ACB Raid: 20 ವರ್ಷಗಳ ಹಿಂದೆ ಮನೆಮನೆಗೆ ಪೇಪರ್, ಹಾಲು ಹಾಕುತ್ತಿದ್ದ ಬಿಡಿಎ ಮಧ್ಯವರ್ತಿ ಮೋಹನ್ ಮನೆಯಲ್ಲಿ ಇಂದು 4.5 ಕೆಜಿ ಚಿನ್ನ ಪತ್ತೆ!

ದಾಳಿ ವೇಳೆ ಬರೋಬ್ಬರಿ 4.5 ಕೆಜಿ ಚಿನ್ನ ಪತ್ತೆಯಾಗಿದೆ. ಐಷಾರಾಮಿ ಮನೆಯಲ್ಲಿ ಎರಡೂವರೆ ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಮೋಹನ್ ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದೆ.

ACB Raid: 20 ವರ್ಷಗಳ ಹಿಂದೆ ಮನೆಮನೆಗೆ ಪೇಪರ್, ಹಾಲು ಹಾಕುತ್ತಿದ್ದ ಬಿಡಿಎ ಮಧ್ಯವರ್ತಿ ಮೋಹನ್ ಮನೆಯಲ್ಲಿ ಇಂದು 4.5 ಕೆಜಿ ಚಿನ್ನ ಪತ್ತೆ!
ಮೋಹನ್​ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ
Follow us
TV9 Web
| Updated By: sandhya thejappa

Updated on:Mar 22, 2022 | 12:31 PM

ಬೆಂಗಳೂರು: ಬಿಡಿಎ (BDA) ಮಧ್ಯವರ್ತಿ ಮೋಹನ್ ಕುಮಾರ್ ಮನೆ ಮೇಲೆ ಎಸಿಬಿ (ACB) ಅಧಿಕಾರಿಗಳು ಇಂದು (ಮಾರ್ಚ್ 22) ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಮೋಹನ್ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ಹಿನ್ನೆಲೆ ಆರ್.ಟಿ.ನಗರದ ಮನೋರಾಯನಪಾಳ್ಯದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬರೋಬ್ಬರಿ 4.5 ಕೆಜಿ ಚಿನ್ನ ಪತ್ತೆಯಾಗಿದೆ. ಐಷಾರಾಮಿ ಮನೆಯಲ್ಲಿ ಎರಡೂವರೆ ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಮೋಹನ್ ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದೆ.

ಜೊತೆಗೆ ಮೋಹನ್ ಕುಮಾರ್ ಅವರ ಮನೆಯಲ್ಲಿ ಕಂತೆ ಕಂತೆ ಹಣವೂ ಪತ್ತೆಯಾಗಿದೆ. ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ,  ಚಿನ್ನದ ಸರ, ಚಿನ್ನದ ಓಲೆ, ಚಿನ್ನಡ ಡಾಬು ಸಿಕ್ಕಿದೆ. 9 ಜನ ಎಸಿಬಿ ಅಧಿಕಾರಿಗಳ ತಂಡದಿಂದ ಶೋಧಕಾರ್ಯ ಮುಂದುವರಿದಿದೆ. ಎಸಿಬಿ ಡಿವೈಎಸ್​ಪಿ ಪ್ರಕಾಶ್ ರೆಡ್ಡಿ, ಇನ್ಸ್‌ಪೆಕ್ಟರ್ ಮಂಜುನಾಥ್ ಸೇರಿದಂತೆ 9 ಅಧಿಕಾರಿಗಳ ತಂಡದಿಂದ ಶೋಧಕಾರ್ಯ ನಡೆಯುತ್ತಿದೆ.

ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಬೆಂಗಳೂರಿನಲ್ಲಿ ಎಸಿಬಿ ಎಸ್​ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ. ಚಾಮರಾಜಪೇಟೆಯ ಬಿ.ಎನ್.ರಘು, R.T.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್​ನ ಲಕ್ಷ್ಮಣ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ.

ಪೆಪರ್, ಹಾಲು ಹಾಕುತ್ತಿದ್ದ ಮೋಹನ್: ಮೋಹನ್ ಕುಮಾರ್ ದೊಡ್ಡಬಳ್ಳಾಪುರದ ಮಳವಳ್ಳಿಯ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಎಸ್​ಎಸ್​ಎಲ್​ಸಿ ಮುಗಿಸಿದ್ದಾರೆ. ಇವರು ಮೊದಲಿಗೆ ಬೆಂಗಳೂರಿನಲ್ಲಿ ಪೆಪರ್, ಹಾಲು ವಿತರಣೆ ಮಾಡುತ್ತಿದ್ದರಂತೆ. ಬಳಿಕ ಬಿಡಿಎ ಅಧಿಕಾರಿಯ ಒಬ್ಬರಿಗೆ ಚಾಲಕನಾಗಿ ಸೇರಿಕೊಂಡರು. ಅಲ್ಲಿಂದ ಬಿಡಿಎ ಜೊತೆಗೆ ನಂಟು ಶುರುವಾಗಿದೆ. ಇವರಿಗೆ ಎರಡು ಮದುವೆ ಆಗಿದೆ. ಈಗ ಇರುವ ಖುಷಿ ಮನೆ ಮೊದಲ ಹೆಂಡತಿಗಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಮೊದಲನೆಯ ಹೆಂಡತಿ ಜೊತೆ ಡಿವೋರ್ಸ್ ಆಗಿದೆ. ಎರಡು ಹೆಂಡತಿ ಜೊತೆಗೆ ಜೀವನ ಮಾಡುತ್ತಿದ್ದಾರೆ.ಮನೆಯ ಪಕ್ಕದಲ್ಲಿ ಒಂದು ಫುಲ್ ಸೈಟ್ ಕೂಡ ಇದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ

ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸಲು ಭಾರತಕ್ಕೆ ಭಯ: ಜೋ ಬೈಡೆನ್

ಕಲ್ಲಂಗಡಿ ಬೀಜಗಳನ್ನ ಎಸೆಯುವ ಮುನ್ನ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ

Published On - 10:39 am, Tue, 22 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ