5 ಲಕ್ಷ ರೂ. ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದ KSRTC ಬಸ್ ಚಾಲಕ, ಕಂಡಕ್ಟರ್​ ಕಾರ್ಯಕ್ಕೆ ಬೆಂಗಳೂರು ಕಮಿಷನರ್ ಶಹಬ್ಬಾಸ್‌

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2023 | 3:18 PM

ಪ್ರಯಾಣಿಕ 5 ಬ್ಯಾಗ್​ನಲ್ಲಿದ್ದ 5 ಲಕ್ಷ ರೂಪಾಯಿಯನ್ನ ಕದ್ದು ಹೋಗುತ್ತಿದ್ದ ಪಿಕ್ ಆರೋಪಿಯನ್ನ ಕೆ.ಎಸ್.ಆರ್.ಟಿ.ಸಿ(KSRTC) ಚಾಲಕ ಮತ್ತು ನಿರ್ವಾಹಕ ಚೇಸ್ ಮಾಡಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್​ ಅವರು ಬಹುಮಾನ ನೀಡಿ, ಸನ್ಮಾನಿಸಿದ್ದಾರೆ.

5 ಲಕ್ಷ ರೂ. ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದ KSRTC ಬಸ್ ಚಾಲಕ, ಕಂಡಕ್ಟರ್​ ಕಾರ್ಯಕ್ಕೆ ಬೆಂಗಳೂರು ಕಮಿಷನರ್ ಶಹಬ್ಬಾಸ್‌
ಕೆಎಸ್​ಆರ್​ಟಿಸಿ ಸಿಬ್ಬಂದಿ
Follow us on

ಬೆಂಗಳೂರು: ಪ್ರಯಾಣಿಕ 5 ಬ್ಯಾಗ್​ನಲ್ಲಿದ್ದ 5 ಲಕ್ಷ ರೂಪಾಯಿಯನ್ನ ಕದ್ದು ಹೋಗುತ್ತಿದ್ದ ಪಿಕ್ ಆರೋಪಿಯನ್ನ ಕೆ.ಎಸ್.ಆರ್.ಟಿ.ಸಿ(KSRTC) ಚಾಲಕ ಮತ್ತು ನಿರ್ವಾಹಕ ಚೇಸ್ ಮಾಡಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ(Bengaluru Police Commissioner) ದಯಾನಂದ್​ ಅವರು ಬಹುಮಾನ ನೀಡಿ, ಸನ್ಮಾನಿಸಿದ್ದಾರೆ. ಜೂನ್ 14 ರಂದು ಪಾಂಡಿಚೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸ್​ಗೆ ಮೆಜೆಸ್ಟಿಕ್ ಹೋಗಬೇಕೆಂದು ಇಬ್ಬರು ಹತ್ತಿದ್ದಾರೆ. ಆದ್ರೆ, ಎಲೆಕ್ಟ್ರಾನಿಕ್ ಸಿಟಿ ಮದ್ಯದಲ್ಲೇ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಅದಾಗಲೇ ನಿರ್ವಾಹಕರಿಗೆ ಅವರ ಮೇಲೆ ಅನುಮಾನ ಮೂಡಿದೆ. ಅಲ್ಲಿ ಪ್ರಯಾಣಿಕರೊಬ್ಬರು ಇಳಿದು ಹೋಗುತ್ತಿದ್ದಂತೆ ಬ್ಯಾಗ್ ಪರಿಶೀಲಿಸಿದ್ದು, ನಿರ್ವಾಹಕರಿಗೆ ಐದು ಲಕ್ಷ ಕಾಣ್ತಿಲ್ಲ ಎಂದಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಆರೋಪಿಗಳು ಓಡಲು ಪ್ರಾರಂಭಿಸಿದ್ದಾರೆ. ಕೂಡಲೇ ನಿರ್ವಾಹಕ ಚೆಸ್​ ಮಾಡಿ ಇಬ್ಬರಲ್ಲಿ ಓರ್ವನನ್ನ ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಶಹಾ ಅಲ್ಲಾಂ ನಿಂದ ಐದು ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು

ಇನ್ನು ಓಡಿ ಹೊರಟ್ಟಿದ್ದ ಕಳ್ಳನನ್ನ ಚೇಸ್ ಮಾಡಿದ ಬಸ್ ಚಾಲಕ ಸೋಮಪ್ಪ ಮತ್ತು ಕಂಡಕ್ಟರ್ ಮಂಜುನಾಥ್ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಓರ್ವ ಕಳ್ಳ ಎಸ್ಕೇಪ್​ ಆಗಿದ್ದಾನೆ. ಶಾಹಾ ಅಲ್ಲಾಂ ಎಂಬಾತನನ್ನ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಹಾ ಅಲ್ಲಾಂ ನಿಂದ ಐದು ಲಕ್ಷ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕ ,ಕಂಡಕ್ಟರ್​ರವರ ಉತ್ತಮ ಕೆಲಸಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದರಿಂದ ಸನ್ಮಾನ ಮಾಡಲಾಗಿದೆ.

ಇದನ್ನೂ ಓದಿ:Bengaluru News: ಬಿಟ್​ ಕಾಯಿನ್ ಬಹುಕೋಟಿ ಅಕ್ರಮ ವ್ಯವಹಾರ ಪ್ರಕರಣ: ಮರು ತನಿಖೆ ನಡೆಸುವಂತೆ ಸಿಐಡಿಗೆ ಪತ್ರ ಬರೆದ ನಗರ ಪೊಲೀಸ್​ ಕಮಿಷನರ್ ದಯಾನಂದ್

ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ನಗರ ಪೊಲೀಸ್ ಆಯುಕ್ತರಿಂದ ಸನ್ಮಾನ

5 ಲಕ್ಷ ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದು ಶೌರ್ಯ ಮೆರೆದಿದ್ದ ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತವಾಗಿದ್ದು, ಈ ಕುರಿತು ಸಿಬ್ಬಂದಿ ಸಾಹಸ ಮತ್ತು ಶೌರ್ಯಕ್ಕೆ ಮೆಚ್ಚಿ ಪೊಲೀಸ್ ಆಯುಕ್ತ ದಯಾನಂದ್ ಬಸ್​ ಸಿಬ್ಬಂದಿಗೆ ಬೆಂಗಳೂರು ಕಮಿಷನರ್​ಯಿಂದ ಬಹುಮಾನ ಮತ್ತು ಪ್ರಶಂಸೆ ಪತ್ರ ವಿತರಣೆ ನೀಡಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ