ಬೆಂಗಳೂರು: ಪಶ್ಚಿಮ ವಿಭಾಗ ಪೊಲೀಸರಿಂದ ದಾಖಲೆ ಪ್ರಮಾಣದಲ್ಲಿ 4 ಕೋಟಿ ರೂಪಾಯಿ ದಂಡ ವಸೂಲಿ

| Updated By: ganapathi bhat

Updated on: Jul 10, 2021 | 6:53 PM

ಪಶ್ಚಿಮ ವಿಭಾಗ ಪೊಲೀಸರಿಂದ ದಾಖಲೆ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಇಲ್ಲದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದವರಿಂದ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು: ಪಶ್ಚಿಮ ವಿಭಾಗ ಪೊಲೀಸರಿಂದ ದಾಖಲೆ ಪ್ರಮಾಣದಲ್ಲಿ 4 ಕೋಟಿ ರೂಪಾಯಿ ದಂಡ ವಸೂಲಿ
ಲಾಕ್​ಡೌನ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ನಗರದಲ್ಲಿ ಮಾಸ್ಕ್‌, ದೈಹಿಕ ಅಂತರ ಕಾಪಾಡದ ಹಿನ್ನೆಲೆ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರಿಂದ ದಾಖಲೆ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ. ಒಂದು ವರ್ಷದಲ್ಲಿ 4 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 2020ರ ಜುಲೈ 4ರಿಂದ 2021ರ ಜುಲೈ 10ರವರೆಗೆ ವಸೂಲಿ ಮಾಡಿರುವ ದಂಡ ನಾಲ್ಕು ಕೋಟಿಯಷ್ಟು ದಂಡ ವಸೂಲು ಮಾಡಲಾಗಿದೆ.

2020ರ ಜುಲೈ 4ರಿಂದ 2021ರ ಏಪ್ರಿಲ್‌ 1ರವರೆಗೆ 1,38,505 ಕೇಸ್ ದಾಖಲಿಸಿ 3,46,26,250 ರೂಪಾಯಿ ದಂಡ ಪಡೆದುಕೊಳ್ಳಲಾಗಿದೆ. 2ನೇ ಅಲೆಯ ಸಂದರ್ಭ 2021ರ ಏಪ್ರಿಲ್‌ 2ರಿಂದ ಜುಲೈ 10ರವರೆಗೆ 27,654 ಕೇಸ್ ಹಾಗೂ 69,13,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಪಶ್ಚಿಮ ವಿಭಾಗ ಪೊಲೀಸರಿಂದ ದಾಖಲೆ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಇಲ್ಲದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದವರಿಂದ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು ನಗರ ಅನ್ಲಾಕ್ ಆಗುವುದರೊಂದಿಗೆ, ಕೊವಿಡ್ -19 ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಹೆಚ್ಚುತ್ತಿದೆ. ಹಿಂದಿನ ಆರು ದಿನಗಳ ಅವಧಿಗೆ ಹೋಲಿಸಿದರೆ ಅನ್ಲಾಕ್ ಆದ ಆರು ದಿನಗಳಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಶೇಕಡಾ 169 ರಷ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿತ್ತು. ಜುಲೈ 1 ಮತ್ತು 6ರ ನಡುವೆ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಲು ಅಥವಾ ಸಾಮಾಜಿಕ ಅಂತರ ಕಾಪಾಡಲು  ವಿಫಲರಾದ ಜನರ ವಿರುದ್ಧ 5,688 ಪ್ರಕರಣಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳಲ್ಲಿ 14.2 ಲಕ್ಷ ದಂಡ ಸಂಗ್ರಹಿಸಲಾಗಿದೆ. ಜೂನ್ 25-30ರ ಅವಧಿಯಲ್ಲಿ 2,109 ಪ್ರಕರಣಗಳು ದಾಖಲಾಗಿದ್ದು ಸುಮಾರು 5.3 ಲಕ್ಷ ರೂ ದಂಡ ಸಂಗ್ರಹವಾಗಿದೆ.

ಕಳೆದ ಮಂಗಳವಾರ ಅತಿ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪಶ್ಚಿಮ ವಲಯ 225, ಪೂರ್ವ ವಲಯ 222, ಮತ್ತು ದಕ್ಷಿಣ ವಲಯದಲ್ಲಿ 193 ಪ್ರಕರಣ ದಾಖಲಾಗಿತ್ತು. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಬಿಬಿಎಂಪಿ   4.9 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡಿದೆ ಮತ್ತು ಕೊವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ 183 ಮಳಿಗೆಗಳಿಗೆ ಬೀಗಮುದ್ರೆ ಹಾಕಿತ್ತು. ಬೆಂಗಳೂರು ಪೊಲೀಸರು ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕೊವಿಡ್ ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣ ಶೇ 169ರಷ್ಟು ಏರಿಕೆ, ಜೂನ್ ಕೊನೇ ವಾರ ಸಂಗ್ರಹವಾಗಿದ್ದು ₹5.3ಲಕ್ಷ ದಂಡ

Noise Pollution: ಪಟಾಕಿ ಸಿಡಿಸುವ ಮುನ್ನ ಎಚ್ಚರ; ಈ ಸಿಟಿಯಲ್ಲಿ ಶಬ್ದ ಮಾಲಿನ್ಯ ಮಾಡಿದವರಿಗೆ 1 ಲಕ್ಷ ರೂ. ದಂಡ!

Published On - 6:46 pm, Sat, 10 July 21