರಿಗೆ 99 ಪರ್ಸೆಂಟ್​ ರಿಲೀಫ್ ಸಿಕ್ಕಿದೆ. ಆದರೆ, ಟ್ರೈನ್​, ಫ್ಲೈಟ್​ ಒಂದು ಇದ್ದಿದ್ರೆ ನಾರ್ಮಲ್​ ಲೈಫ್​ನತ್ತ ಹೆಜ್ಜೆ ಇಡ್ಬೋದಲ್ಲ ಅಂತ ಎಲ್ರೂ ಕಾಯ್ತಿದ್ರು. ಆದ್ರೀಗ ಆ ಕಾಲ ಬಂದೇ ಬಿಟ್ಟಿದೆ. ಪ್ಯಾಸೆಂಜರ್ ಟ್ರೈನ್​ ಟಿಕೆಟ್ ಬುಕಿಂಗ್ ಮತ್ತು ದೇಶೀ ವಿಮಾನಯಾನ ಆರಂಭ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಲಿದೆ. ಬೆಂಗಳೂರು TO ಬೆಳಗಾವಿ, ಬೆಂಗಳೂರು TO ಮೈಸೂರಿಗೆ ಟ್ರೈನ್! ಯೆಸ್.. ಕೊರೊನಾ […]

ರಾಜ್ಯದಲ್ಲಿ 2 ವಿಶೇಷ ರೈಲು, ವಿಮಾನ ಪ್ರಯಾಣಕ್ಕೆ ರೂಲ್ಸ್ ಫಿಕ್ಸ್..
Follow us
ಆಯೇಷಾ ಬಾನು
|

Updated on:May 22, 2020 | 12:46 PM

ಬೆಂಗಳೂರು: ಲಾಕ್​ಡೌನ್.. ಲಾಕ್​ಡೌನ್.. ಲಾಕ್​ಡೌನ್.. ಕಳೆದ ಎರಡು ತಿಂಗಳಿನಿಂದ ಈ ಪದ ಕೇಳಿ ಕೇಳಿ ಸುಸ್ತಾಗಿದ್ದ ಜನರಿಗೆ 99 ಪರ್ಸೆಂಟ್​ ರಿಲೀಫ್ ಸಿಕ್ಕಿದೆ. ಆದರೆ, ಟ್ರೈನ್​, ಫ್ಲೈಟ್​ ಒಂದು ಇದ್ದಿದ್ರೆ ನಾರ್ಮಲ್​ ಲೈಫ್​ನತ್ತ ಹೆಜ್ಜೆ ಇಡ್ಬೋದಲ್ಲ ಅಂತ ಎಲ್ರೂ ಕಾಯ್ತಿದ್ರು. ಆದ್ರೀಗ ಆ ಕಾಲ ಬಂದೇ ಬಿಟ್ಟಿದೆ. ಪ್ಯಾಸೆಂಜರ್ ಟ್ರೈನ್​ ಟಿಕೆಟ್ ಬುಕಿಂಗ್ ಮತ್ತು ದೇಶೀ ವಿಮಾನಯಾನ ಆರಂಭ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಲಿದೆ.

ಬೆಂಗಳೂರು TO ಬೆಳಗಾವಿ, ಬೆಂಗಳೂರು TO ಮೈಸೂರಿಗೆ ಟ್ರೈನ್! ಯೆಸ್.. ಕೊರೊನಾ ಲಾಕ್​​ಡೌನ್​ ಬಳಿಕ ಕರುನಾಡಲ್ಲಿ ಚುಕುಬುಕು ಓಡಾಟ ಸ್ಟಾರ್ಟ್ ಆಗ್ತಿದೆ. ಬೆಳಗ್ಗೆಯಿಂದಲೇ ವಿಶೇಷ ರೈಲುಗಳು ಬೆಂಗಳೂರಿನಿಂದ ಹೆಜ್ಜೆ ಇಡಲಿದೆ. ರಾಜ್ಯದಲ್ಲಿ ಒಂದೂರಿನಿಂದ ಮತ್ತೊಂದು ಊರಿಗೆ ಪ್ರಯಾಣಿಕರನ್ನ ಹೊತ್ತು ಸಾಗಲಿವೆ.

ರಾಜ್ಯದಲ್ಲಿ ಇಂದು ರೈಲು ಸಂಚಾರ! ಇಂದಿನಿಂದ ರಾಜ್ಯದಲ್ಲಿ 2 ವಿಶೇಷ ರೈಲುಗಳ ಸಂಚಾರ ಆರಂಭಿಸಲಿವೆ. ಬೆಂಗಳೂರಿನಿಂದ ಬೆಳಗಾವಿ ಹಾಗೂ ಮೈಸೂರಿಗೆ 2 ರೈಲುಗಳು ಹೆಜ್ಜೆ ಹಾಕಲಿವೆ. ಬೆಂಗಳೂರಿನಿಂದ ಬೆಳಗಾವಿಗೆ ಬೆಳಗ್ಗೆ 8ಕ್ಕೆ ರೈಲು ಹೊರಡಲಿದೆ. ಈ ವಿಶೇಷ ರೈಲು ಸಂಜೆ 6.30ಕ್ಕೆ ಬೆಳಗಾವಿಯನ್ನ ತಲುಪಲಿದೆ. ಇನ್ನು, ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲು ಸಂಚರಿಸಲಿದ್ದು, ಬೆಳಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಡಲಿದೆ.

ಈ ಸ್ಪೆಷಲ್ ಟ್ರೈನ್ ಮಧ್ಯಾಹ್ನ 12.30ಕ್ಕೆ ಮೈಸೂರನ್ನು ತಲುಪಲಿದೆ. ಇದೇ ರೈಲು ಮೈಸೂರಿನಿಂದ ಬೆಂಗಳೂರಿನತ್ತ ಮಧ್ಯಾಹ್ನ 1.45ಕ್ಕೆ ವಾಪಸ್ ಆಗಲಿದ್ದು, ಸಂಜೆ 5 ಗಂಟೆಗೆ ಬೆಂಗಳೂರನ್ನ ತಲಪಲಿದೆ. ಅದ್ರಲ್ಲೂ ಆನ್​ಲೈನ್​ ಮೂಲಕ ಸೀಟು ಕಾಯ್ದಿರಿಸಿದರೆ ಪ್ರಯಾಣಕ್ಕೆ ಅವಕಾಶವಿದೆ. ರೈಲು ನಿಲ್ದಾಣದ ಟಿಕೆಟ್ ಕೌಂಟರ್​ನಲ್ಲಿ ಯಾರಿಗೂ ಟಿಕೆಟ್ ವಿತರಿಸಲ್ಲ ಅಂತ ರೈಲ್ವೆ ಇಲಾಖೆ ಹೇಳಿದೆ.

ಇಂದಿನಿಂದ ರೈಲ್ವೆ ಸೇವಾ ಕೇಂದ್ರಗಳಲ್ಲಿ ಟಿಕೆಟ್ ಬುಕಿಂಗ್! ಇನ್ನು, ಜೂನ್​ 1ರಿಂದ ದೇಶದಲ್ಲಿ ಹಂತಹಂತವಾಗಿ ರೈಲು ಪ್ರಯಾಣ ಹೆಚ್ಚಿಸಲು ರೈಲ್ವೆ ಇಲಾಖೆ ಪ್ಲ್ಯಾನ್ ಮಾಡಿದೆ. ಇದಕ್ಕೆ ಪೂರ್ವ ಸಿದ್ಧತೆಯಂತೆ ಇವತ್ತಿನಿಂದ ರೈಲ್ವೆ ಸೇವಾ ಕೇಂದ್ರಗಳಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಲಿದೆ. ಇಷ್ಟು ದಿನ ಕೇವಲ ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್​ ಬುಕಿಂಗ್​ಗೆ ಅವಕಾಶವಿತ್ತು. ಇನ್ನು 2-3ದಿನಗಳಲ್ಲಿ ರೈಲು ನಿಲ್ದಾಣಗಳ ಟಿಕೆಟ್​ ಕೌಂಟರ್​ಗಳಲ್ಲೂ ಬುಕಿಂಗ್​ಗೆ ಸ್ಟಾರ್ಟ್ ಆಗಲಿದೆಯಂತೆ.

ಇನ್ನು ಜೂನ್​​ 1 ರಿಂದ ದೇಶಾದ್ಯಂತ ರೈಲು ಸ್ಟಾರ್ಟ್ ಅದ್ರೆ ಕರ್ನಾಟಕದಿಂದ ಯಾವ ಟ್ರೈನ್ ಓಡುತ್ತೆ.. ಯಾವ ಟ್ರೈನ್ ಬೆಂಗಳೂರಿಗೆ ಬರುತ್ತೆ ಅನ್ನೋದನ್ನ ಡೀಟೇಲಾಗಿ ನೋಡೋದಾದ್ರೆ.

ಯಾವ ಟ್ರೈನ್ ಬರುತ್ತೆ.. ಹೋಗುತ್ತೆ..! ಇನ್ನು ಟಿಕೆಟ್ ಬುಕಿಂಗ್ ಶುರುವಾಗ್ತಿದ್ದಂತೆ ಜೂನ್ 1ರಂದು ಯಶವಂತಪುರದಿಂದ ಶಿವಮೊಗ್ಗಕ್ಕೆ ಜನಶತಾಬ್ದಿ ಟ್ರೈನ್ ಸಂಚಾರ ಆರಂಭಿಸಲಿದೆ. ಅಲ್ಲದೇ, ಕೆಎಸ್​​ಆರ್​​​ ಬೆಂಗಳೂರು ನಿಲ್ದಾಣದಿಂದ ಹುಬ್ಬಳ್ಳಿಗೆ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಾಗಲಿದೆ. ಅಲ್ಲದೇ, ಮುಂಬೈನಿಂಣದ ಕೆಎಸ್ಆರ್ ಬೆಂಗಳೂರಿಗೆ ಉದ್ಯಾನ್ ಎಕ್ಸ್​ಪ್ರೆಸ್ ಟ್ರೈನ್ ಬಂದ್ರೆ, ದಾನಪುರದಿಂದ ಕೆಎಸ್ಆರ್ ಬೆಂಗಳೂರಿಗೆ ಸಂಘಮಿತ್ರ ಎಕ್ಸ್‌ಪ್ರೆಸ್‌ ರೈಲು ಬರಲಿದೆ. ದೆಹಲಿಯಿಂದ ಯಶವಂತಪುರಕ್ಕೆ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಟ್ರೈನ್ ಬಂದ್ರೆ, ಹೌರಾದಿಂದ ಯಶವಂತಪುರಕ್ಕೆ ಹೌರಾ ದುರಂತೊ ಎಕ್ಸ್‌ಪ್ರೆಸ್‌ ರೈಲು ಬರಲಿದೆ.

ಮೇ 25ರಿಂದ ದೇಶೀಯ ವಿಮಾನಗಳ ಹಾರಾಟ! ರೈಲ್ವೆ ಸೇವೆ ಜೊತೆಗೆ ಮೇ 25ರಿಂದ ದೇಶೀಯ ವಿಮಾನಯಾನ ಪುನಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ದೆ ಕೆಲವು ರೂಲ್ಸ್​ಗಳನ್ನೂ ಹಾಕಲಾಗಿದೆ.

‘ಹಾರಾಟ’ಕ್ಕೆ ರೂಲ್ಸ್ ಫಿಕ್ಸ್​! ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಕೇವಲ ಒಂದು ಹ್ಯಾಂಡ್​ ಬ್ಯಾಗ್​, ಒಂದು ಲಗ್ಗೇಜ್​​ಗೆ ಅವಕಾಶ ಕೊಡಲಾಗಿದೆ. ವಿಮಾನ ಹೊರಡುವ 2 ಗಂಟೆ ಮುನ್ನ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್​, ಗ್ಲೌಸ್ ಧರಿಸಿರಲೇಬೇಕು. ಆರೋಗ್ಯ ಸೇತು ಆ್ಯಪ್​ನಲ್ಲಿ ಗ್ರೀನ್​ ತೋರಿಸದಿದ್ದರೆ ಪ್ರಯಾಣಿಸಲು ಅವಕಾಶ ಕೊಡಲ್ಲ. ಆದ್ರೆ, 14 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯವಲ್ಲ ಅಂತಾ ಕೇಂದ್ರ ಸರ್ಕಾರ ಹೇಳಿದೆ.

ಇನ್ನು, ಪ್ರಯಾಣಿಕರು ಟರ್ಮಿನಲ್​ಗೆ ಪ್ರವೇಶಿಸುವ ಮುನ್ನ ಲಗ್ಗೇಜ್​ ಸ್ಯಾನಿಟೈಸ್ ಮಾಡಿಸಬೇಕು ಅಂತಾ ಹೇಳಿದೆ. ಇದರ ಜೊತೆಗೆ ದರ ಹೆಚ್ಚಳಕ್ಕೆ ಕಡಿವಾಣ ಹಾಕಲು ವಿಮಾನಯಾನದ ದರವನ್ನೂ ಸರ್ಕಾರ ಫಿಕ್ಸ್ ಮಾಡಿದ್ದು. ಎರಡು ಮೆಟ್ರೋ ಸಿಟಿಗಳ ನಡುವೆ ಟಿಕೆಟ್​ಗೆ ಕನಿಷ್ಟ 3,500 ರೂಪಾಯಿ ಪಡೆಯಬೇಕು ಮತ್ತು ಗರಿಷ್ಟ 10 ಸಾವಿರ ರೂಪಾಯಿಗಿಂತಾ ಹೆಚ್ಚು ದರ ನಿಗದಿಪಡಿಸುವಂತಿಲ್ಲ ಅಂತಾ ಸರ್ಕಾರ ಹೇಳಿದೆ.

ಒಟ್ನಲ್ಲಿ ಕೊರೊನಾ ಹರಡದಂತೆ ತಡೆಯೋಕೆ ವಿಧಿಸಿದ್ದ ಲಾಕ್​​ಡೌನ್ ಲಾಕಪ್​​ ಒಂದೊಂದಾಗಿ ಓಪನ್ ಆಗ್ತಿದೆ. ಜನರು ಹೊಸಜೀವನದತ್ತ ಹೆಜ್ಜೆ ಇಡ್ತಿದ್ರೆ ಸ್ಪೆಷಲ್ ಟ್ರೈನ್​​​​​​​​​​​​​​​ ಬಿಡೋಕೆ ಹೊರಟಿರೋದು ಮತ್ತಷ್ಟು ರಿಲೀಫ್ ನೀಡಿದಂತಾಗಿದೆ. ಆದ್ರೆ, ಕೊರೊನಾ ದೇಶದಲ್ಲಿ ರೌದ್ರನರ್ತ ತೋರ್ತಿದ್ದು ಮುಂದ್ಯಾವ ಅನಾಹುತ ಸೃಷ್ಟಿಸುತ್ತೋ ಕಾದು ನೋಡ್ಬೇಕು.

Published On - 8:01 am, Fri, 22 May 20

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ