Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಪಾರ್ಟಿ ಬಿಟ್ಟು ಹೊಸ ವರ್ಷವನ್ನು ಸ್ವಾಗತಿಸುವುದು ಹೇಗೆ? ಇಲ್ಲಿದೆ ಟಿಪ್ಸ್​

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದು ಎಣ್ಣೆ ಪಾರ್ಟಿ ಬಿಟ್ಟು ವಿಭಿನ್ನವಾಗಿ ಹೊಸ ವರ್ಷವನ್ನು ಸ್ವಾಗತಿಸಲು ಇಚ್ಚಿಸಿದರೇ ಇಲ್ಲಿದೆ ಕೆಲವು ಟಿಪ್ಸ್. ಇವು ನಿಮಗೆ ಉಪಯುಕ್ತವಾಗಿವೆ.

ಎಣ್ಣೆ ಪಾರ್ಟಿ ಬಿಟ್ಟು ಹೊಸ ವರ್ಷವನ್ನು ಸ್ವಾಗತಿಸುವುದು ಹೇಗೆ? ಇಲ್ಲಿದೆ ಟಿಪ್ಸ್​
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Dec 27, 2023 | 1:29 PM

ಬೆಂಗಳೂರು, ಡಿಸೆಂಬರ್​ 27: ಇನ್ನು ಮೂರು ದಿನಗಳಲ್ಲಿ ಹೊಸ ವರ್ಷ (New Year) ಬಂದೇ ಬಿಡುತ್ತದೆ. 2024 ಅನ್ನು ಸ್ವಾಗತಿಸಲು ಜಗತ್ತು ತುದಿಗಾಲಿನ ಮೇಲೆ ನಿಂತಿದೆ. ಬಾರ್​, ಪಬ್, ಹೊಟೇಲ್​ ಮತ್ತು ರೆಸ್ಟೋರೆಂಟ್​​ಗಳಲ್ಲಿ ಪಾರ್ಟಿಗಳು (Party) ಜೋರಾಗಿ ನಡೆಯುತ್ತವೆ. ಕೆಲವರು ಈ ಪಾರ್ಟಿಗಳಲ್ಲಿ ತೊಡಗಿಸಿಕೊಂಡರೇ ಇನ್ನು ಕೆಲವರು ಈ ಪಾರ್ಟಿಗಳನ್ನು ಇಷ್ಟಪಡುವುದಿಲ್ಲ. ಇವರು ವಿಭಿನ್ನವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಚಿಂತಿಸುತ್ತಿರುತ್ತಾರೆ. ಇವರಿಗೆ ಇಲ್ಲಿದೆ ಕೆಲವು ಟಿಪ್ಸ್​​

ಸರ್ಕಸ್‌ಗೆ ಹೋಗಿ

ಬೆಂಗಳೂರಿಗೆ ಎರಡು ಜನಪ್ರಿಯ ಸರ್ಕಸ್ ತಂಡಗಳು ಕಾಲಿಟ್ಟಿವೆ. ರಾಂಬೊ ಸರ್ಕಸ್ ಮತ್ತು ಜೆಮಿನಿ ಸರ್ಕಸ್. ಪುಣೆ ಮೂಲದ ರಾಂಬೊ ಸರ್ಕಸ್ ಜನವರಿ 2 ರವರೆಗೆ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ನಡೆಯುತ್ತದೆ. ಪ್ರತಿದಿನ ಮೂರು ಪ್ರದರ್ಶನ ನಡೆಯುತ್ತವೆ. ಮಧ್ಯಾಹ್ನ 1.30, ಸಾಯಂಕಾಲ 4.30 ಮತ್ತು 7.30ಕ್ಕೆ. ಪ್ರತಿ ಪ್ರದರ್ಶನವು ಸುಮಾರು 80 ನಿಮಿಷಗಳ ಕಾಲ ಇರುತ್ತದೆ. ಟಿಕೆಟ್‌ ದರ 500 ರೂ. ರಿಂದ ಪ್ರಾರಂಭವಾಗುತ್ತದೆ. ಟಿಕೆಟ್​​ ಆನ್‌ಲೈನ್‌ನಲ್ಲಿ ಲಭ್ಯವಿದೆ.

50 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಲಾವಿದರೊಂದಿಗೆ, ಜೆಮಿನಿ ಸರ್ಕಸ್ ಜನವರಿ ಅಂತ್ಯದವರೆಗೆ ನಗರದಲ್ಲಿ ಪ್ರದರ್ಶನಗೊಳ್ಳುತ್ತದೆ. ಯಲಹಂಕದ ಅಲ್ಲಸಂದ್ರ ಮೇಲ್ಸೇತುವೆ ಬಳಿ ಪ್ರತಿದಿನ ಮೂರು ಶೋಗಳನ್ನು ನಡೆಸುತ್ತಿದ್ದಾರೆ. ಟಿಕೆಟ್‌ ದರ 150 ರೂ. ರಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಡ್ರಿಂಕ್ ಆ್ಯಂಡ್​​ ಡ್ರೈವ್ ಪರೀಕ್ಷೆ​: 8 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ

ಫಾರ್ಮ್​​ಹೌಸ್​ನಲ್ಲಿ ವಾಸ್ತವ್ಯ

ಸೋಮಶೆಟ್ಟಿಹಳ್ಳಿಯಲ್ಲಿರುವ ಹಳ್ಳಿಗಾಡಿನ ಫಾರ್ಮ್ ಸ್ಟೇಯಾಗಿರುವ ಲಿಲಾಕ್ ಫಾರ್ಮ್ ಹೊಸ ವರ್ಷ ಮತ್ತು ವಾರಾಂತ್ಯಕ್ಕೆ ಎರಡು ವಿಶೇಷ ಪ್ಯಾಕೇಜ್​ ಅನ್ನು ಪರಿಚಯಿಸಿದೆ. ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಿಂದ ಎರಡು ಗಂಟೆಗಳ ದೂರದಲ್ಲಿರುವ ಸಸ್ಯಾಹಾರಿ ಫಾರ್ಮ್ ಹಲವಾರು ಪ್ರಾಣಿಗಳಿಗೆ ನೆಲೆಯಾಗಿದೆ. ಮಳೆ ನೃತ್ಯ, ನಕ್ಷತ್ರ ವೀಕ್ಷಣೆ ಮತ್ತು ಮಣ್ಣಿನ ವಾಲಿಬಾಲ್‌ನಂತಹ ಚಟುವಟಿಕೆಗಳನ್ನು ಆಯೋಜಿದೆ. ರಾತ್ರಿ ಇಲ್ಲಿ ತಂಗುವರಿಗೆ ಹೊರಾಂಗಣ ಚಲನಚಿತ್ರ ವೀಕ್ಷಣೆ, ಲೈವ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮದ್ಯಪಾನವನ್ನು ನಿಷೇಧಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ Instagram ನಲ್ಲಿ @the.lilac.farm ಗೆ ಭೇಟಿ ನೀಡಿ ಅಥವಾ 89512 67963 ಗೆ ಕರೆ ಮಾಡಿ.

ಹಳೇ ಬೆಂಗಳೂರಿನಲ್ಲಿ ಒಂದು ಸುತ್ತು

ಹಳೆಯ ಬೆಂಗಳೂರಿನಲ್ಲಿ ಒಂದು ಸುತ್ತು ಹಾಕುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಿ. ಮತ್ತು ಹಳೆಯ ಹೊಟೇಲ್​ಗಳಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ಮತ್ತು ಮಸಾಲಾ ದೋಸೆಯನ್ನು ತಿಂದು ಆನಂದಿಸಿ. ನೀವು ಮಲ್ಲೇಶ್ವರಂನಲ್ಲಿದ್ದರೆ, ಕೆಲವು ಜನಪ್ರಿಯ ಹೋಟೆಲ್​ಗಳೆಂದರೇ ಶ್ರೀ ಸಾಗರ್-ಸಿಟಿಆರ್, ವೀಣಾ ಸ್ಟೋರ್ಸ್ ಮತ್ತು ರಾಘವೇಂದ್ರ ಸ್ಟೋರ್ಸ್. ತಾಜಾ ತಿಂಡಿಗಾಗಿ ಬ್ರಾಹ್ಮಣರ ಟಿಫಿನ್ಸ್. ಕಾಫಿಗಾಗಿ ಹೋಟೆಲ್ ದ್ವಾರಕಾ, ವಿದ್ಯಾರ್ಥಿ ಭವನ, ಮತ್ತು ಬೈ 2 ಕಾಫಿ ಇವು ಜಯನಗರ ಮತ್ತು ಬಸವನಗುಡಿಯಲ್ಲಿವೆ.

ನಂದಿ ಬೆಟ್ಟಕ್ಕೆ ವಿದ್ಯುತ್ ರೈಲು

ಹೊಸದಾಗಿ ಪ್ರಾರಂಭಿಸಲಾದ ಎಲೆಕ್ಟ್ರಿಕ್ ರೈಲು ಸೇವೆಯ ಮೂಲಕ ನಂದಿ ಹಿಲ್ಸ್‌ ಪ್ರಯಾಣವನ್ನು ಆನಂದಿಸಿ. ಈ ಉಪಕ್ರಮವು ನೈಋತ್ಯ ರೈಲ್ವೆಯ ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳ ವಿಸ್ತರಣೆಯ ಭಾಗವಾಗಿದೆ. ಕೇವಲ 40 ರೂಪಾಯಿಗಳಲ್ಲಿ ನೀವು ಬೆಂಗಳೂರು ಕಂಟೋನ್ಮೆಂಟ್ ಅಥವಾ ಯಶವಂತಪುರದಿಂದ ರೈಲು ಹತ್ತಬಹುದು. ನಂದಿ ಬೆಟ್ಟಗಳ ಜೊತೆಗೆ, ನೀವು ದೇವನಹಳ್ಳಿ ಕೋಟೆ ಮತ್ತು ಭೋಗನಂದೀಶ್ವರ ದೇವಾಲಯದಂತಹ ಇತರ ಪಾರಂಪರಿಕ ತಾಣಗಳಿಗೆ ಭೇಟಿ ನೀಡಬಹುದು.

ಮೃಗಾಲಯಕ್ಕೆ ಭೇಟಿ

ಶೈಕ್ಷಣಿಕ ಮತ್ತು ಮೋಜಿನ ವಿಹಾರಕ್ಕಾಗಿ ಮಕ್ಕಳೊಂದಿಗೆ ಪೆಟ್ಟಿಂಗ್ ಮೃಗಾಲಯಕ್ಕೆ ಭೇಟಿ ನೀಡಬಹುದು. ನಗರದಲ್ಲಿ ಎರಡು ಜನಪ್ರಿಯ ತಾಣಗಳಿವೆ. ಪ್ರಾಣಿ-ದಿ ಪೆಟ್ ಅಭಯಾರಣ್ಯ, ಮತ್ತು ಕನಕಪುರ ರಸ್ತೆಯ ಸಮೀಪದಲ್ಲಿರುವ ಎನ್​ಚಾಂಟಿಗ್​ ಎಕರ್ಸ್​.

ಖಾಸಗಿ ಚಿತ್ರಮಂದಿರವನ್ನು ಬಾಡಿಗೆಗೆ ಪಡೆಯಿರಿ

ಖಾಸಗಿ ಥಿಯೇಟರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚಲನಚಿತ್ರವನ್ನು ನೋಡಬಹುದು. ಬಿಂಜ್ ಕ್ಲಬ್ ಮತ್ತು ತಿನ್ನೈ ಬಾಡಿಗೆ ಸ್ಥಳಗಳನ್ನು ನೀಡುತ್ತಾರೆ. ಇಲ್ಲಿ ನೀವು ನಿಮ್ಮ ಆಯ್ಕೆಯ ಚಲನಚಿತ್ರಗಳನ್ನು ನೋಡಬಹುದು. 1,150 ರಿಂದ 6,500 ರವರೆಗೆ ಬೆಲೆಯಿದ್ದು, ಬಾಡಿಗೆಗಳನ್ನು 2 ರಿಂದ 10 ಜನರಿಗೆ ಬುಕ್ ಮಾಡಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:48 pm, Wed, 27 December 23

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ