ಬೆಂಗಳೂರಿನಲ್ಲಿ ಹರಿಯಾಣ ಮೂಲದ ನಕ್ಸಲ್ ಬಂಧನ ಕೇಸ್​: ಅನಿರುದ್ಧ ರಾಜನ್​ ಪ್ರೇಯಸಿಗೆ ಸಿಸಿಬಿ ನೋಟಿಸ್​​

ನಕ್ಸಲ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಹರಿಯಾಣ ಮೂಲದ ಅನಿರುದ್ಧ ರಾಜನ್ ಮೂರ್ನಾಲ್ಕು ದಿನದ ಹಿಂದೆ ತನ್ನ ಗೆಳತಿ ನೋಡಲು ಬೆಂಗಳೂರಿಗೆ ಬಂದಿದ್ದಾಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಆತನ ಪ್ರೇಯಸಿಗೆ ಸಿಸಿಬಿ ನೋಟಿಸ್​ ನೀಡಿದೆ. ಆ ಮೂಲಕ ರಾಜನ್ ನಕ್ಸಲ್ ಅನ್ನೋದು ಗೊತ್ತಿರಲಿಲ್ವಾ, ಯಾವಾಗಿನಿಂದ ಪರಿಚಯ, ಏನು ಕೆಲಸ ಮಾಡ್ತಿದ್ದ ಎಂಬ ಮಾಹಿತಿ ತಿಳಿದುಕೊಳ್ಳಲು ಮುಂದಾಗಿದೆ.

ಬೆಂಗಳೂರಿನಲ್ಲಿ ಹರಿಯಾಣ ಮೂಲದ ನಕ್ಸಲ್ ಬಂಧನ ಕೇಸ್​: ಅನಿರುದ್ಧ ರಾಜನ್​ ಪ್ರೇಯಸಿಗೆ ಸಿಸಿಬಿ ನೋಟಿಸ್​​
ಬೆಂಗಳೂರಿನಲ್ಲಿ ಹರಿಯಾಣ ಮೂಲದ ನಕ್ಸಲ್ ಬಂಧನ ಕೇಸ್​: ಅನಿರುದ್ಧ ರಾಜನ್​ ಪ್ರೇಯಸಿಗೆ ಸಿಸಿಬಿ ನೋಟಿಸ್​​
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2024 | 4:42 PM

ಬೆಂಗಳೂರು, ಸೆಪ್ಟೆಂಬರ್​​ 12: ಹರಿಯಾಣ ಮೂಲದ ನಕ್ಸಲ್ (Naxal) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ  ಬಂಧಿತ ನಕ್ಸಲ್ ಅನಿರುದ್ಧ ರಾಜನ್​ನ ಪ್ರೇಯಸಿಗೆ ಸಿಸಿಬಿ ನೋಟಿಸ್ ನೀಡಿದೆ. ಆ ಮೂಲಕ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದೆ. ಪ್ರೇಯಸಿ ನೋಡಲು ಬಂದಾಗ ಆರೋಪಿಯನ್ನು ಸಿಸಿಬಿ ತಂಡ ಬಂಧಿಸಿತ್ತು.  ಅನಿರುದ್ಧ​ ರಾಜನ್ ನಕ್ಸಲ್ ಅಂತಾ ಗೊತ್ತಿದ್ರೂ ಪ್ರೀತಿ ಮಾಡುತ್ತಿದ್ದಳು. ಆತ ನಕ್ಸಲ್ ಅನ್ನೋದು ಗೊತ್ತಿರಲಿಲ್ವಾ, ಯಾವಾಗಿನಿಂದ ಪರಿಚಯ, ಏನು ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಕೊಳ್ಳಲು ಸಿಸಿಬಿ ಮುಂದಾಗಿದೆ.

ರಾಜನ್ ಬಳಿ 2 ಪ್ರೇಮಪತ್ರ, ಮೊಬೈಲ್​ನಲ್ಲಿ ಲವ್ ಚಾಟ್​ಗಳು ಪತ್ತೆ ಆಗಿವೆ. ಅನಿರುದ್ಧ್ ಸಿಎ ಪರೀಕ್ಷೆಯಲ್ಲಿ ಫೇಲಾಗಿದ್ದು, ನಕ್ಸಲ್ ಸಂಘಟನೆಗೆ ಹಣ ಕ್ರೋಡೀಕರಣ ಮಾಡುತ್ತಿದ್ದ. ದೇಣಿಗೆ ಸಂಗ್ರಹಿಸಿ ನಕ್ಸಲ್ ಸಂಘಟನೆಗಳಿಗೆ ಹಣ ಹಂಚುತ್ತಿದ್ದ. ಸದ್ಯ ಅನಿರುದ್ಧ ರಾಜನ್​ನನ್ನು ವಶಕ್ಕೆ ಪಡೆದು ಸಿಸಿಬಿಯಿಂದ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್​​ ಅರೆಸ್ಟ್​

35 ವರ್ಷದ ಮೂಲತಃ ತಮಿಳುನಾಡಿನವನಾದ ಅನಿರುದ್ಧ ಅನೇಕ ವರ್ಷಗಳಿಂದ ಹರಿಯಾಣದಲ್ಲಿದ್ದ. ಆದರೆ ನಿಷೇಧಿತ ಸಿಪಿಐ(ಮವೋವಾದಿ) ನಕ್ಸಲ್ ಸಂಘಟನೆ ಜೊತೆ ಸಕ್ರಿಯನಾಗಿದ್ದ ಅನಿರುದ್ಧ ಭೂಗತವಾಗಿದ್ಕೊಂಡೆ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದ. ಇಂತ ನಕ್ಸಲ್ ಅಸಾಮಿ ಇತ್ತೀಗೆಚೆ ಬೆಂಗಳೂರಿನ ಸಿಸಿಬಿಯ ಭಯೋತ್ಪಾದನ ನಿಗ್ರಹ ದಳದ ಬಲೆಗೆ ಬಿದಿದ್ದ.

ಕಳೆದ 4-5 ವರ್ಷಗಳಿಂದ ಉತ್ತರ ಭಾರತದ ಕಡೆ ಸಕ್ರಿಯವಾಗಿರುವ ನಕ್ಸಲ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಅನಿರುದ್ಧ ರಾಜನ್ ಕೆಲ ದಿನದ ಹಿಂದೆ ತನ್ನ ಗೆಳತಿ ನೋಡಲು ಬೆಂಗಳೂರಿಗೆ ಬಂದಿದ್ದ. ಇದಕ್ಕಾಗಿ ಇಂದಿರಾನಗರದಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದ ಅನಿರುದ್ಧ ಅಂದು ಬೆಳಗ್ಗೆ ತಮಿಳುನಾಡಿಗೆ ಹೋಗಲು ಮೆಜೆಸ್ಟಿಕ್ ಬಳಿಯ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಆದರೆ ಈತನ ಬಗ್ಗೆ ಮಾಹಿತಿ ತಿಳಿದ ಎಟಿಎಸ್ ಟೀಂ ಬಸ್ ನಿಲ್ದಾಣದಲ್ಲೇ ಆತನನ್ನ ಬಂಧಿಸಿತ್ತು.

ಇದನ್ನೂ ಓದಿ: ಬೆಂಗಳೂರು: ಹೆಸರಾಂತ ಕಂಪನಿಗೆ 17 ಕೋಟಿ ವಂಚನೆ, ಅಕೌಂಟೆಂಟ್ ಸೇರಿ ನಾಲ್ವರ ಬಂಧನ

ಇನ್ನು ವಿಚಾರಣೆ ವೇಳೆ ಅನಿರುದ್ಧ ಬಳಿ ನಕಲಿ ಆಧಾರ್ ಕಾರ್ಡ್, 2 ಪೆನ್ ಡ್ರೈವ್, ಟ್ಯಾಬ್ ಮತ್ತು ಸಂಘಟನೆಯ ಲೆಟರ್​ಗಳು ಪತ್ತೆಯಾಗಿವೆ. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿರುದ್ಧನನ್ನ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ