AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಇಂಪ್ಯಾಕ್ಟ್: ಕೊವಿಡ್ ಸೆಂಟರ್ ನಿರ್ಮಾಣಕ್ಕೆ ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ

ಕೊವಿಡ್​ ಸೆಂಟರ್ ಇಲ್ಲದಿರುವ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದೀಗ ಜನರಲ್ ಮೆಡಿಸಿನ್ ವಾರ್ಡ್​ನ ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿ, ಕಾರವಾರ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಟ್ಟಡದಲ್ಲಿ ಕೊವಿಡ್ ಸೆಂಟರ್ ನಿರ್ಮಾಣ ಮಾಡಲು ವೈದ್ಯಕೀಯ ಸಿಬ್ಬಂದಿ ಮುಂದಾಗಿದ್ದಾರೆ.

ಟಿವಿ9 ಇಂಪ್ಯಾಕ್ಟ್: ಕೊವಿಡ್ ಸೆಂಟರ್ ನಿರ್ಮಾಣಕ್ಕೆ ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ
ಉತ್ತರ ಕನ್ನಡ ಕೊವಿಡ್​ ಸೆಂಟರ್​
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Dec 22, 2023 | 5:59 PM

Share

ಉತ್ತರ ಕನ್ನಡ, ಡಿ.22: ಟಿವಿ9 ವರದಿ ಬೆನ್ನಲ್ಲೇ ಉತ್ತರ ಕನ್ನಡ(Uttara Kannada) ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಕೊವಿಡ್ ಸೆಂಟರ್(Covid 19) ನಿರ್ಮಾಣಕ್ಕೆ ವೈದ್ಯಕೀಯ ಸಿಬ್ಬಂದಿ ಮುಂದಾಗಿದ್ದಾರೆ. ಕೊವಿಡ್​ ಸೆಂಟರ್ ಇಲ್ಲದಿರುವ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದೀಗ ಜನರಲ್ ಮೆಡಿಸಿನ್ ವಾರ್ಡ್​ನ ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿ, ಕಾರವಾರ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಟ್ಟಡದಲ್ಲಿ ಕೊವಿಡ್ ಸೆಂಟರ್ ನಿರ್ಮಾಣ ಮಾಡಲು ಮುಂದಾಗಿದೆ.

ಪ್ರವಾಸಿಗರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಹ ಹಲವು ಸೂಚನೆ

ರಾಜ್ಯಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಲಿದ್ದು, ಹೊಸ ವರ್ಷಾಚರಣೆ ಹಾಗೂ ಕ್ರಿಸ್ ಮಸ್ ಹಿನ್ನಲೆಯಲ್ಲಿ ಪ್ರವಾಸಿಗರ ಸ್ವರ್ಗ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕೊರೊನಾ ಹೆಚ್ಚಾದ್ರೆ, ನಮಗೇನು ಭಯ ಎಂದು ಎಂಜಾಯ್ ಮಾಡುವ ಪ್ರವಾಸಿಗರಿಗೆ ರಾಜ್ಯದ ಮಾರ್ಗಸೂಚಿ ಜೊತೆ ಉತ್ತರ ಕನ್ನಡ ಜಿಲ್ಲಾಡಳಿತ ಸಹ ಹಲವು ಸೂಚನೆ ನೀಡಿದೆ. ಕರ್ನಾಟಕದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆ. ಕಡಲು ಮತ್ತು ಪ್ರಕೃತಿ ಸೌಂದರ್ಯಕ್ಕೆ ತವರು. ಹೀಗಾಗಿ ಮೋಜು,ಮಸ್ತಿ ಜೊತೆ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು ಹರಿದು ಬರುತ್ತದೆ.

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ನಿರ್ಬಂಧ ಹೇರಿಲ್ಲ-ಜಿಲ್ಲಾ ಆರೋಗ್ಯಾಧಿಕಾರಿ

ಇನ್ನು  ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರವಾರ, ಯಲ್ಲಾಪುರ, ದಾಂಡೇಲಿ, ಮುರುಡೇಶ್ವರ ,ಗೋಕರ್ಣ, ಶಿರಸಿ ಮಾರಿಕಾಂಬಾ ಸೇರಿದಂತೆ ಹಲವು ಭಾಗದಲ್ಲಿ ಫುಲ್​ ರಷ್​ ಇರುತ್ತದೆ. ಆದ್ರೆ, ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕೊರೊನಾ ಸಹ ಪ್ರವಾಸಿಗರಂತೆ ಜಿಲ್ಲೆಗೆ ಅಥಿತಿಯಾಗಿ ಬಂದಿದ್ದು, ತನ್ನ ಖಾತೆ ತೆರದಿದೆ. ರಾಜ್ಯ ಸರ್ಕಾರ ಸಹ ಕಠಿಣ ನಿಯಮ ಜಾರಿಗೆ ತರದಿದ್ರೂ ನಿಯಮಾವಳಿ ಜಾರಿಗೆ ಮಾಡಿದೆ. ಆದ್ರೆ, ಬಂದ ಪ್ರವಾಸಿಗರು ತಮಗೆ ಯಾವುದೇ ಭಯ ಇಲ್ಲ ಎನ್ನುವಂತೆ ಬೇಕಾ ಬಿಟ್ಟಿಯಾಗಿ ಎಂಜಾಯ್ ಮಾಡುತಿದ್ದಾರೆ. ಇನ್ನು ಜಿಲ್ಲೆಗೆ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯದ ಜನರು ಆಗಮಿಸುತ್ತಿದ್ದು, ಕೊರೊನಾ ಆತಂಕ ಮತ್ತಷ್ಟು ಹೆಚ್ಚು ಮಾಡಿದೆ. ಇದರಿಂದ ಜಿಲ್ಲಾಡಳಿತಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜನ ಆಗ್ರಹಿಸಿದ್ದರು.

ಹೊಸ ವರ್ಷಾಚರಣೆಗೆ ಕಾರವಾರಕ್ಕೆ ಬರುವವರಿಗೆ ಸದ್ಯ ಯಾವುದೇ ನಿರ್ಬಂಧ ಹೇರಿಲ್ಲ. ವೈರಸ್ ತಿವ್ರತೆ ಹೆಚ್ಚಾಗಿ ಕಂಡು ಬಂದಲ್ಲಿ ನಿರ್ಬಂಧ ಹೆರಬೇಕಾಗುತ್ತದೆ. ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ ಪ್ರವಾಸಿಗರು ಕೊವಿಡ್ ಬಗ್ಗೆ ಯಾವುದೇ ಆತಂಕ ಬೇಡ ಎಚ್ಚರಿಕೆ ಇರಲಿ ,ಹಾರ್ಟ್, ಅಸ್ತಮಾ ಸಮಸ್ಯೆ ಕಾಯಿಲೆ ಇರುವವರು ಪ್ರವಾಸಕ್ಕೆ ಬರದೆ ಇರುವುದು ಒಳ್ಳೆಯದು. ಕೊರೊನಾ ಸಂಖ್ಯೆ ಹೆಚ್ಚಾದ್ರೆ ಗೋವಾ ಬಾರ್ಡರ್​ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಸದ್ಯ ಪ್ರವಾಸಿಗರಿಗಾಗಿ ಜಿಲ್ಲೆಯಲ್ಲಿ ಕುಲ್ಲಂ ಕುಲ್ಲ ಅವಕಾಶವನ್ನೇನೋ ಮಾಡಿಕೊಟ್ಟಿದೆ. ಇನ್ನು ಮುಚ್ಚಿದ ಕೋವಿಡ್ ಕೇಂದ್ರಗಳನ್ನು ತೆರಯಲಾಗುತ್ತಿದೆ. ಜೊತೆಗೆ ಕೋವಿಡ್ ತಪಾಸಣೆಗೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ರೂ ನಮ್ಮ ಜಾಗ್ರತೆಯಲ್ಲಿ ನಾವುಗಳು ಇರದಿದ್ರೆ ,ಎಂಜಾಯ್ ಮಾಡಲು ಹೋದವರು ಕೊನೆಗೆ ಸಂಕಟ ಪಡುವ ಸ್ಥಿತಿ ಎದುರಾಗದಂತೆ ಎಚ್ಚರವಹಿಸಬೇಕಷ್ಟೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Fri, 22 December 23

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ