ಶಿವಮೊಗ್ಗ, ಮೇ 27: ಬೆಂಗಳೂರಿನಲ್ಲಿರುವ (Bengaluru) ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಡೆಂಟ್ ಚಂದ್ರಶೇಖರ್ (52) ಶಿವಮೊಗ್ಗದ (Shivamogga) ವಿನೋಬ ನಗರದ ಕೆಂಚಪ್ಪ ಲೇಔಟ್ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ನಿಗಮದಲ್ಲಿ 187 ಕೋಟಿ ಹಗರಣ ನಡೆದಿತ್ತು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಇನ್ನು ನನ್ನ ಸಾವಿಗೆ ಪದ್ಮಾನಾಭ, ಪರಶುರಾಮ್, ಶುಚಿಸ್ಮತಾ ಅಧಿಕಾರಿಗಳೇ ಕಾರಣ” ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗಾದರೆ ವಿನೋದ್ ಅವರ ಡೆತ್ ನೋಟ್ನಲ್ಲಿ ಏನಿದೆ? ಏನೆಲ್ಲ ಅವ್ಯವಹಾರ ನಡೆದಿದೆ? ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಿಗೆಟ್ಟಿರುವ ಈಗಾಗಲೇ ಕಾಂಗ್ರೆಸ್ ಸರಕಾರವು ಇಕ್ಕಟ್ಟಿಗೆ ಸಿಲುಕಿದೆ. ಈ ನಡುವೆ ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಧಿಕಾರಿಯೊಬ್ಬರು ಶಿವಮೊಗ್ಗದಲ್ಲಿ ನೇಣಿಗೆ ಶರಣಾಗಿದ್ದಾರೆ. ನಿಗಮದಲ್ಲಿ ಕೋಟ್ಯಾಂತರ ಅವ್ಯವಹಾರ ನಡೆದಿದೆ. ಅಧಿಕಾರಿ ಮೇಲೆ ಒತ್ತಡ ಹಾಕಿ ಹಣ ದುರುಪಯೋಗ ಮಾಡಿದ್ದಾರೆ.
ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಅಧೀಕ್ಷರಾಗಿ ಚಂದ್ರಶೇಖರ್ ಕಳೆದ 9 ವರ್ಷದಿಂದ ಕೆಲಸ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಇವರ ಕೆಲಸವು ಪರ್ಮೇಂಟ್ ಆಗಿದೆ. ಈ ನಡುವೆ ವಾಲ್ಮೀಕಿ ಎಸ್ಟಿ ವೆಲ್ ಫೇರ್ ಇಲಾಖೆಯಲ್ಲಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ 187 ಕೋಟಿ ಹಣ ಬಂದಿದೆ. ಅದರಲ್ಲಿ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದೆ. ನಿಗಮದ ನಿರ್ದೇಶಕ ಜೆಜೆ ಪಧ್ಮನಾಬ್, ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಬೆಂಗಳೂರು ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮತಾ ರವುಲ್ ಈ ಮೂವರು ಸೇರಿ ಚಂದ್ರಶೇಖರ್ ಮೇಲೆ ಒತ್ತಡ ಹಾಕಿ ಈ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ವ್ಯವಹಾರ ನೋಡಿದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಮನನೊಂದು ಮತ್ತು ಭಯದಿಂದ ಸುಮಾರು ಆರು ಪುಟಗಳ ಡೆತ್ ನೋಟ್ ಬರೆದು ಶಿವಮೊಗ್ಗದ ವಿನೋಬ ನಗರ ಕೆಂಚಪ್ಪ ಲೇಔಟ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮೂವರ ವಿರುದ್ಧ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಕುಟುಂಬಸ್ಥರು ಚಂದ್ರಶೇಖರ್ ಸಾವಿನಿಂದ ತೀವ್ರ ಆಘಾತಕ್ಕೋಳಗಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಭೂಮಿಯಲ್ಲಿ ಅಕ್ರಮ ಸಸಿ: ಸರ್ವೆಗೆ ಆದೇಶಸಿದ ಕೆಐಡಿಬಿ
ಆರು ಪುಟಗಳ ಡೆತ್ ನೋಟ್ನಲ್ಲಿ, ಸಚಿವರು ಮೌಖಿಕವಾಗಿ ಸೂಚನೆಯಂತೆ ವಸಂತನಗರದಲ್ಲಿರುವ ನಿಗಮದ ಯೂನಿಯ್ ಬ್ಯಾಂಕ್ ಖಾತೆಯನ್ನು ಎಂಜಿ ರಸ್ತೆಯಲ್ಲಿರುವ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಎಂಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ನಿಗಮದ ಖಾತೆ ವರ್ಗಾವಣೆಯಾದ ಬಳಿಕ
ದಿನಾಂಕ 4/3/2024 ರಂದು 25 ಕೋಟಿ
ದಿನಾಂಕ 6/3/2024 ರಂದು 25 ಕೋಟಿ
ದಿನಾಂಕ 21/3/2024 ರಂದು 44 ಕೋಟಿ
ದಿ. 21/3/2004 ರಂದು 43 ಕೋಟಿ (ರಾಜ್ಯ ಸರಕಾರದ ಖಜಾನೆಯಿಂದ )
ಹಾಗೂ 21/3/2024 ರಂದು 50 ಕೋಟಿ (ರಾಜ್ಯ ಸರಕಾರದ ಖಜಾನೆಯಿಂದ)
ಒಟ್ಟು 187. 33 ಕೋಟಿ ವರ್ಗಾವಣೆ ಆಗಿದೆ.
ಎಂಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮತಾ ರವುಲ್ ಮತ್ತು ನಿಗಮದ ನಿರ್ದೇಶಕರ ಪಧ್ಮನಾಬ್ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ಮೂವರು ಸೇರಿ ಕಾನೂನು ಬಾಹಿರವಾಗಿ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆ ಮಾಡಿದ್ಧಾರೆ. ಅಂದರೆ ಸರಕಾರ ಎಸ್ಟಿ ಫಲಾನುಭವಿಳಿಗೆ ಸೇರಬೇಕಿದ್ದ ಅನುದಾನದ ದುರ್ಬಳಕೆಯಾಗಿದೆ ಎನ್ನುವುದು ಅಧೀಕಕ್ಷ ಚಂದ್ರಶೇಖರ್ ಆರೋಪವಾಗಿದೆ.
ತಮ್ಮ ಮೇಲೆ ಒತ್ತಡ ತಂದು ಹಣವನ್ನು ವರ್ಗಾವಣೆ ಮಾಡಿ ಬಳಿಕ ಅದನ್ನು ದುರುಪಯೋಗ ಮಾಡಿದ್ದಾರೆಂದು ಡೆತ್ ನೋಟ್ನಲ್ಲಿ ಚಂದ್ರಶೇಖರ್ ಉಲ್ಲೇಖ ಮಾಡಿದ್ದಾರೆ. ಈ ನಡುವೆ ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆ ಮೃತನ ಮನೆಗೆ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಚಂದ್ರಶೇಖರ್ ಸಾವಿಗೆ ವಾಲ್ಕೀಕಿ ನಿಮಗ ಅಧಿಕಾರಿ ಮತ್ತು ಬ್ಯಾಂಕ್ ವ್ಯವಸ್ಥಾಪಕಿ ಕಾರಣ ಎನ್ನುವುದು ಡೆತ್ ನೋಟ್ನಲ್ಲಿ ಉಲ್ಲೇಖವಾಗಿದೆ. ಈ ಹಿನ್ನಲೆಯಲ್ಲಿ ಇಲಾಖೆಗೆಯ ಸಂಬಂಧಿಸಿದ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿರುವ ಮೂವರ ವಿರುದ್ಧ ತನಿಖೆ ಮಾಡಬೇಕು. ಈ ಮೂಲಕ 187 ಕೋಟಿ ಅನುದಾನದಲ್ಲಿ ಎಷ್ಟು ಕೋಟಿ ಹಣ ದುರುಪಯೋಗವಾಗಿದೆ ಎನ್ನುವುದು ಪತ್ತೆ ಮಾಡಬೇಕು. ಚಂದ್ರಶೇಖರ್ ಸಾವಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ತೆಗೆದುಕೊಳ್ಳಬೇಕಂದು ಶಾಸಕರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
Published On - 1:02 pm, Mon, 27 May 24