ಬೆಂಗಳೂರು: ನೈಸ್​ ರಸ್ತೆ ​ಬಳಿಯ ಪೊದೆಯಲ್ಲಿ 2000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟ್​ ಪತ್ತೆ

|

Updated on: Jul 26, 2023 | 1:51 PM

ದೇಶದಲ್ಲಿ ಎರಡು ಸಾವಿರ ಮುಖಬೆಲೆಯ ಪಿಂಕ್​ ನೋಟುಗಳು ಬ್ಯಾನ್​ ಆದ ಬೆನ್ನಲ್ಲೇ ನಗರದ ಕನಕಪುರ ರಸ್ತೆಯಲ್ಲಿ ಎರಡು ಸಾವಿರ ಮುಖಬೆಲೆಯ 10 ಕೋಟಿ ರೂ. ನಕಲಿ ನೋಟುಗಳು ಪತ್ತೆಯಾಗಿವೆ.

ಬೆಂಗಳೂರು: ನೈಸ್​ ರಸ್ತೆ ​ಬಳಿಯ ಪೊದೆಯಲ್ಲಿ 2000 ಮುಖಬೆಲೆಯ ಕಂತೆ ಕಂತೆ ನಕಲಿ ನೋಟ್​ ಪತ್ತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ಜು.26: ದೇಶದಲ್ಲಿ ಎರಡು ಸಾವಿರ ಮುಖಬೆಲೆಯ (2000 Rs Note) ಪಿಂಕ್​ ನೋಟುಗಳು ಬ್ಯಾನ್​ ಆದ ಬೆನ್ನಲ್ಲೇ ನಗರದ ಕನಕಪುರ ರಸ್ತೆಯಲ್ಲಿ ಎರಡು ಸಾವಿರ ಮುಖಬೆಲೆಯ 10 ಕೋಟಿ ರೂ. ನಕಲಿ ನೋಟುಗಳು (Fake Note) ಪತ್ತೆಯಾಗಿವೆ. ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ಕಂತೆ ಕಂತೆ ನಕಲಿನೋಟುಗಳು ಸಿಕ್ಕಿದ್ದು, ನಕಲಿ ನೋಟುಗಳಿದ್ದ ಬ್ಯಾಗ್​​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಕನಕಪುರ ರಸ್ತೆಗೆ ಹೊಂದುಕೊಂಡಿರುವ ನೈಸ್​ ರಸ್ತೆ ಬಳಿಯ ಪೊದೆಯಲ್ಲಿ ಸೂಟ್​ಕೇಸ್​​ನಲ್ಲಿ ಜೆರಾಕ್ಸ್​​ ನೋಟುಗಳು ಪತ್ತೆಯಾಗಿವೆ. ಇದನ್ನು ಕಂಡ ಸ್ಥಳೀಯರು ದಂಗಾಗಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಜೆರಾಕ್ಸ್​ ಮಾಡಿಸಿದ ನಕಲಿ ನೋಟುಗಳು ಎಂದು ತಿಳಿದಿದೆ. ಸದ್ಯ ಪೊಲೀಸರು ಜೆರಾಕ್ಸ್​​ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಜೆರಾಕ್ಸ್​ ನೋಟುಗಳು ಅಲ್ಲಿಗೆ ಹೇಗೆ ಬಂದವು? ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: 2,000 ರೂ ನೋಟುಗಳು ಇನ್ನೂ ಇವೆಯೇ? ಸೆಪ್ಟಂಬರ್ 30ರ ಡೆಡ್​ಲೈನ್ ವಿಸ್ತರಣೆ ಆಗೊಲ್ಲ; ಬೇಗ ಮರಳಿಸಿಬಿಡಿ

2,000 ರೂ ನೋಟುಗಳನ್ನು ಮೇ 19ರಂದು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪ್ರಕಟಿಸಲಾಗಿತ್ತು. ಅದಕ್ಕಿಂತಲೂ ಮುಂಚಿನಿಂದಲೇ ಸರ್ಕಾರ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆರಂಭಿಸಿತ್ತು ಎನ್ನುತ್ತವೆ ವರದಿಗಳು. ಎಟಿಎಂಗಳಲ್ಲಿ ಬಹಳ ತಿಂಗಳುಗಳಿಂದ 2,000 ರೂ ಮುಖಬೆಲೆಯ ನೋಟುಗಳು ಬರುತ್ತಿಲ್ಲ. ಆರ್​ಬಿಐ ಕೂಡ 2,000 ರೂ ನೋಟುಗಳ ಮುದ್ರಣ ನಿಲ್ಲಿಸಿತ್ತು. ಬ್ಯಾಂಕುಗಳೂ ಕೂಡ 2,000 ರೂ. ನೋಟುಗಳ ವಿತರಣೆ ನಿಲ್ಲಿಸಿದ್ದವೆನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ