ಬೆಂಗಳೂರು: ಹೆಸರಾಂತ ಕಂಪನಿಗೆ 17 ಕೋಟಿ ವಂಚನೆ, ಅಕೌಂಟೆಂಟ್ ಸೇರಿ ನಾಲ್ವರ ಬಂಧನ

| Updated By: ಆಯೇಷಾ ಬಾನು

Updated on: Sep 12, 2024 | 3:06 PM

ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್​ ಕಂಪನಿಗೆ ಸುಮಾರು 17 ಕೋಟಿ ರೂ ವಂಚನೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಉಂಡ ಮನೆಗೆ ದ್ರೋಹ ಬಗೆದ ಅಕೌಂಟೆಂಟ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ಹರಿಕೃಷ್ಣರೆಡ್ಡಿಯ ಲೇಡಿಸ್ ಬಾರ್ ಹುಚ್ಚು ಬಯಲಾಗಿದೆ.

ಬೆಂಗಳೂರು: ಹೆಸರಾಂತ ಕಂಪನಿಗೆ 17 ಕೋಟಿ ವಂಚನೆ, ಅಕೌಂಟೆಂಟ್ ಸೇರಿ ನಾಲ್ವರ ಬಂಧನ
ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ. ಪರಿಹಾರಕ್ಕೆ ಪ್ಲ್ಯಾನ್: ಐವರು ಆರೋಪಿಗಳ ಬಂಧನ
Follow us on

ಬೆಂಗಳೂರು, ಸೆ.12: ಹೆಸರಾಂತ ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್​ ಕಂಪನಿಗೆ ಸುಮಾರು 17 ಕೋಟಿ ರೂ ವಂಚನೆ ಮಾಡಲಾಗಿದೆ. ಆರೋಪಿಗಳು ಕಂಪನಿಯ ಸುಮಾರು 17 ಕೋಟಿ ಹಣವನ್ನ ಬೇರೆ ಅಕೌಂಟ್ ಗೆ ವರ್ಗಾಹಿಸಿಕೊಂಡು ವಂಚನೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಉಂಡ ಮನೆಗೆ ದ್ರೋಹ ಬಗೆದ ಅಕೌಂಟೆಂಟ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು (CCB Police) ಹರಿಕೃಷ್ಣರೆಡ್ಡಿ, ಕರುಣಾನಿಧಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ವಂಚನೆ ಸಂಬಂಧ ಬೆಂಗಳೂರು ಸೈಬರ್ ಪೊಲೀಸ್ ಠಾಣೆಗೆ ಕಂಪನಿ ಮಾಲೀಕ ಮೆಥುಕು ಶ್ರೀನಿವಾಸ್ ಅವರು ದೂರು ದಾಖಲಿಸಿದ್ದು ಆರೋಪಿಗಳನ್ನ ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿ ಹರಿಕೃಷ್ಣರೆಡ್ಡಿಯ ಲೇಡಿಸ್ ಬಾರ್ ಹುಚ್ಚು ಬಯಲಾಗಿದೆ. ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಹಣವನ್ನ ಹರಿಕೃಷ್ಣ ರೆಡ್ಡಿ ಲೇಡಿಸ್ ಬಾರ್ ಮಾಲೀಕರಿಗೆ ಕಳುಹಿಸಿದ್ದ. ಸುಮಾರು 190 ಪಬ್ ಮಾಲೀಕರು ಹಾಗೂ ಮ್ಯಾನೇಜರ್​ಗಳಿಗೆ ಹರಿಕೃಷ್ಣರೆಡ್ಡಿ ಹಣ ಕಳುಹಿಸಿದ್ದ. ಬೆಳಗ್ಗೆ ಹಣ ಹಾಕಿ ರಾತ್ರಿ ಪಬ್ ಬಾರ್ ನಲ್ಲಿ ಎಂಜಾಯ್ ಮಾಡ್ತಿದ್ದ. ನಾಲ್ಕು ವರ್ಷಗಳಿಂದ ಇದೇ ರೀತಿ ಕಂಪನಿಗೆ ಯಾಮಾರಿಸಿದ್ದ. ಗೋವಾ ಮತ್ತು ಬಾಂಬೆ ಮೂಲದ ಪಬ್​ಗಳಿಗೆ ಆರೋಪಿ ಹರಿಕೃಷ್ಣರೆಡ್ಡಿ ಹಣ ಸುರಿದಿದ್ದಾನೆ. ಸದ್ಯ ಬಂಧಿತ ಆರೋಪಿಯಿಂದ 3 ಕೋಟಿ ಬೆಲೆಯ ಚಿನ್ನಾಭರಣ ನಗದು ಹಾಗೂ ಎರಡು ಮನೆ ಪತ್ರಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ನಾಗಮಂಗಲ ಗಲಭೆ: ಪರಮೇಶ್ವರ್ ಹೇಳಿಕೆಯಿಂದ ಕೆರಳಿದ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

101 ಲ್ಯಾಪ್​ಟಾಪ್​ ಕದ್ದೊಯ್ದು ದುಷ್ಕರ್ಮಿಗಳು

ಕಾರ್ಮಿಕ ಸಚಿವ ಸಂತೋಷ್ ಲಾಡ್ ತವರಿನಲ್ಲೇ ಖದೀಮರ ಕೈಚಳಕ ಪ್ರದರ್ಶಿಸಿದ್ದಾರೆ. ಹುಬ್ಬಳ್ಳಿಯ ಚೈತನ್ಯನಗರದ ಕಾರ್ಮಿಕ ಭವನದ ಕಚೇರಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ ಲ್ಯಾಪ್​ಟಾಪ್ ಕಳವು ಮಾಡಿದ್ದಾರೆ. ಪ್ರತಿಷ್ಠಿತ ಕಂಪನಿಯ 101 ಲ್ಯಾಪ್​ಟಾಪ್​ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾದ ವೈರ್ ಕತ್ತರಿಸಿ ಡಿವಿಆರ್, ಹಾರ್ಡ್​ಡಿಸ್ಕ್ ಸಹ ಕಳ್ಳತನ ಮಾಡಿದ್ದಾರೆ.

ನಾಲ್ವರು GST ಅಧಿಕಾರಿಗಳ ಬಂಧನ

ಕೇಸ್ ಮುಚ್ಚಿ ಹಾಕಲು ಉದ್ಯಮಿಯಿಂದ 1.5 ಕೋಟಿ ಪಡೆದಿದ್ದ ಕೇಂದ್ರದ ನಾಲ್ವರು ಜಿಎಸ್​ಟಿ ಅಧಿಕಾರಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಣ ಪಡೆದಿದ್ದ ಬಗ್ಗೆ ಉದ್ಯಮಿಯೊಬ್ರು ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ರು. ಕೇಸ್ ವರ್ಗಾವಣೆಯಾದ ಬೆನ್ನಲ್ಲೇ ಅಲರ್ಟ್ ಆದ ಸಿಸಿಬಿ ಅಧಿಕಾರಿಗಳು ನಾಲ್ವರು ಜಿಎಸ್​ಟಿ ಅಧಿಕಾರಿಗಳನ್ನ ಬಂಧಿಸಿದ್ದಾರೆ. ಬಂಧಿತ ನಾಲ್ವರು ಅಧಿಕಾರಿಗಳನ್ನ ಕೋರ್ಟ್‌ 13 ದಿನ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:05 pm, Thu, 12 September 24