ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಕೆಲ ಖದೀಮರು ಬೋರ್ ವೆಲ್ ಮೋಟಾರ್​ಗಳನ್ನು ಕದ್ದುಪರಾರಿಯಾಗುತ್ತಿದ್ದು ಜನರು ಕಂಗಾಲಾಗಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ವರ್ಕ್ ಆಗದೇ ಇರೋದು ಈ ಖದೀಮರಿಗೆ ಪ್ಲಸ್ ಪಾಯಿಂಟ್ ಆಗಿದೆ. ನೀರಿಲ್ಲದೆ ಭಾರೀ ಕಷ್ಟ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Mar 13, 2024 | 10:31 AM

ಬೆಂಗಳೂರು, ಮಾರ್ಚ್​.13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭ ಕಾಲದಲ್ಲೇ ಬೇಸಿಗೆಯ ಬೇಗುದಿ ಆರಂಭವಾಗಿದೆ. ನಗರದೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ದಾಸರಹಳ್ಳಿ ವಿಧಾನಸಭಾಕ್ಷೇತ್ರದ ರಾಜಗೋಪಾಲನಗರ ಜನರಿಗೆ ಜಲಸಂಕಷ್ಟ ಎದುರಾಗಿದೆ. ನಲ್ಲಿ ನೀರು ಬರದೇ ನಿವಾಸಿಗಳು ಹೈರಾಣಾಗಿದ್ದಾರೆ. ಮತ್ತೊಂದೆಡೆ ಖದೀಮರು ಬೋರ್ ವೆಲ್ ಮೋಟಾರ್​ಗಳಿಗೆ ಕನ್ನ ಹಾಕುತ್ತಿದ್ದು ಜನರು ಕಂಗಾಲಾಗಿದ್ದಾರೆ. ರಾತ್ರೋ ರಾತ್ರಿ ಎಂಟ್ರಿ ಕೊಡುವ ಖದೀಮರು ಬೋರ್ ವೆಲ್ ಮೋಟಾರ್ ಕದ್ದೋಯ್ಯುತ್ತಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ವರ್ಕ್ ಆಗದೇ ಇರೋದು ಈ ಖದೀಮರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಬೋರ್ ವೆಲ್​ಗಳ ಮೋಟಾರ್ ಕಿತ್ತು, ಕಳ್ಳತನ ಮಾಡಿ ಪುಂಡರು ಆಟಾಟೋಪ ಮೆರೆಯುತ್ತಿದ್ದಾರೆ. ಬೋರ್ ವೆಲ್​ನಲ್ಲಿ ನೀರು ಇದ್ದರೂ ಮೋಟರ್​ ಇಲ್ಲದ ಕಾರಣ ಜನ ನೀರು ಬಳಸಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ಸರ್ಕಾರದಿಂದ ಇಟ್ಟಿರೋ ಟ್ಯಾಂಕ್ ನೀರು ಕೂಡ ಸಾಕಾಗುತ್ತಿಲ್ಲ. ಟ್ಯಾಂಕರ್ ನೀರು ಖರೀದಿಸಲು ಹಣ ಇಲ್ಲ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಇನ್ನು ಮತ್ತೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಂತರ್ಜಲಮಟ್ಟ ಕುಸಿತ ಹಿನ್ನಲೆ ಒಂದೆಡೆ ಸರ್ಕಾರವೇ ಬೋರ್ ವೆಲ್ ಕೊರೆಯದಂತೆ ನಿರ್ಬಂಧ ಹೇರಿದೆ. ಬೆಂಗಳೂರು ಜನತೆಗೆ ನೀರು ಪೂರೈಸಲು ಸರ್ಕಾರ ವಿಫಲವಾಗಿದ್ದು, ಮತ್ತೊಂದೆಡೆಗೆ ಸರ್ಕಾರದಿಂದ ನಗರದಲ್ಲಿ ನೀರಿಗಾಗಿ ಬೋರ್ ವೆಲ್‌ಗಳನ್ನ ಕೊರೆಸಲು ಮುಂದಾಗಿದ್ದು ಕೆಲವೊಂದೆಡೆಗೆ ನೀರು ಬಂದ್ರೆ ಇನ್ನೊಂದೆಡೆಗೆ ಸಾವಿರ ಅಡಿ ಬೋರ್ ವೆಲ್ ಕೊರೆದ್ರು ನೀರು ಬರದೇ ಹಣ ಪೊಲಾಗುತ್ತಿದೆ. ಇನ್ನೊಂದೆಡೆ ವೈಟ್ ಟ್ಯಾಪಿಂಗ್‌ನಿಂದ ಅಂತರ್ಜಲಮಟ್ಟಕ್ಕೆ ತೊಂದರೆ ಆಗುತ್ತಿದೆ ಹೀಗಾಗಿ ವೈಟ್ ಟ್ಯಾಪಿಂಗ್ ರಸ್ತೆ ತಗೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bengaluru Water Crisis: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಗ್ರಾಹಕರಿಗೆ ನೀರು ಸರಬರಾಜಿನಲ್ಲಿ ಶೇ 20 ಕಡಿತ

ಇನ್ನೂ ಈಗಾಗಲೇ ಬೆಂಗಳೂರಿನಲ್ಲಿ ಅಂತರ್ಜಲಮಟ್ಟ ಕುಸಿತ ಕಂಡಿದ್ದು, ಮತ್ತಷ್ಟು ಬೋರ್‌ವೆಲ್ ಕೊರೆಸುವುದರಿಂದ ಇನ್ನಷ್ಟು ಅಂತರ್ಜಲಮಟ್ಟ ಕುಸಿಯಲಿದೆ. ಸಾವಿರ ಅಡಿಯಿಂದ ಸಿಗುವ ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್ ಸೇರಿದಂತೆ ವಿವಿಧ ಕೆಮಿಕಲ್‌ಯುಕ್ತ ಗಡಸು ನೀರು ಬರುತ್ತದೆ. ಆ ನೀರು ಅಷ್ಟು ಯೋಗ್ಯ ಅಲ್ಲ. ಕಾವೇರಿ ನೀರು ಎಷ್ಟು ಬೇಕು ಈ ಹಿಂದಿನಂತೆ ಬೆಂಗಳೂರು ನಗರಕ್ಕೆ ಜಲಮಂಡಳಿಯಿಂದ ಸರಬರಾಜು ಆಗುತ್ತಿದೆ. ನಗರದಲ್ಲಿ  ಬೋರ್‌ವೆಲ್ ನೀರು ಬಳಕೆಯಲ್ಲಿ ಇತ್ತು. ಆದರೆ ಅಂತರ್ಜಲಮಟ್ಟ ಕೊರತೆ ಕಾರಣದಿಂದ ಬತ್ತಿ ಹೋಗಿದ್ದು, ನೀರಿನ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಹೊಸದಾಗಿ ಬೋರ್‌ವೆಲ್ ಕೊರೆಸುವ ದುಸ್ಸಾಹಸಕ್ಕೆ ಜಲ ಮಂಡಳಿ ಮುಂದಾಗಿದೆ. ಹೊಸ ಬೋರ್‌ವೆಲ್ ಕೊರೆಸಿದ್ರು ನೀರು ಸಿಗುತ್ತೆ ಅನ್ನೋ ಭರವಸೆ ಇಲ್ಲ. ಇದರ ಬದಲು ಈಗಾಗಲೇ ಬತ್ತಿ ಹೋದ ಬೋರ್‌ವೆಲ್ ‌ಗಳ ರಿಚಾರ್ಜ್ ಅವಶ್ಯಕವಾಗಿದೆ. ನಗರದಲ್ಲಿ 4 ಲಕ್ಷದಷ್ಟು ಖಾಸಗಿಯವರು ಕೊರೆಸಿರುವ ಬೋರ್‌ವೆಲ್‌ಗಳಿವೆ. ಇದನ್ನ ಹೊರತುಪಡಿಸಿ ಸರ್ಕಾರದಿಂದ ಕೊರೆಸಿರುವ 10 ಸಾವಿರಕ್ಕೂ ಅಧಿಕ ಬೋರ್‌ವೆಲ್ ಗಳಿವೆ ಒಂದು ಏರಿಯಾ ಆಯ್ಕೆ ಮಾಡಿಕೊಂಡು ತ್ಯಾಜ್ಯ ನೀರು ಎಸ್‌ಟಿ‌ಪಿ ಘಟಕ ಮೂಲಕ ಶುದ್ಧೀಕರಣವಾದ ನೀರನ್ನ ಬೋರ್ವೆಲ್‌ಗೆ ಬಿಡುವುದರಿಂದ ಇನ್ನೂಳಿದ ಬೋರ್ವೆಲ್ ಗಳು ರಿಚಾರ್ಜ್ ಆಗುತ್ತವೆ ಇದನ್ನ ಸರ್ಕಾರ ಮಾಡಬೇಕು ಅನ್ನೋದು ತಜ್ಞರ ಅಭಿಪ್ರಾಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ