ಕಾರು ಮನೆಯಲ್ಲಿದ್ದರೂ ಫಾಸ್ಟ್​​ಟ್ಯಾಗ್​ನ ಹಣ​ ಕಡಿತ: ಕಕ್ಕಾಬಿಕ್ಕಿಯಾದ ಮಾಲೀಕ

|

Updated on: Dec 27, 2023 | 11:55 AM

ಟೋಲ್​ ಫ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್​ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್​​ಟ್ಯಾಗ್​ ಸೌಲಭ್ಯ ಜಾರಿಗೆ ತಂದಿದೆ. ಆದರೆ ಈ ಫಾಸ್ಟ್​​ಟ್ಯಾಗ್​​ನಿಂದ ಬೆಂಗಳೂರಿನ ವಾಹನ ಮಾಲಿಕರು ಹಣ ಕಳೆದುಕೊಂಡಿದ್ದಾರೆ. ಹೌದು ಸುಮಾರು ಒಂದು ತಿಂಗಳ ಹಿಂದೆ, ಜೆನಿಲ್ ಜೈನ್ ಎಂಬುವರು ಮನೆಯಲ್ಲಿದ್ದಾಗ ಅವರ ಮೊಬೈಲ್​ಗೆ ಬೆಂಗಳೂರು-ಮಂಗಳೂರು ಹೆದ್ದಾರಿಯ ಟೋಲ್ ಫ್ಲಾಜಾದಲ್ಲಿ 60 ರೂಪಾಯಿ ಸಂಗ್ರಹಿಸಲಾಗಿದೆ ಮೆಸೆಜ್​ ಬಂದಿತ್ತು. ಮುಂದೇನಾಯ್ತು ಈ ಸ್ಟೋರಿ ಓದಿ

ಕಾರು ಮನೆಯಲ್ಲಿದ್ದರೂ ಫಾಸ್ಟ್​​ಟ್ಯಾಗ್​ನ ಹಣ​ ಕಡಿತ: ಕಕ್ಕಾಬಿಕ್ಕಿಯಾದ ಮಾಲೀಕ
ಫಾಸ್ಟ್​​ಟ್ಯಾಗ್
Follow us on

ಬೆಂಗಳೂರು, ಡಿಸೆಂಬರ್​ 27: ಟೋಲ್​ ಫ್ಲಾಜಾಗಳಲ್ಲಿ (Toll Plaza) ಉಂಟಾಗುವ ಟ್ರಾಫಿಕ್​ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್​​ಟ್ಯಾಗ್ (Fastag)​ ಸೌಲಭ್ಯ ಜಾರಿಗೆ ತಂದಿದೆ. ಈ ಫಾಸ್ಟ್​​ಟ್ಯಾಗ್​​ನಿಂದ ಬೆಂಗಳೂರಿನ ವಾಹನ ಮಾಲಿಕರು ಹಣ ಕಳೆದುಕೊಂಡಿದ್ದಾರೆ. ಹೌದು ಸುಮಾರು ಒಂದು ತಿಂಗಳ ಹಿಂದೆ, ಜೆನಿಲ್ ಜೈನ್ ಎಂಬುವರು ಮನೆಯಲ್ಲಿದ್ದಾಗ ಅವರ ಮೊಬೈಲ್​ಗೆ ಬೆಂಗಳೂರು-ಮಂಗಳೂರು ಹೆದ್ದಾರಿಯ ಟೋಲ್ ಫ್ಲಾಜಾದಲ್ಲಿ 60 ರೂಪಾಯಿ ಸಂಗ್ರಹಿಸಲಾಗಿದೆ ಮೆಸೆಜ್​ ಬಂದಿತ್ತು.

ಇದರಿಂದ ಗಾಭರಿಗೊಂಡ ಜೆನಿಲ್​ ಜೈನ್,​ ತಮ್ಮ ಕಾರು ಅಥವಾ ಫಾಸ್ಟ್‌ಟ್ಯಾಗ್ ಕಳ್ಳತನವಾಗಿದಯೇ ಎಂದು ನೋಡಲು ಪಾರ್ಕಿಂಗ್ ಪ್ರದೇಶಕ್ಕೆ ಹೋದರು. ಆದರೆ ಕಾರು ಮತ್ತು ಫಾಸ್ಟ್​ಟ್ಯಾಗ್​ ಎರಡೂ ಅಲ್ಲಿಯೇ ಇದ್ದವು ಎಂದು ಟೆಕ್ಕಿ ಜೆನಿಲ್ ಜೈನ್​​ ಹೇಳಿದರು.

“ನಾವು ಈ ಟೋಲ್ ಫ್ಲಾಜಾದಿಂದ ಸುಮಾರು 50 ಕಿಮೀ ದೂರದಲ್ಲಿರುವ ಹರಳೂರು-ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತೇವೆ. ಈ ಟೋಲ್ ಗೇಟ್​ನಲ್ಲಿ ಕೊನೆಯ ಬಾರಿ ಪಾಸ್​​ ಆಗಿದ್ದರ ಬಗ್ಗೆ ನನಗೆ ನೆನಪಿಲ್ಲ. ನನ್ನ ಫಾಸ್ಟ್​ಟ್ಯಾಗ್​​ ಖಾತೆ ಪೇಟಿಎಂ ಪಾವತಿ ಬ್ಯಾಂಕ್‌ಗೆ ಲಿಂಕ್ ಮಾಡಲಾಗಿದೆ” ಎಂದು ಜೆನಿಲ್​​ ಜೈನ್​ ತಿಳಿಸಿದರು.

ನಾನು ಈ ಬಗ್ಗೆ ದೂರು ನೀಡಿದೆ. ಒಂದು ತಿಂಗಳ ಬಳಿಕ ಹಣ ಮರುಪಾವತಿ ಮಾಡಿದರು ಎಂದು ಜೆನಿಲ್​ ಜೈನ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು ಮೈಸೂರು ಹೆದ್ದಾರಿ ವಿರುದ್ಧ ಮತ್ತೊಂದು ವಿವಾದ: ಟೋಲ್ ರಸ್ತೆಯಲ್ಲಿ ಓಡಾಡದಿದ್ರೂ ಶುಲ್ಕ ಕಡಿತ, ಸವಾರರ ಆಕ್ರೋಶ

ಅಲೆನ್ ಜೇಮ್ಸ್ ಎಂಬುವರು ಕೂಡ ಇದೇ ರೀತಿಯಾಗಿ 30 ರೂಪಾಯಿ ಕಳೆದುಕೊಂಡಿದ್ದಾರೆ. ಮತ್ತು ಅದೇ ಟೋಲ್ ಗೇಟ್‌ನಲ್ಲಿ. ಫಾಸ್ಟ್​​ಟ್ಯಾಗ್​ ಮೂಲಕ ಹಣ ಕಟ್​ ಆದ ಬಗ್ಗೆ ಅಲೆನ್​ ಜೇಮ್ಸ್​ ಅವರ ಮೊಬೈಲ್​ ನಂಬರ್​ಗೆ ಸೆಪ್ಟೆಂಬರ್ 15 ರಂದು ಸಂದೇಶ ಬಂದಿದೆ. ಈ ಸಮಯದಲ್ಲಿ ಅಲೆನ್​ ಜೇಮ್ಸ್​ ತಮ್ಮ ಕಚೇರಿಯಲ್ಲಿದ್ದರು.

ಅಲೆನ್​ ಜೇಮ್ಸ್​ ಅವರು ತಮ್ಮ ವಾಹನವನ್ನು ಅವರ ಸಹೋದರರಿಗೆ ನೀಡಿದ್ದರು. ಹಣ ಕಟ್​​​ ಆಗುತ್ತಿದ್ದಂತೆ ಅವರ ಸಹೋದನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ. “ನೀನು ಬೆಂಗಳೂರು-ಮಂಗಳೂರು ಹೆದ್ದಾರಿ ಟೋಲ್​ನಲ್ಲಿ ಹಾದು ಹೋಗಿದ್ದಿಯಾ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಲೆನ್​ ಜೇಮ್ಸ್​ ಸಹೋದರ “ಇಲ್ಲ, ನಾನು ಮನೆಯಲ್ಲೇ ಇದ್ದೇನೆ” ಎಂದು ಹೇಳಿದ್ದಾರೆ. ಆಗ ಅಲೆನ್​ ಜೇಮ್ಸ್​ ಅವರಿಗೆ ಕಾರು ಮನೆಯಲ್ಲೇ ಇರುವುದು ಖಚಿತವಾಗಿದೆ.

ಯಾರೋ ನನ್ನ ಫಾಸ್ಟ್ಯಾಗ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆತಂಕಗೊಂಡ ಅಲೆನ್ ಕೆಲವು ಗಂಟೆಗಳ ಕಾಲ ಮತ್ತೊಂದು ಸಂದೇಶಕ್ಕಾಗಿ ಕಾಯುತ್ತಿದ್ದರು. ವ್ಯಕ್ತಿಯು ಮತ್ತೊಂದು ಟೋಲ್ ಗೇಟ್ ಅನ್ನು ದಾಟಬಹುದು ಮತ್ತು ನನ್ನ ಫಾಸ್ಟ್ಯಾಗ್ ಅನ್ನು ಮತ್ತೆ ಬಳಸಬಹುದು ಎಂದು ಅಲೆನ್​ ಜೇಮ್ಸ್​ ಭಾವಿಸಿದ್ದರು. ಆದರೆ ಅದು ಹಾಗಾಗಲಿಲ್ಲ. ನಂತರ ಅಲೆನ್​ ಜೇಮ್ಸ್​​ ಅಕೌಂಟ್​ನಿಂದ ಕಟ್​ ಆಗಿದ್ದ ಸಣ್ಣ ಮೊತ್ತವೆಂದು ಸುಮ್ಮನಾದರು.
ಮತ್ತೊಂದು ಪ್ರಕರಣದಲ್ಲಿ ಇದೇ ರೀತಿಯಾಗಿದೆ. ರಾಖಿ ಅನಿಲ್ ಎಂಬುವರ ಪತಿ ಕಚೇರಿಯಲ್ಲಿದ್ದಾಗ ಫಾಸ್ಟ್​ಟ್ಯಾಗ್​ ಮೂಲಕ ಹಣ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಟೋಲ್‌ನ ಉಸ್ತುವಾರಿ ಅಜಯ್‌ ಸಿಂಗ್‌ ಮಾತನಾಡಿ, ಅವ್ಯವಹಾರಗಳಿರಬಹುದು ಆದರೆ ಅವು ಅಪರೂಪ. “ಸಾಫ್ಟ್‌ವೇರ್ ಸಮಸ್ಯೆಗಳು” ಅಥವಾ ಸ್ಕ್ಯಾನರ್ ವಾಹನದ ನಂಬರ್ ಅನ್ನು ​ ಸರಿಯಾಗಿ ಸ್ಕ್ಯಾನ್​ ಅನ್ನು ಸರಿಯಾಗಿ ಮಾಡದೆ ಇರಬಹುದು. “ನಾವು ಹೊಸ ಸಾಫ್ಟ್‌ವೇರ್ ಅನ್ನು ಅಳವಡಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಮಾತನಾಡಿ, ಟೋಲ್ ನಿರ್ವಹಣಾ ವ್ಯವಸ್ಥೆ (ಟಿಎಂಎಸ್) ಸಾಫ್ಟ್‌ವೇರ್‌ನಲ್ಲಿನ ದೋಷಗಳು ಸಮಸ್ಯೆಗೆ ಕಾರಣವಾಗಬಹುದು. ಇದನ್ನು ಸೆಪ್ಟೆಂಬರ್‌ನಲ್ಲಿ ನವೀಕರಿಸಲಾಯಿತು. ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ TMS ಅನ್ನು ನವೀಕರಿಸಲಾಗುತ್ತದೆ ಆದರೆ ಇತ್ತೀಚಿನ ಆವೃತ್ತಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ವರದಿ ಮಾಡುವುದು ಹೇಗೆ?

ಜನರು ಟೋಲ್-ಫ್ರೀ ಸಹಾಯವಾಣಿ 1033 ಗೆ ಕರೆ ಮಾಡಬಹುದು ಅಥವಾ ಟೋಲ್ ಮ್ಯಾನೇಜರ್ ಅನ್ನು ಸಂಪರ್ಕಿಸಬಹುದು, ಅವರ ಸಂಖ್ಯೆಯನ್ನು ಟೋಲ್ ಪ್ಲಾಜಾದಲ್ಲಿ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ