ಯುಬಿ ಸಿಟಿ ಶಾಪಿಂಗ್ ಮಾಲ್ನಲ್ಲಿ ಪ್ರೀಮಿಯಂ ಪಾರ್ಕಿಂಗ್ಗೆ ಪ್ರತಿ ಗಂಟೆಗೆ 1,000 ರೂ ಶುಲ್ಕ, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಪ್ರತಿಕ್ರಿಯೆ
ಯುಬಿ ಸಿಟಿಯ ಶಾಪಿಂಗ್ ಮಾಲ್ನಲ್ಲಿ ಪ್ರೀಮಿಯಂ ಪಾರ್ಕಿಂಗ್ಗೆ ಪ್ರತಿ ಗಂಟೆಗೆ ಸಾವಿರೂ ಶುಲ್ಕ ವಿಧಿಸಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಜನ ವ್ಯಂಗ್ಯವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಐಶಾರಾಮಿ ಕಾರುಗಳನ್ನು ಹೊಂದಿದವರು ಪಾರ್ಕಿಂಗ್ಗೆ ಸಾವಿರಾರು ರೂ ಖರ್ಚು ಮಾಡಬಹುದು ಬೇರೆಯವರಿಂದ ಸಾಧ್ಯವಿಲ್ಲ. ಮೆಟ್ರೋ ಹಿಡಿದು ಯುಬಿಸಿಟಿಗೆ ಹೋಗುವುದೇ ಉತ್ತಮ ಎಂದೆಲ್ಲ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು, ಮಾರ್ಚ್.06: ನಗರದ ಪ್ರಸಿದ್ಧ ಯುಬಿ ಸಿಟಿ (UB City) ಶಾಪಿಂಗ್ ಮಾಲ್ನಲ್ಲಿ “ಪ್ರೀಮಿಯಂ ಪಾರ್ಕಿಂಗ್” (Premium Parking) ಗೆ ಪ್ರತಿ ಗಂಟೆಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ. ಸದ್ಯ ಪ್ರೀಮಿಯಂ ಪಾರ್ಕಿಂಗ್ ಶುಲ್ಕ ತೋರಿಸುವ ಸೈನ್ ಬೋರ್ಡ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾರ್ಕಿಂಗ್ ಶುಲ್ಕ ನೋಡಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಶಾಕ್ಗೆ ಒಳಗಾಗಿದ್ದಾರೆ. ಶುಲ್ಕದ ಸಂಬಂಧ ಟ್ವಿಟರ್ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಪೋಸ್ಟ್ ಆದ ಫೋಟೋಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅನೇಕರು, “ಪ್ರೀಮಿಯಂ ಪಾರ್ಕಿಂಗ್” ಎಂದರೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಪ್ರೀಮಿಯಂ ಪಾರ್ಕಿಂಗ್ನಲ್ಲಿ ಕಾರ್ ವಾಶ್ ಮತ್ತು ಪಾಲಿಶ್ ಮಾಡುವ ಸೇವೆ ಒಳಗೊಂಡಿದೆಯೇ ಎಂದು ಬಳಕೆದಾರರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರ ಕಾರಿಗೆ “ಬ್ಲೂ ಟಿಕ್” ಸಿಗುತ್ತದೆಯೇ ಎಂದು ಕೇಳಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್
Such things exist in India!! And this ain’t the airport pic.twitter.com/YpWBWFpWjt
— Ishan Vaish (@thatishan) March 5, 2024
ಇದನ್ನೂ ಓದಿ: National Dentist’s Day: ವಿಶ್ವ ದಂತ ವೈದ್ಯರ ದಿನ; ನಿಮ್ಮ ಮೊಗದಲ್ಲಿ ನಗು ಅರಳಿಸುವ ದಂತ ವೈದ್ಯರಿಗೊಂದು ಶುಭಾಶಯ
ಪ್ರೀಮಿಯಂ ಪಾರ್ಕಿಂಗ್ ಎಂದರೇನು? ಕಾರ್ ಪಾರ್ಕಿಂಗ್ ಜೊತೆಗೆ 1 ತಿಂಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವು ಸ್ಟಾಕ್ ಟಿಪ್ ಅನ್ನು ಪಡೆಯುತ್ತೀರಾ? ಹೌದು ಎಂದಾದರೆ, ವೆಚ್ಚವನ್ನು ಸಮರ್ಥಿಸಲಾಗುತ್ತದೆ” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು 2012 ರಿಂದಲೂ ಇದೆ. ಇದು ಹೊಸದೇನಲ್ಲ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳಾದ ಗೂಗಲ್, ಅಮೆಜಾನ್, ಗೋಲ್ಡ್‌ಮನ್ ಸ್ಯಾಕ್ಸ್ ಗ್ರೂಪ್ ಮತ್ತು ಆಕ್ಸೆಂಚರ್‌ನಂತಹ ದೊಡ್ಡ ದೊಡ್ಡ ಸಂಸ್ಥೆಗಳು ಇಲ್ಲಿದ್ದು ಹೊರ ರಾಜ್ಯದ ಜನರೂ ಇಲ್ಲಿ ಸೇರಿಕೊಂಡಿದ್ದಾರೆ. ಇದರಿಂದಾಗಿ ಮನೆ ಸಿಗುವುದು ಕಷ್ಟವಾಗಿ ಮನೆ ಬಾಡಿಗೆ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಾಡಿಗೆಯು ಗಗನಕ್ಕೇರುತ್ತಿವೆ. ಹಾಗೂ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಪಾರ್ಕಿಂಗ್ಗೆ ಸ್ಥಳ ಇಲ್ಲದಂತಾಗಿದೆ. ಇದು ಪಾರ್ಕಿಂಗ್ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:34 am, Wed, 6 March 24