ರಾಜ್ಯದಲ್ಲಿ ಇಂದು 148 ಜನರಿಗೆ ಕೊರೊನಾ ಸೋಂಕು ದೃಢ; ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,305 ಜನರಿಗೆ ಕೊವಿಡ್ ಟೆಸ್ಟ್(Covid) ಮಾಡಲಾಗಿದ್ದು, 148 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ವಿಜಯನಗರ ಜಿಲ್ಲೆಯಲ್ಲಿ ಓರ್ವ ಬಲಿಯಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿಯೇ 75 ಜನರಲ್ಲಿ ಕೊರೊನಾ ಸೋಂಕು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಇಂದು 148 ಜನರಿಗೆ ಕೊರೊನಾ ಸೋಂಕು ದೃಢ; ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು?
ಸಾಂದರ್ಭಿಕ ಚಿತ್ರ
Edited By:

Updated on: Jan 02, 2024 | 10:15 PM

ಬೆಂಗಳೂರು, ಜ.02: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,305 ಜನರಿಗೆ ಕೊವಿಡ್ ಟೆಸ್ಟ್(Covid) ಮಾಡಲಾಗಿದ್ದು, 148 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ವಿಜಯನಗರ ಜಿಲ್ಲೆಯಲ್ಲಿ ಓರ್ವ ಬಲಿಯಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿಯೇ 75 ಜನರಲ್ಲಿ ಕೊರೊನಾ ಸೋಂಕು ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿ 1,144 ಜನರಲ್ಲಿ ಕೊರೊನಾ ಸಕ್ರಿಯ ಕೇಸ್​ಗಳಿವೆ. ಜೊತೆಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 2.02ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟು?

ರಾಜ್ಯದಲ್ಲಿ ಇಂದು ಹಾಸನ 18, ವಿಜಯನಗರ 8, ಉತ್ತರ ಕನ್ನಡ 7, ಚಿಕ್ಕಬಳ್ಳಾಪುರ 5, ದಾವಣಗೆರೆ 5, ಬಳ್ಳಾರಿ 4, ಚಿಕ್ಕಮಗಳೂರು 4, ಬೆಂಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ 3 ಕೇಸ್, ದಕ್ಷಿಣ ಕನ್ನಡ, ಗದಗ, ರಾಯಚೂರು ಜಿಲ್ಲೆಯಲ್ಲಿ ತಲಾ 3 ಕೇಸ್ ದಾಖಲಾಗಿದೆ.

ಇದನ್ನೂ ಓದಿ:ಕೊವಿಡ್ ಎನ್.1 ತಳಿ ಜಾಸ್ತಿ ಅಪಾಯಕಾರಿ ಅಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಸಡ್ಡೆ ಬೇಡ: ಡಾ ಶರಣಪ್ರಕಾಶ್ ಪಾಟೀಲ್, ಸಚಿವ

ಮೈಸೂರು ಜಿಲ್ಲೆಯಲ್ಲಿ 2, ಬೀದರ್ 1, ಕೋಲಾರ, ಕಲಬುರಗಿ, ಧಾರವಾಡ, ತುಮಕೂರು ಜಿಲ್ಲೆಯಲ್ಲಿ ತಲಾ 1 ಪ್ರಕರಣ ಬೆಳಕಿಗೆ ಬಂದಿದೆ ಎಂದು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Tue, 2 January 24