ಟ್ರಾಫಿಕ್ ಫೈನ್​ಗೆ ಶೇ 50ರ ರಿಯಾಯಿತಿ; ದಂಡ ಪರಿಶೀಲಿಸುವುದು, ಪಾವತಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ರಿಯಾಯಿತಿಯೊಂದಿಗೆ ದಂಡವನ್ನು ಹೇಗೆ ಪಾವತಿಸಬಹುದು ಮತ್ತು ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಟ್ರಾಫಿಕ್ ಫೈನ್​ಗೆ ಶೇ 50ರ ರಿಯಾಯಿತಿ; ದಂಡ ಪರಿಶೀಲಿಸುವುದು, ಪಾವತಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Prajwal D'Souza
| Updated By: Ganapathi Sharma

Updated on:Jul 06, 2023 | 5:00 PM

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ (Traffic Fine Discount) ಬಾಕಿ ಉಳಿಸಿಕೊಂಡಿರುವವರಿಗೆ ಕರ್ನಾಟಕ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಮತ್ತೆ ಅವಕಾಶ ನೀಡಿದೆ. ಇದಕ್ಕೆ ಸೆಪ್ಟೆಂಬರ್ 9 ರ ಗಡುವನ್ನೂ ನಿಗದಿಪಡಿಸಿದೆ. ಶೇ 50ರ ಈ ತಾತ್ಕಾಲಿಕ ರಿಯಾಯಿತಿಯು ಫೆಬ್ರವರಿ 2023 ರ 11ರ ಮೊದಲು ದಾಖಲಾದ ಬಾಕಿ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಿಯಾಯಿತಿಯೊಂದಿಗೆ ದಂಡವನ್ನು ಹೇಗೆ ಪಾವತಿಸಬಹುದು ಮತ್ತು ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

  • ಕರ್ನಾಟಕ ರಾಜ್ಯ ಪೊಲೀಸ್ (KSP) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು
  • ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ, ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ನಮೂದಿಸುವ ಮೂಲಕ ಬಾಕಿ ಪಾವತಿಯನ್ನು ಮಾಡಬಹುದು
  • ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡುವ ಮೂಲಕ ದಂಡ ಪಾವತಿಸಬಹುದು
  • ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಬಾಕಿ ಇರುವ ಅಪರಾಧಗಳ ವಿವರಗಳನ್ನು ಪಡೆದು ನಂತರ ದಂಡವನ್ನು ಪಾವತಿಸಬಹುದು

ಜುಲೈ 6 ಮತ್ತು ಸೆಪ್ಟೆಂಬರ್ 9 ರ ನಡುವೆ ಬಾಕಿಯನ್ನು ಪಾವತಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-22942883 ಅಥವಾ 080-22943381 ಅನ್ನು ಸಂಪರ್ಕಿಸಬಹುದು ಎಂದೂ ಅವರು ಹೇಳಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Traffic Fine Discount: ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ 50ರಷ್ಟು ರಿಯಾಯಿತಿ

ಕರ್ನಾಟಕ ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ರಿಯಾಯಿತಿಯನ್ನು ನೀಡುತ್ತಿರುವುದು ಇದು ಮೂರನೇ ಬಾರಿ ಆಗಿದೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಅದೇ ರಿಯಾಯಿತಿಯನ್ನು ನೀಡಲಾಗಿತ್ತು. ಆ ಬಳಿಕ ಬೆಂಗಳೂರು ಟ್ರಾಫಿಕ್ ಪೊಲೀಸರು 120 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ್ದರು. ಬಳಿಕ ಮಾರ್ಚ್‌ನಲ್ಲಿ ಮತ್ತೆ 15 ದಿನಗಳ ಕಾಲ ರಿಯಾಯಿತಿ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Thu, 6 July 23